ಬೆಳಗಾವಿ ಜಿಲ್ಲೆಯ ಕಪಿಲೇಶ್ಚರ ಮಂದಿರದ ಬಳಿ ಓರ್ವ ಮಹಿಳೆ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಗಾಯಾಳು ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ ಕೃತ್ಯ ನಡೆದಿದೆ. ಪ್ರಥಮೇಶ್ ಆ್ಯಸಿಡ್ ದಾಳಿಗೊಳಗಾದ ಯುವಕ.
ಅರ್ಚಕ ರಾಮಾ ಪೂಜಾರಿ ಹಾಗೂ ಪ್ರಥಮೇಶ್ ನಡುವೆ ಜಗಳ ನಡೆದಿದ್ದು, ಭಕ್ತರ ಜೊತೆ ಅರ್ಚಕನ ಅನುಚಿತ ವರ್ತನೆ ಬಗ್ಗೆ ಪ್ರಥಮೇಶ್ ನಾನಾ ಬಾರಿ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕನ ಸಹೋದರಿ ಪ್ರಥಮೇಶ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ.
ಪ್ರಥಮೇಶ್ ಕೈಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.