ದುಷ್ಕರ್ಮಿಗಳು ಅಪರಿಚಿತ ಯುವಕನೊಬ್ಬನನ್ನು ಕೊಂದು ಬಳಿಕ ಸುಟ್ಟು ಹಾಕಲು ಪ್ರಯತ್ನಿಸಿದ ಘಟನೆ ಬೆಂಗಳೂರಿನ ಮಾರತಹಳ್ಳಿ ಬಳಿ ನಡೆದಿದೆ.
ಮೃತ ಯುವಕನ ವಯಸ್ಸು ಸುಮಾರು 25ಎಂದು ಅಂದಾಜಿಸಲಾಗಿದೆ. ಬೇರೆಡೆ ಕೊಲೆಮಾಡಿ ಶವ ತಂದು, ಗುರುತು ಸಿಗದಂತೆ ಮಾಡಲು ಸುಟ್ಟು ಹಾಕಲು ಯತ್ನಿಸಿದ್ದಾರೆ. ಭಾಗಶಃ ಸುಟ್ಟಿರುವುದರಿಂದ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.