ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕಳೆದ ವರ್ಷ ನಡೆದಿದ್ದ ಕೋಮುಗಲಭೆಗೆ ಕಾರಣವಾಗಿದ್ದ ಎನ್ನಲಾದ ಎಸ್ ಡಿಪಿಐ ಮುಖಂಡ ಅಶ್ರಫ್ ಕೊಲೆ ಕೇಸಿನ ಆರೋಪಿಗೆ ಕೊಲೆ ಬೆದರಿಕೆ ಬಂದಿದೆ.
ಕಳೆದ 16 ತಿಂಗಳಿಂದ ಜಾಮೀನ ಸಿಗದೆ ಜೈಲಿನಲ್ಲಿದ್ದ ಆರೋಪಿ ಬಜರಂಗದಳದ ಕಾರ್ಯಕರ್ತ ಭರತ್ ಕುಮ್ಡೇಲುಗೆ ಸೋಶಿಯಲ್ ಮೀಡಿಯಾದಲ್ಲಿ ಕೊಲೆಬೆದರಿಕೆ ಹಾಕಲಾಗಿದೆ.
ಭರತ್ ಕೆಲವು ದಿನಗಳಿಂದಷ್ಟೇ ಜಾಮೀನಿನ ಮೇಲೆ ಜೈಲಿಂದ ಹೊರಬಂದಿದ್ದಾರೆ.
ಮಂಗಳೂರು ಮುಸ್ಲಿಮ್ಸ್ ಎನ್ನೋ ಫೇಸ್ ಬುಕ್ ಪೇಜಲ್ಲಿ ಕೊಲೆ ಬೆದರಿಕೆ ಬಂದಿದೆ.
ಸಹೋದರನ ಕೊಲೆಗೆ ಪ್ರತಿಕಾರ ತೀರಿಸುತ್ತೇವೆ.ನಿನ್ನ ಕೌಂಟ್ ಡೌನ್ ಶುರುವಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.