ಪ್ರೇಯಸಿ ತನ್ನ ಪ್ರಿಯಕರನನ್ನು ಕೊಲೆಗೈದ ಘಟನೆ ಬೆಂಗಳೂರಿನ ಪೀಣ್ಯಾದ ಚಿಕ್ಕಬಿದರಕಲ್ಲುವಿನಲ್ಲಿ ನಡೆದಿದೆ.
ರಘು( 32) ಕೊಲೆಯಾದವ. ಈತ ರೂಪಾಳ ಮಗಳನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದರಿಂದ ಕೋಪಗೊಂಡ ರೂಪ ರಘುವನ್ನು ಕೊಂದಿದ್ದಾಳೆ ಎನ್ನಲಾಗಿದೆ.

ರಘು ಮತ್ತು ರೂಪಾಳ ಗಂಡ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಪ್ರಭು ಜಾತ್ರೆಗೆಂದು ತಿಪಟೂರಿಗೆ ಹೋದಾಗ ರಘು ರೂಪಳ ಮನೆಗೆ ಬಂದಿದ್ದ. ಆಗ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರೂಪ ರಘುವಿನ ಹೊಟ್ಟೆ, ಕಿವಿ ಮತ್ತು ಕುತ್ತಿಗೆ ಕತ್ತರಿಸಿ ಕೊಂದಿದ್ದಾಳೆ.



