ದಯಾಳ್‍ಗೆ ಸುದೀಪ್ ಹೇಳಿದ ಬುದ್ಧಿಮಾತೇನು..? ಈ ವಾರ ಬಿಗ್‍ಬಾಸ್ ಮನೆಯಿಂದ ಹೊರಬಂದ್ರು…?

Date:

ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಬಿಗ್‍ಬಾಸ್ ಸೀಸನ್ 5ರ ಎರಡನೇ ವಾರ ಕಳೆದಿದೆ. 11 ಜನ ಸೆಲಬ್ರಿಟಿಗಳ ಜೊತೆಗೆ 6 ಮಂದಿ ಜನಸಾಮಾನ್ಯರು ಈ ಬಾರಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋದು ವಿಶೇಷವಾಗಿರೋದು ನಿಮಗೆ ಗೊತ್ತೇ ಇದೆ.
ಮೊದಲವಾರ ಎಲ್ಲರೂ ಒಂದಾಗಿದ್ದ ಮನೆಯಲ್ಲಿ ಎರಡನೇ ವಾರದಲ್ಲಿ ಭಿನ್ನಾಭಿಪ್ರಾಯಗಳು ಬುಗಿಲೆದ್ದಿವೆ. ಸೆಲಬ್ರಿಟಿಗಳು ಮತ್ತು ಜನಸಾಮಾನ್ಯರು ಎಂಬ ಎರಡು ಗುಂಪುಗಳಾಗಿ ಬಿಗ್‍ಬಾಸ್ ಮನೆ ಒಡೆದಿದೆ.
ಅಂದಹಾಗೆ ಇಂದು ವಾರದ ಕಥೆ ಕಿಚ್ಚನ ಜೊತೆ ನಡೆಯಿತು. ಮನೆಯ ಸದಸ್ಯರ ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಕಿಚ್ಚ ಒಂದಿಷ್ಟು ಬುದ್ಧಿಮಾತು ಹೇಳಿದರು.

ತಾನೇ ಗ್ರೇಟ್, ತಾನು ಹೇಳಿದ್ದೇ ಆಗಬೇಕೆಂಬ ಅಹಂ ಇರೋ ನಿರ್ದೇಶಕ ದಯಾಳ್ ಪದ್ಮನಾಭನ್‍ಗೆ ಕಿಚ್ಚ ಸುದೀಪ್ ಸಖತ್ ಆಗಿ ಪಾಠ ಮಾಡಿದ್ರು. ನೀವು ಬೇರೆಯವರಿಗೆ ಹೇಳ್ತೀರಿ ವಯಸ್ಸು, ಅವರ ಸಾಧನೆ ತಿಳಿದು ಗೌರವ ಕೊಟ್ಟು ಮಾತಾಡಬೇಕು ಅಂತ. ನೀವು ಕೂಡ ಮುನಷ್ಯತ್ವದಿಂದ ಬೇರೆ ಅವರಿಗೆ ಗೌರವ ಕೊಡಬೇಕಲ್ವೇ ದಯಾಳ್ ಎಂದು ಪ್ರಶ್ನಿಸಿದರು. ಅದಕ್ಕೆ ದಯಾಳ್ ಒಂದಿಷ್ಟು ಕಥೆ ಹೊಡೆದ್ರು.

ನೀವು ಚಂದ್ರು ಅವರ ಪರ ಮಾತಾಡ್ತೀರಿ. ಆದರೆ, ದಿವಾಕರ್ ಪರ ರಿಯಾಜ್ ಮಾತಾಡಿದಾಗ ನೀವು ದಿವಾಕರೇ ಮಾತಾಡ್ಲಿ ನೀನು ಮಾತಾಡ್ಬೇಡ ಅಂತೀರಿ ಎಂದು ಪ್ರಶ್ನಿಸಿದರು. ಏಜಿಗೆ, ಸಾಧನೆಗೆ ಬೆಲೆಕೊಡಬೇಕು ಚಂದ್ರು ಅವರಂತೆ ಜಯಶ್ರೀನಿವಾಸನ್ ಅವರೂ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರೂ ದೊಡ್ಡವರು. ನೀವು ಅವರ ಜೊತೆ ಹೇಗೆ ಮಾತಾಡ್ತೀರಿ ಅರ್ಥಮಾಡಿಕೊಳ್ಳಿ ಎಂದು ದಯಾಳ್‍ಗೆ ಬುದ್ಧಿಮಾತು ಹೇಳಿದ್ರು. ಅದಕ್ಕೆ ದಯಾಳ್ ನನಗೆ ಅವರಿಬ್ಬರ ಸಾಧನೆ ಒಂದೇ ರೀತಿ ಅನಿಸಲ್ಲ.. ಸಮ ಅನಿಸಲ್ಲ ಎಂಬರ್ಥದಲ್ಲಿ ತನ್ನ ಮೊಂಡುತನ ಪ್ರದರ್ಶಿಸಿದ್ರು..! ಕಿಚ್ಚ ಆಗ ಹೆಚ್ಚಿನ ಮಾತನ್ನಾಡಲಿಲ್ಲ. ದಯಾಳ್ ಅವರೇ ನಿಮ್ಮ ಬಗ್ಗೆ ಅಭಿಪ್ರಾಯಗಳು ಫಾರ್ಮ್ ಆಗುತ್ತೆ ಎಂಬುದು ನೆನಪಿರಲಿ ಅಂದರು..!


ಜೊತೆಗೆ ಎರಡನೇವಾರದ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು. ಮೇಘಾ, ಸಮೀರ್ ಆಚಾರ್ಯ, ಜಗನ್, ದಿವಾಕರ್, ಆಶಿತಾ, ಕೃಷಿ, ರಿಯಾಜ್ ದಯಾಳ್ ನಾಮಿನೇಟ್ ಆಗಿದ್ರು.

ಇವರಲ್ಲಿ ಮೇಘಾ ಎಲಿಮಿನೇಟ್ ಆಗಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...