ದೀಪಾವಳಿ ಸಂಭ್ರಮದ ನಡುವೆ ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ. ವರ್ತೂರು ಹತ್ತಿರದ ಪಣತ್ತೂರಿನಲ್ಲಿ ಕಿಡಿಗೇಡಿಗಳು ಬೇಕಂತಲೇ ಮನೆಯ ಮೇಲೆ ಪಟಾಕಿ ಎಸೆದಿದ್ದಾರೆ.
ಆ ಪಟಾಕಿಯ ಸ್ಫೋಟಕ್ಕೆ ಮನೆಯ ಮೇಲ್ಚಾವಣಿ, ಮನೆಯೊಳಗಿದ್ದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.
ವೆಂಕಟೇಶ್ ಎಂಬುವವರ ಮನೆ ಮೇಲೆ ಕಿಡಿಗೇಡಿಗಳು ಪಟಾಕಿ ಎಸೆದಿದ್ದು.
ಘಟನೆಯಲ್ಲಿ ವೆಂಕಟೇಶ್ ಅವರ ತಾಯಿ ರಾಜಮ್ಮ ಮತ್ತು ಪುತ್ರ ಮೋನಿತ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ವೆಂಕಟೇಶ್ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.