ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ವ್ಯಕ್ತಿ ಕೋರ್ಟ್ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ.
ರಾಜಾಜಿ ನಗರದ , ಪ್ರಕಾಶ್ ನಗರದ ಪದ್ಮನಾಭ್ ಎಂಬಾತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದವ. ನಾರಾಯಣ್ ರಾವ್ ಎಂಬಾತನ ಬಳಿ 60 ಸಾವಿರ ಸಾಲ ಪಡೆದಿದ್ದೆ ಅಂತ ಪದ್ಮನಾಭ್ ಹೇಳುತ್ತಿದ್ದಾನೆ. ಆದ್ರೆ ನಾರಾಯಣ್ ಎಂಬಾತ ೪ ಲಕ್ಷ ಹಣ ಕೊಟ್ಟಿದ್ದೆ ಅಂತ ಕೋರ್ಟ್ ಮೊರೆ ಹೋಗಿದ್ದರು.
ಕೊನೆಗೆ ಕೋರ್ಟ್ 4.5 ಲಕ್ಷ ಹಣವನ್ನು ಕೊಡುವಂತೆ ನಿನ್ನೆ ತೀರ್ಪು ನೀಡಿತ್ತು.ಕೋರ್ಟ್ ತೀರ್ಪಿನಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.