ಬೇಟಿ ಬಚಾವೋ ಆಂದೋಲನ: ಮೋಡಿ ಮಾಡಿದರು ‘ಬೈಕಿಂಗ್ ಕ್ವೀನ್ಸ್’

Date:

ಪುರುಷರೇ ಇನ್ಮುಂದೆ ದ್ವಿಚಕ್ರ ವಾಹನಗಳು ನಿಮಗೆ ಮಾತ್ರ ಸ್ವಂತವಲ್ಲ.. ಇಲ್ಲಿದ್ದಾರೆ ನೋಡಿ ಪುರುಷರನ್ನೂ ನಾಚಿಸುವಂರಹ ನಾಲ್ಕು ಮಹಿಳಾ ಬೈಕ್ ರೈಡರ್‍ಗಳು.
ಇವರು ಸುತ್ತಿದ್ದು ಏಷ್ಯಾದ ಸುಮಾರು 10 ದೇಶಗಳು. ಪ್ರಯಾಣ ಬೆಳೆಸಿದ್ದು ಬರೋಬ್ಬರಿ 10 ಸಾವಿರ ಕಿ.ಮೀ. ಮಾಡಿದ್ದು ‘ಬೇಟಿ ಬಚಾವೋ ಬೇಟಿ ಪಡಾವೋ’ ಆಂದೋಲನ.

beti-bachao-bikers
ಹೌದು.. ಪ್ರಧಾನ ಮಂತ್ರಿಯ ಈ ಯೋಜನೆಯನ್ನು ದೇಶದ ಮೂಲೆ ಮೂಲೆಗೂ ಪಸರಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಸಾಮಥ್ರ್ಯದ ಕುರಿತಾಗಿ ಪ್ರಚಾರ ಆಂದೋಲನ ಆರಂಭಿಸಿದ ನಾಲ್ಕು ಮಹಿಳಾ ಮಣಿಗಳಾದ ಡಾ. ಸಾರಿಕಾ ಮೆಹ್ತಾ, ಯುಗ್ಮಾ ದೇಸಾಯ್, ದುರಿಯಾ ತಪಿಯಾ ಮತ್ತು ಖ್ಯಾತಿ ದೇಸಾಯ್ ಬೈಕ್ ರೈಡ್ ಮೂಲಕ ಮಹತ್ತರದ ಸಾಧನೆ ಮಾಡಿದ್ದಾರೆ.
ಕೇವಲ 39 ದಿನಗಳಲ್ಲಿ 10 ದೇಶಗಳಿಗೆ ಪ್ರಯಾಣ ಬೆಳೆಸಿ ಯಶಸ್ವಿ ಪಯಣ ಮುಗಿಸಿದ್ದಾರೆ. ಜೂನ್ 6ರಿಂದ ಆರಂಭಗೊಂಡ ಇವರ ಪ್ರಯಾಣ ಕಠ್ಮಂಡುವಿನಿಂದ ಆರಂಭಿಸಿದ ನಾಲ್ಕು ಬೈಕ್‍ಗಳು ಥಾಯ್ಲೆಂಡ್, ನೇಪಾಳ, ಲಾವೋಸ್, ವಿಯೇಟ್ನಾಂ, ಭೂತಾನ್, ಮಯನ್ಮಾರ್, ಸಿಂಗಾಪುರ, ಕಾಂಬೋಡಿಯಾ ಹಾಗೂ ಮಲೆಷಿಯಾವರೆಗೆ ಅಲೆದಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ ನಲ್ಲಿ ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ.
ಈ ಕುರಿತು ಸಂತಸ ಹಂಚಿಕೊಂಡ ಬೈಕಿಂಗ್ ಕ್ವೀನ್ಸ್ ನ ಸಂಪಾದಕಿ ಡಾ. ಸಾರಿಕಾ ಮೆಹ್ತಾ, “ ಮೋಟಾರ್ ಬೈಕ್‍ಗಳು ಕೇವಲ ಪುರುಷರ ಸೊತ್ತಲ್ಲ ಮಸಸ್ಸೊಂದಿದ್ದರೆ ಮಹಿಳೆಯರೂ ಬೈಕ್ ರೈಡಿಂಗ್ ಮೂಲಕ ಸಾಧನೆ ಮಾಡಬಹುದು. ಮಹಿಳೆಯರು ಕೂಡ ಪುರುಷರಷ್ಟೇ ಸಬಲರೆಂದು ಇಡೀ ಜಗತ್ತಿಗೆ ತೋರಿಸಲು ಬಯಸಿದ್ದೆವು” ಎಂದರು.
ಹೆಣ್ಣು ಮಕ್ಕಳ ಶಿಕ್ಷಣ, ಲಿಂಗ ಸಮಾನತೆ, ಹೆಣ್ಣು ಭ್ರೂಣ ಹತ್ಯೆ, ಮಹಿಳಾ ಸಬಲೀಕರಣದಂತಹ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಜಾಥಾ ಕೈಗೊಂಡಿದ್ದೆವು ಎಂದಿದ್ದಾರೆ. ನಂತರ ಯಾತ್ರೆ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

 

POPULAR  STORIES :

ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???

ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!

ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!

ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

Share post:

Subscribe

spot_imgspot_img

Popular

More like this
Related

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...