ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!

Date:

ಸ್ನೇಹಿತರೆಂದರೆ ಯಾರು?… ದುಡ್ಡಿರುವವರೆಗೂ ಮೋಜು ಮಸ್ತಿ ಮಾಡಿಕೊಂಡು ಆಮೇಲೆ ನಡುನೀರಿನಲ್ಲಿ ಕೈ ಬಿಡುವವರೇ? ಅಥವಾ ಚೆನ್ನಾಗಿದ್ದಾಗ ತಮ್ಮ ಜೊತೆಯಲ್ಲಿ ಸುತ್ತಾಡುತ್ತಾ ಕಷ್ಟ ಅಂತ ಬಂದಾಗ ಏನೂ ಗೊತ್ತಿಲ್ಲದ ಹಾಗೆ ಸರಗಿಕೊಳ್ಳುವವರೇ?.. ಇಲ್ಲ ಕಷ್ಟ ಸುಖಗಳೆರಡರಲ್ಲೂ ಜೊತೆಯಾಗಿ ಕೈಯಿಡಿದು ದಾರಿ ತೋರಿಸುವವರೇ..? ಈಗಿನ ಕಾಲದಲ್ಲಿ ಈ ಎಲ್ಲಾ ರೀತಿಯ ಸ್ನೇಹಿತರು ಸರ್ವೇ ಸಾಮಾನ್ಯವಾಗಿ ಕಾಣಸಿಗುತಾರೆ ಬಿಡಿ.
ಅದರಲ್ಲೂ ಬೆಂಗಳೂರಂತಹ ಮಹಾ ನಗರಗಳಲ್ಲಿ ಯಾರನ್ನು ನಂಬಬೇಕೋ, ಯಾರನ್ನು ನಂಬಬಾರದೋ ಅಂತ ಯಾರಿಗೂ ಗೊತ್ತಿಲ್ಲ. ಅಂತಹ ವಿಚಿತ್ರಗಳು ಇಲ್ಲಿ ಕಾಣಸಿಗುತ್ತಾರೆ. ಮಾನವೀಯತೆಯನ್ನೇ ಮರೆತ ಈ ಪ್ರದೇಶದಲ್ಲಿ ಸುಮಾರು 6 ವರ್ಷಗಳ ಕಾಲ ತನ್ನ ಗೆಳತಿಗೆ ಕಣ್ಣಾಗಿ ನೋಡಿಕೊಳ್ಳುತ್ತಿದ್ದಾಳೆ ಇಲ್ಲೊರ್ವ ಯುವತಿ.
ಬೆಂಗಳೂರು ನನಗೆ ಹೊಸ ಪ್ರದೇಶ. ಹಳ್ಳಿಯಲ್ಲಿ ಬೆಳೆದ ನಾನು ಬೆಂಗಳೂರೆಂಬ ದೊಡ್ಡ ಊರು ನನಗೆ ಒಗ್ಗಿಕೊಳ್ಳಲು ಸ್ವಲ್ಪ ದಿನಗಳೇ ಹಿಡಿಯ ಬೇಕಾಯಿತು, ಹೊಸ ಮುಖಗಳು, ಮಾಡರ್ನ್ ಜನರು, ಗಗನಚುಂಬಿ ಕಟ್ಟಡಗಳು, ಅದನ್ನು ನೋಡುತ್ತಲೇ ನನ್ನ ತಲೆ ಗಿರ್ರ್ ಅಂತ ತಿರುಗುತ್ತಿತ್ತು. ಯಾರನ್ನೇ ಮಾತನಾಡಿಸಲು ಹೋದರೂ ತಮ್ಮ ಪಾಡಿಗೆ ತಾನಿರುತ್ತಿದ್ರು ಮಾತನಾಡಿದರೆ ಮುತ್ತುದುರುತ್ತೆ ಅನ್ನೋ ಜನ ಇಲ್ಲಿ.
ಕೆಲಸಕ್ಕೆ ಸೇರಿದ ಮೊದಲ ದಿನ.. ನಾನು ಕೋರಮಂಗಲದಿಂದ ಬ್ರಿಗೇಡ್ ರೋಡ್‍ಗೆ ಬಸ್ ಗಾಗಿ ಕಾಯ್ತಾ ಇದ್ದೆ. ಅದೇ ಬಸ್‍ಸ್ಟಾಂಡ್‍ನಲ್ಲಿ ಕೆಲವು ಹುಡುಗಿಯರ ಗುಂಪು ಪಿಸು ಪಿಸು ಮಾತನಾಡುತ್ತಾ ಇದ್ರು. ಆ ಗುಂಪಿನಲ್ಲೇ ಇದ್ಲು ಒಬ್ಬ ದೃಷ್ಠಿ ಹೀನ ಯುವತಿ. ಆಕೆಯನ್ನು ನೋಡಿದ್ದೇ ಮನಸ್ಸು ಅಯ್ಯೋ ಎಂದನಿಸಿತ್ತು. ಆದರೆ ಆಕೆ ತಾನು ಕುರುಡಿ ಅಲ್ಲ ಎಂಬ ರೀತಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳ ರೀತಿಯಲ್ಲಿಯೇ ಮಾತನಾಡ್ತಾ ಇದ್ಲು. ನಾನು