ಬಿಗ್‍ಬಾಸ್ ಸೀಸನ್-4ನ ಮೊದಲ ಲಿಸ್ಟ್ ನಲ್ಲಿ ಯಾರ್ಯಾರಿದಾರೆ ಗೊತ್ತಾ..?

Date:

ಕನ್ನಡ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ಜನ ಮನ್ನಣೆಗಳಿಸಿದ್ದ ಬಿಗ್ ಬಾಸ್ ತನ್ನ ಮೂರು ಆವೃತ್ತಿಯನ್ನು ಮುಗಿಸಿಕೊಂಡು ಇದೀಗ ನಾಲ್ಕನೇ ಆವೃತ್ತಿಯನ್ನು ಆರಂಭಿಸಲು ಸಕಲ ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಇದೀಗ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್‍ಬಾಸ್ ಸೀಸನ್ 4 ಶುರುವಾಗಲು ಕ್ಚಣಗಣನೆ ಶುರುವಾಗಿದೆ. ಕಲರ್ಸ್ ವಾಹಿನಿಯಲ್ಲಿ ಮೂಡಿ ಬರುವ ಈ ಬಿಗ್ ಬಾಸ್ ರಿಯಾಲಿಟಿ ಶೋ ಪ್ಲಾನ್ ಪ್ರಕಾರ ಅಕ್ಟೋಬರ್ ನಲ್ಲಿ ಆರಂಭವಾಗುವ ಎಲ್ಲಾ ಲಕ್ಷಣಗಳೂ ಇವೆ ಎನ್ನುತ್ತಾರೆ ಕೆಲವರು. ಅಷ್ಟೇ ಅಲ್ಲ ಸ್ವಾಮಿ ಈಗಾಗಲೇ ಬಿಗ್ ಬಾಸ್ ಸೀಸನ್ 4 ನಲ್ಲಿ ಭಾಗವಹಿಸುವ ಕನ್ಟೆಸ್ಟೆಂಟ್ ಗಳ ಬಗ್ಗೆ ಕೆಲವು ಊಹಾಪೋಹಗಳು ಕೂಡ ಸಖತ್ ಸುದ್ದಿಯಾಗ್ತಾ ಇದೆ. ಬಲ್ಲ ಮೂಲಗಳ ಪ್ರಕಾರ ಮೊದಲ ಲಿಸ್ಟ್ ನಲ್ಲಿ ಇಂವ್ರು ಇದಾರೆ ಅಂತೆ…
ಗಡ್ಡಪ್ಪ.

13385816_136132863457753_550158829_n
ಏನ್ ನಿನ್ ಪ್ರಾಬ್ಲಮ್ಮು ಅಂತ ಎಲ್ಲರನ್ನು ರಂಜಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಿನೇಮಾದ ರಿಯಲ್ ಹೀರೋ ಮಿಸ್ಟರ್ ಗಡ್ಡಪ್ಪ ಅವರು ಈ ಬಾರಿಯ ಬಿಗ್‍ಬಾಸ್-4 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ
ಸುಧಾರಾಣಿ.

apr1016-news-sanje1
ಸ್ಯಾಂಡಲ್‍ವುಡ್‍ನ ಮೋಸ್ಟ್ ಪಾಪುಲರ್ ಹೀರೋಯಿನ್ ಕನ್ನಡಿಗರ ಮನಗೆದ್ದ ನಟಿ ಸುಧಾ ರಾಣಿ ಅವರೂ ಕೂಡ ಬಿಗ್‍ಬಾಸ್ ಲಿಸ್ಟ್ ನಲ್ಲಿರೋದು ಆಶ್ಚರ್ಯಕರ ಸಂಗತಿ..
ರಾಗಿಣಿ ದ್ವಿವೇದಿ.

ragini-wallpapers-7
ಸ್ಯಾಂಡಲ್‍ವುಡ್‍ನ ಪಡ್ಡೆ ಹುಡುಗರ ಮನಗೆದ್ದ ಬಹು ಬೇಡಿಕೆಯ ನಟಿ ಹಾಗೂ ಪ್ರಸ್ತುತದಲ್ಲಿ ಅತಿ ಹೆಚ್ಚು ಸಂಭಾವನೆ ಗಿಟ್ಟಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಹೆಸರು ಕಳೆದ ಮೂರು ಸೀಸನ್ ನಿಂದ್ಲೂ ಇವರ ಹೆಸರು ಕೇಳಿ ಬರ್ತಾ ಇತ್ತು. ಅದೇ ರೀತಿ ಈ ಬಾರಿಯೂ ಕೂಡ ಅವರ ಹೆಸರು ಮೊದಲ ಲಿಸ್ಟ್ ನಲ್ಲಿದೆ..
ಕೋಮಲ್.

12
ಕಾಮಿಡಿ ಕಿಲಾಡಿ, ನವರಸ ನಾಯಕ ಜಗ್ಗೇಶ್ ಅವರ ಸಹೋದರ ಕೋಮಲ್ ಈ ಬಾರಿ ಬಿಗ್ ಬಾಸ್ 4ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.. ಇವರೇನಾದ್ರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರೆ ಜಗಳ ಅನ್ನೋದೆ ಇರೊಲ್ಲ ಅನ್ಸತ್ತೆ. ಅಷ್ಟೊಂದು ಕಾಮಿಡಿ ಮ್ಯಾನ್ ಈ ಕೋಮಲ್..
ಲೂಸ್ ಮಾದ ಯೋಗಿ.

imgsize-php
ಈಗಾಗಲೇ ಬಿಗ್ ಬಾಸ್ ಸೀಸನ್ ಒಂದರಲ್ಲಿ ಅಥಿತಿಯಾಗಿ ಎಂಟ್ರಿ ಕೊಟ್ಟಿದ್ದ ಲೂಸ್ ಮಾದ ಯೋಗಿ ಈ ಬಾರಿ ಬಿಗ್ ಬಾಸ್ ಸ್ಪರ್ಧಾಳಂತೆ…
ಅನು ಪ್ರಭಾಕರ್.

