ಮಾತು ಬರದ, ಕಿವಿ ಕೇಳದ ಯುವತಿ ಮೇಲೆ ಸೋದರ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಭಾರತಿನಗರ ಪೊಲೀಸ್ ಮಹಲಿನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ್ ಎಚ್ (23) ಬಂಧಿತ. ಮೂಲತಃ ಕೊಳ್ಳೆಗಾಲದವನಾದ ಈತ ಶಿವಾಜಿ ನಗರದ ಹಾರ್ಡ್ ವೇರ್ ಶಾಪ್ ಒಂದರಲ್ಲಿ ಕೆಲಸ ಮಾಡ್ತಿದ್ದ. ಈತ ಸಂತ್ರಸ್ತೆಯ ಮನೆಯಲ್ಲೇ ಕಳೆದ ನಾಲ್ಕು ತಿಂಗಳಿಂದ ವಾಸವಿದ್ದ. ಒಂದು ದಿನ ಸಂತ್ರಸ್ತ ಯುವತಿಯೊಬ್ಬಳೇ ಮನೆಯಲ್ಲಿ ರುವಾಗ ಅತ್ಯಾಚಾರ ಎಸಗಿದ್ದಾನೆ. ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ ಮತ್ತು ಯಾರಿಗೂ ತಿಳಿಸಿದಂತೆ ಬೆದರಿಕೆಯೊಡ್ಡಿದ್ದ ಎಂದು ಹೇಳಳಾಗ್ತಿದೆ.
ಯುವತಿಯಲ್ಲಿ ಅಸಹಜ ಬದಲಾವಣೆಗಳು ಕಾಣಲಾರಂಭಿಸಿದಾಗ ತಾಯಿ ವಿಚಾರಿಸಿದ್ದಾರೆ. ಆಗ ಸಂತ್ರಸ್ತೆ ಮೂಕ ಸನ್ನೆಯ ಮೂಲಕ ಎಲ್ಲವನ್ನು ವಿವರಿಸಿದ್ದಾಳೆ.
ಸಂತ್ರಸ್ತೆಯ ತಾಯಿ ಏಪ್ರಿಲ್ 10ರಂದು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಮಹೇಶ್ ತನ್ನೂರು ಕೊಳ್ಳೆ ಕಾಲಕ್ಕೆ ಪರಾರಿಯಾಗಿದ್ದ. ಪೊಲೀಸರು ಈತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.