No menu items!
12.3 C
Munich
Thursday, April 30, 2026

ಆರ್ ಜೆಯಾದ ಮಾಸ್ಟರ್ ಆನಂದ್…!

Must read

ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ಆರ್ ಜೆ ಆಗಿದ್ದಾರೆ…! ಬಾಲ್ಯದಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಆನಂದ್ ಸಧ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಒಂದು ಕಡೆ ಜೀ ವಾಹಿನಿಯ ‘ಕಾಮಿಡಿ ಕಿಲಾಡಿಗಳು-2’ ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದಾರೆ. ಇನ್ನೊಂದು ಕಡೆ ‘ನಿಗೂಢ ರಾತ್ರಿ’ ಧಾರವಾಹಿ ನಿರ್ದೇಶನ ಮಾಡ್ತಿದ್ದಾರೆ.


ಈ ನಡುವೆ ಈಗ ಆರ್ ಜೆಯಾಗಿ ಕೇಳುಗರನ್ನು ಖುಷಿಪಡಿಸಲು ಬರ್ತಿದ್ದಾರೆ. ‘ನಮ್ ರೇಡಿಯೋ’ ದಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಸಾರಥ್ಯವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ. ಆರ್ ಜೆಯಾಗಲು ಆನಂದ್ ಒಪ್ಪಿಕೊಂಡಿದ್ದಾರಂತೆ. ಹಿಂದೊಮ್ಮೆ ಆನಂದ್ ‘ನಮ್ ರೇಡಿಯೋದಲ್ಲಿ’ ಹೊಸವರ್ಷದ ವಿಶೇಷ ಕಾರ್ಯಕ್ರಮ‌ ನಡೆಸಿಕೊಟ್ಟಿದ್ದರು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದೀಗ ಮತ್ತೆ ಆರ್ ಜೆಯಾಗಿ ಅಭಿಮಾನಿಗಳನ್ನು ಖುಷಿಪಡಿಸಲು ಸಿದ್ಧರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article