ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ರಂಜಿತ್!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾದ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗಿ ಮಾನಸಾ ಅವರನ್ನೆ ರಂಜಿತ್ ಮದುವೆ ಆಗಿದ್ದಾರೆ. ಡಿಸೈನರ್ ಆಗಿರೋ ಮಾನಸಾ ಮತ್ತು ರಂಜಿತ್ ಅವರ ಮದುವೆ ಜೋರಾಗಿಯೇ ನಡೆದಿದೆ. ಎಲ್ಲ ಶಾಸ್ತ್ರಗಳೊಂದಿಗೆ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದೆ.
ರಂಜಿತ್ ಮತ್ತು ಮಾನಸಾ ಮದುವೆ ಬೆಂಗಳೂರಿನಲ್ಲಿಯೇ ನಡೆದಿದೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಎಚ್.ಪಿ.ಪೆಟ್ರೋಲ್ ಪಂಪ್ ಎದುರು, ಹೊನ್ನೇನಹಳ್ಳಿಯಲ್ಲಿರೋ KSHEMYAA ದಲ್ಲಿಯೇ ಇವರ ಮದುವೆ ನಡೆದಿದೆ. ಗುರು-ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೋಕ್ತವಾಗಿಯೇ ಇವರ ಮದುವೆ ಆಗಿದೆ.
ರಂಜಿತ್ ಮತ್ತು ಮನಸಾ ಮನೆಯಲ್ಲಿ ಮೊನ್ನೆಯಿಂದಲೇ ಮದುವೆ ಶಾಸ್ತ್ರಗಳ ನಡೆದಿವೆ. ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮವೂ ನಡೆದಿದೆ. ಈ ಮದುವೆ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.