ಪ್ರೀತಿ ಮಾಯೆ ಹುಷಾರು..! ನೀವು ಎಷ್ಟೋ ಹುಚ್ಚು ಪ್ರೀತಿಯ ಕತೆಗಳನ್ನು ಕೇಳಿರ್ತೀರಿ, ಓದಿರ್ತೀರಿ, ನೋಡಿರ್ತೀರಿ. ಆದ್ರೆ, ಇಂಥಾ ಪ್ರೇಮಕತೆಯನ್ನು ಎಂದೂ ಕೇಳಿಲ್ಲ, ನೋಡಿಲ್ಲ, ಓದಿಲ್ಲ..! ಇದು ಬೆಂಗಳೂರಿನಲ್ಲಿ ನಡೆದಿರೋ ರಿಯಲ್ ಸ್ಟೋರಿ..!
ಜೆಪಿ ನಗರದ ಖಾಸಗಿ ಶಾಲೆಯೊಂದರ ಮುಖ್ಯಶಿಕ್ಷಕಿ ಅನುರೂಪ..! ಸುಮಾರು 40 ವರ್ಷ ವಯಸ್ಸು. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ತರುಣ್. ಅವನಿಗೆ 20ರ ಹರೆಯ..! ಇವರಿಬ್ಬರ ನಡುವೆ ಅದ್ಯಾವಾಗ ಪ್ರೀತಿ ಉಂಟಾಯ್ತೋ.. ಗೊತ್ತಿಲ್ಲ..! ಇದೀಗ ಅದು ಮುರಿದು ಬಿದ್ದಿದೆ..! ತಾಯಿ ವಯಸ್ಸಿನ ಆಕೆಯನ್ನೇ ಮದುವೆ ಆಗಬೇಕೆಂದು ಪಾಗಲ್ ಪ್ರೇಮಿ ಹಠ ಹಿಡಿದಿದ್ದಾನೆ..! ಕೈ ಕೊಯ್ದುಕೊಂಡು ರಂಪಾಟ ಮಾಡಿಕೊಂಡಿದ್ದಾನೆ..!
ತಂದೆ-ತಾಯಿ ಇಲ್ಲದ ಯುವಕ ತರುಣ್. ಎಸ್‍ಎಸ್‍ಎಲ್‍ಸಿ ಫೇಲ್ ಆಗಿದ್ದ ಈತ ಜೀವನ ನಿರ್ವಹಣೆಗಾಗಿ ಜೆಪಿ ನಗರದ ಖಾಸಗಿ ಶಾಲೆಯೊಂದರಲ್ಲಿ ಸ್ವಾಗತಗಾರನಾಗಿ ಸೇರಿದ್ದ..! ಇದೇ ಶಾಲೆಯ ಮುಖ್ಯಶಿಕ್ಷಕಿ ಅನುರೂಪ. ಇವರು ಇಬ್ಬರು ಮಕ್ಕಳ ತಾಯಿ. ಪತಿಯಿಂದ ದೂರವಿರೋ ಇವರಿಗೆ ತರುಣ್ ಜೊತೆಗೆ ಆತ್ಮೀಯತೆ ಬೆಳೆಯುತ್ತೆ..! ಬರುಬರುತ್ತಾ ತರುಣ್ ಅನುರೂಪ ಮನೆಯಲ್ಲೇ ವಾಸವಿರಲು ಆರಂಭಿಸಿದ್ದಾನೆ..! ಅನುರೂಪ ತಮ್ಮ ಮಕ್ಕಳಿಗೆ ತರುಣ್‍ನನ್ನು ಸಹೋದರ ಅಂತ ಪರಿಚಯ ಮಾಡಿಕೊಟ್ಟಿದ್ರಂತೆ..! ಹೆಚ್ಚು ಕಡಿಮೆ ಒಂದು ವರ್ಷದಿಂದ ಒಂದೇ ಮನೆಯಲ್ಲಿ ಇದ್ದ ಇವರ ನಡುವೆ ಇದ್ದಕ್ಕಿದ್ದಂತೆ ಮನಸ್ತಾಪ ಉಂಟಾಗಿದ್ದು, ಅನುರೂಪ ತರುಣ್‍ನನ್ನು ದೂರವಿಟ್ಟಿದ್ದಾರೆ. ಇದರಿಂದ ನೊಂದಿರೋ ತರುಣ್ ಕೈ ಕೊಯ್ಕೊಂಡು ಆತ್ಮಹತ್ಯೆ ಯತ್ನ ನಡೆಸಿದ್ದಾನೆ. ಮಾಧ್ಯಮಗಳ ಮುಂದೆ ಹೋಗಿ ತನ್ನ ನೋವಿನ ಕತೆಯನ್ನು ಹೇಳಿಕೊಳ್ಳುತ್ತಿದ್ದಾನೆ. ನಿತ್ಯ ರಾತ್ರಿ ಅಳುತ್ತಲೇ ಕಾಲ ಕಳೀತೀನಿ ಅಂತಿದ್ದಾನೆ. ಅನುರೂಪ ಇಲ್ಲದ ಬದುಕು ಕಷ್ಟ ಅಂತಿದ್ದಾನೆ..!
ನನ್ನನ್ನು ಸಮಾಜ ಕೆಟ್ಟದಾಗಿ ನೋಡ್ತಾ ಇದೆ..! ನಾನಿನ್ನೂ ಅನಾಥಶ್ರಮಕ್ಕೆ ಹೋಗಿ ಸೇರುವೆ ಎಂದು ಹೇಳುತ್ತಿದ್ದಾನೆ.