ಕಳೆದ ಬಾರಿ ಭಾರತೀಯ ಚಲನಚಿತ್ರ ನಿರ್ಮಾಪಕ ಮಡಳಿಯು ಪಾಕಿಸ್ತಾನದ ತಾರೆಯರಿಗೆ ಹಾಗೂ ತಾಂತ್ರಿಕ ವರ್ಗದವರಿಗೆ ಬಾಲಿವುಡ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವದನ್ನು ನಿಷೇಧಿಸಬೇಕು ಎಂಬ ತೀರ್ಮಾನಕ್ಕೆ ಬಂದ ಬೆನ್ನಲ್ಲೇ ಪಾಕ್ ಕೂಡ ಭಾರತಕ್ಕೆ ಪ್ರತಿಕಾರ ತೀರಿಸಿದೆ.. ಭಾರತೀಯ ಪ್ರಸಾರ ಮಾಧ್ಯಮ ಹಕ್ಕನ್ನು ನಿಷೇಧಿಸುವ ಮೂಲಕ ಯಾವುದೇ ಪೂರ್ವಾಲೋಚನೆ ನೀಡದೇ ನಿರ್ಧಾರ ತೆಗೆದುಕೊಂಡಿದೆ.
ಈ ಹಿಂದೆ ಪಾಕ್ ಶೇ.6ರ ಪ್ರಮಾಣದಲ್ಲಿ ಭಾರತದ ಟೆಲಿವಿಷನ್ ಪ್ರಸಾರ ಮಾಧ್ಯಮ ಹಕ್ಕನ್ನು ನೀಡಲಾಗಿತ್ತು. ಆದರೆ ಇದೀಗ ಪಾಕ್‍ನ ಟೆಲಿವಿಷನ್ ಮಾಧ್ಯಮಗಳು, ಎಫ್‍ಎಂ ರೇಡಿಯೋ ಸ್ಟೇಷನ್‍ಗಳು, ಕೇಬಲ್ ಅಪರೇಟರ್ಸ್‍ಗಳು ಸೇರಿ ಕಡ್ಡಾಯವಾಗಿ ಭಾರತೀಯ ಮಾಧ್ಯಮ ಪ್ರಸಾರ ಹಕ್ಕನ್ನು ನಿಷೇಧಿಸಬೇಕು ಹಾಗೂ ಈ ನೀತಿಯನ್ನು ಕೂಡಲೇ ಪಾಲಿಸಬೇಕು ಎಂದು ತಿಳಿಸಿವೆ. ಈ ಹಿನ್ನಲೆಯಲ್ಲಿ ಇದೇ ತಿಂಗಳ 16ರಂದು ಆರಂಭವಾಗಲಿರುವ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್-10 ರಿಯಾಲಿಟಿ ಶೋ ಪಾಕ್‍ನಲ್ಲಿ ಪ್ರಸಾರಗೊಳ್ಳೋದು ಬಹುತೇಕ ಅನುಮಾನವಾಗಿದೆ.
ಉರಿ ಸೇನಾ ನೆಲೆಯ ಮೇಲೆ ಉಗ್ರರ ಧಾಳಿಯ ನಂತರ ಉಭಯ ರಾಷ್ಟ್ರಗಳಲ್ಲಿನ ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಪಾಕ್‍ನ ಸುದ್ದಿಯನ್ನು ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂದು ಭಾರತ ಸರ್ಕಾರ ನಿರ್ಧಾರ ಮಾಡಿದೆ. ಅಲ್ಲದೇ ಭಾರತದ ಕೆಲವು ರಾಜಕೀಯ ಪಕ್ಷಗಳು ಪಾಕ್‍ನ ಸಿನಿಮಾ ನಟರಿಗೆ ಇಲ್ಲಿ ಅವಕಾಶ ನೀಡವುದು ನಿಷೇಧಿಸಿ ಎಂಬ ನಿರ್ಣಯವನ್ನೂ ಸಹ ಕೈಗೊಂಡಿತ್ತು. ಈ ಹಿನ್ನಲೆಯಲ್ಲಿ ಪಾಕ್ ಕೂಡ ಭಾರತೀಯ ಪ್ರಸಾರ ಮಾಧ್ಯಮವನ್ನು ನಿಷೇಧಿಸಬೇಕು ಎಂದು ಪಿಇಎಂಆರ್‍ಎ ಸೂಚಿಸಿದೆ.
ಕಳೆದ ಸೆ.18ರಂದು ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಪಾಕ್ ಉಗ್ರರು ನಡೆಸಿದ ಧಾಳಿಯಲ್ಲಿ ಭಾರತೀಯ 19 ಸೈನಿಕರು ಸಾವನ್ನಪ್ಪಿದರು. ಇದರ ಪ್ರತಿಕಾರವಾಗಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಪಿಓಕೆ ಯಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಸಫಲರಾಗಿದ್ದರು.
POPULAR STORIES :
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?