ಅವರನ್ನೇ ನೋಡುತ್ತಾ ಅವರ ಮಾತುಳನ್ನೇ ಆಲಿಸುತ್ತಾ ಇರುವಾಗ್ಲೇ ಬಸ್ಸು ಸಹ ಬಂದೇ ಬಿಡ್ತು ನೋಡಿ.. ಅವರನ್ನ ಸ್ನೇಹಿತರು ಕರೆದುಕೊಂಡು ಹೋಗ್ತಾರೇನೋ ಅಂತ ನಾನು ಹಾಗೇ ಬಸ್ ಹತ್ತಿದೆ. ಆದರೆ ಆಕೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸ್ನೇಹಿತರು ಬಸ್ ಹತ್ತಿಯೇ ಬಟ್ಟರು ಅಯ್ಯೋ ಇವರೇಕೆ ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟರು ಎಂದು ಮನಸ್ಸು ಕೇಳದೇ ನಾನು ಆ ಬಸ್ಸಿಂದ ಕೆಳಗಿಳಿದು ಅವರ ಬಳಿ ಹೋಗಿ ನಿಂತೆ. ಸುಮಾರು ಹದಿನೈದು ನಿಮಿಷಗಳ ಕಾಲ ಏನನ್ನೂ ಮಾತನಾಡದೇ ಅವರ ಹಿಂದಯೇ ನಿಂತೆ.
ಸ್ವಲ್ಪ ಹೊತ್ತಲ್ಲೇ ದೂರದಿಂದ ಒಬ್ಬ ಯುವತಿ ವೇಗವಾಗಿ ನಡೆಯತ್ತಾ ಸೀದಾ ಆ ಕಣ್ಣು ಕಾಣದ ಯುವತಿಯ ಬಳಿ ಬಂದು ಸಾರಿ ಕಣೇ ಲೇಟಾಯ್ತು ಸಾರಿ ಎಂದು ಹೇಳುವಾಗ, ಎಷ್ಟೊತ್ತೆ ಕಾಯೋದು ನಿಂಗೆ ಸ್ವಲ್ಪನಾದರೂ ನನ್ನ ಮೇಲೆ ಕೇರ್ ಇದಿಯೇನೆ ನಿಂಗೆ ಅಂತ ಈಕೆ ಬಯ್ಯಲು ಆರಂಭಿಸಿದಾಗ ನನಗೆ ನಗು ತಡೆಯಲಾಗಲಿಲ್ಲ. ಅವರ ಬಳಿ ಹೋಗಿ ಇವರು ನಿಮ್ಮ ಅಕ್ಕನಾ ತಂಗಿನ ಈ ರೀತಿ ಜೋರು ಮಾಡ್ತಾ ಇದಾರಲ್ಲಾ ಅಂತ ಕೇಳಿದಾಗ.. ಅಣ್ಣ ಈಕೆ ನನ್ನ ಗೆಳತಿ ಅಂದಾಗ ಒಂದು ಕ್ಷಣ ಮೂಖನಾಗಿ ಹೋದೆ. ಕಣ್ಣಿದ್ದರೂ ಕಾಣದಂತೆ ಹೋಗುವ ಇವತ್ತಿನ ಸ್ನೇಹಿತರಿಗೆ ಇವರಿಬ್ಬರು ಒಂದು ಮಾದರಿ. ಸುಮಾರು ಆರು ವರ್ಷಗಳಿಂದ ಇವರಿಬ್ಬರೂ ಸ್ನೇಹಿತರೆಂದು ಗೊತ್ತಾಯಿತು. ಆ ಅಂಧ ಯುವತಿಯ ಎರಡು ಕಣ್ಣುಗಳಂತೆ ಇರುವ ಈ ಗೆಳತಿ ಆಕೆಯನ್ನು ತನ್ನ ಒಡ ಹುಟ್ಟಿದವಳಂತೆ ನೋಡಿಕೊಳ್ಳುತ್ತಿದ್ದಾಳೆ. ಆಕೆಯ ಪ್ರತಿಯೊಂದು ಹೆಜ್ಜೆಗೂ ಗೆಳತಿಯ ಸಹಕಾರ ಇದೆ ನೋಡಿ.. ಗೆಳೆತನ ಎಂದರೆ ಹೇಗಿರಬೇಕು ಅನ್ನೋದಕ್ಕೆ ಇವರಿಬ್ಬರು ಸೂಕ್ತ ನಿದರ್ಶನ.

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!

ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!

ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...