90
ಇತ್ತಿಚೆಗಷ್ಟೇ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಅನು ಪ್ರಭಾಕರ್ ಬಿಗ್ ಬಾಸ್ 4ನ ಮನೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ತರುಣ್.

7443-tarun-chandra
ಸ್ಯಾಂಡಲ್‍ವುಡ್‍ನಲ್ಲಿ ಇಂಗೆ ಬಂದು ಅಂಗೆ ಹೋದ ನಟ ತರುಣ್ ಹೆಸರು ಈ ಬಾರಿಯ ಬಿಗ್‍ಬಾಸ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದೆ..?
ಪ್ರೀಯಾ ಹಾಸನ್.

priya-hassan-is-rowdy-raani-b852be8d
ಸ್ಯಾಂಡಲ್‍ವುಡ್ ಜಂಬದ ಹುಡುಗಿ ಖ್ಯಾತಿಯ ನಟಿ ಪ್ರೀಯಾ ಹಾಸನ್ ಅವರಿಗೆ ಬಿಗ್ ಬಾಸ್4 ನಲ್ಲಿ ಭಾಗವಹಿಸುವ ಹಂಬಲವಿದೆಯಂತೆ ನೋಡಿ.. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ನಟಿಗೆ ಬಿಗ್ ಬಾಸ್ ಚಾನ್ಸ್ ಕೊಡುತ್ತಾ..? ಕಾದು ನೋಡೋಣ
ತಾರಾ.

13bgkpm_kca_g9k4eou_951084e
ಸಿನಿಮಾ ರಂಗದ ಜೊತೆಯಲ್ಲಿಯೇ ರಾಜಕೀಯ ರಂಗದಲ್ಲೂ ಸದಾ ಸಕ್ರೀಯರಾಗಿರುವ ತಾರಾ ಅನುರಾಧಾ ಬಿಗ್‍ಬಾಸ್ 4 ನಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಅವರ ಹೆಸರಿದೆ. ಆದ್ರೆ ಅವರು ಗ್ರೀನ್ ಸಿಗ್ನಲ್ ಕೊಡ್ಬೇಕಷ್ಟೆ.
ನವೀನ್ ಕೃಷ್ಣ.

18350409
ಬಿಗ್ ಬಾಸ್ ಸೀಸನ್ 4ನ ಫಸ್ಟ್ ಲಿಸ್ಟ್ ನಲ್ಲಿ ಧಿಮಾಕು ಖ್ಯಾತಿಯ ನವೀನ್ ಕೃಷ್ಣ ಅವರ ಹೆಸರೂ ಇದೆ.
ವಿವಾದಕ್ಕೆ ಬ್ರೇಕ್..!
ಗಾಂದಿ ನಗರದಲ್ಲಾಗಿರಬಹುದು ಅಥವಾ ಬೇರಿನ್ಯಾವುದೇ ವಲಯಗಳಲ್ಲಿ ಸದಾ ಕಾಂಟ್ರಿವರ್ಸಿ ಆಗ್ತಾ ಭಾರಿ ಚರ್ಚೆಗೆ ಪಾತ್ರರಾಗ್ತಾ ಇದ್ದವರನ್ನ ಈ ಬಾರಿಯ ಬಿಗ್ ಬಾಸ್ ಕೈಬಿಟ್ಟಿದ್ದಾರೆ.
ಈಗೇಳಿ ಸ್ವಾಮಿ ನಿಮ್ಮ ಫೇವರಿಟ್ ಯಾರು..?
ಬಿಗ್ ಬಾಸ್ ಸೀಸನ್-4ನಲ್ಲಿ ಮೇಲೆ ನೋಡಿರುವಂತೆ ತಾರೆಯರನ್ನ ಬಿಗ್‍ಬಾಸ್ ಮನೆಯೊಳಗೆ ಕಳಿಸಿಕೊಡಬೇಕೆಂದು ಬಿಗ್‍ಬಾಸ್ ಆಲೋಚನೆ ಮಾಡಿದೆ. ಇದ್ರಲ್ಲಿ ನಿಮ್ಗೆ ಯಾರ್ಯಾರ್ ಇರ್ಬೇಕು ಯಾರ್ಯಾರ್ ಇರ್ಬಾರ್ದು ಅಂತ ಬಯಸುತ್ತೀರಾ..? ಹಾಗಿದ್ದಲ್ಲಿ ಕೆಳಗಿರೋ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.. ಯಾರಿಗ್ ಗೊತ್ತು ಸ್ವಾಮಿ.. ಒಂದು ವೇಳೆ ನೀವ್ ಹೇಳಿದ ತಾರೆಯರೇ ಸೆಲೆಕ್ಟ್ ಆದ್ರೆ..?

POPULAR  STORIES :

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!

ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...