ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಸುಬ್ಬಣ್ಣ ಪಾಳ್ಯದ ಪಾಪಯ್ಯ ಲೇಔಟ್ ನಲ್ಲಿ ನಡೆದಿದೆ.
ಜಾನ್ ಅಸಭ್ಯವಾಗಿ ವರ್ತಿಸಿದಾತ. ಏಳು ವರ್ಷದ ಹಿಂದೆ ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೂ ಸಹ ಆತನನ್ನು ಪ್ರೀತಿಸ್ತಿದ್ದಳು. ಆದರೆ, ಇವರ ಪ್ರೀತಿ ಮುರಿದು ಬಿದ್ದಿತ್ತು. ಜಾನ್ ಅವಳನ್ನು ಬಿಡದೇ ಪ್ರೀತಿಸುವಂತೆ ಬಲವಂತ ಮಾಡಿದ್ದಾನೆ.

ಅವನ ಪ್ರೀತಿಯನ್ನು ಆಕೆ ತಿರಸ್ಕರಿಸಿದ್ದಕ್ಕೆ ಅವಳ ಮುಂದೆ ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ. ಚಾಕು ಇರಿದು ಹಲ್ಲೆಯನ್ನೂ ಮಾಡಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




