ಕನ್ನಡ ಬಿಗ್ ಬಾಸ್ ಸೀಸನ್ 6 ಬಂದೇ ಬಿಟ್ಟಿತು. ಇದೇ 21 ಅಂದ್ರೆ, ವಾರಾಂತ್ಯದಲ್ಲಿ ಬಿಗ್ ಬಾಸ್ ಶುರು.
ಈಗಾಲೇ ಬಿಗ್ ಬಾಸ್ ಕುತೂಹಲ , ನಿರೀಕ್ಷೆ ಹೆಚ್ಚಿದೆ.
ಈ ಬಾರಿ ಸೆಲಬ್ರಿಟಿಗಳಿರಲ್ಲ, ಮಿನಿ ಸೆಲಬ್ರಿಟಿಗಳನ್ನೊಂಡ ಜನಸಾಮಾನ್ಯರ ಶೋ ಆಗಿರಲಿದೆ ಅಂತ ಕಲರ್ಸ್ ಬ್ಯುಸ್ ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರೇ ಹೇಳಿದ್ದಾರೆ.
ಇನ್ನೊಂದು ಸರ್ಪೈಸ್ ಮಹಿಳಾ ಕಂಟೆಸ್ಟೆಂಟ್ ಗಳಿಗೆ ಕಾದಿದೆಯಂತೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗಾಗಿಯೇ ಪ್ರತ್ಯೇಕವಾದ ಮೇಕಪ್ ರೂಂ ಇರಲಿದೆಯಂತೆ. ಈ ರೂಮ್ ನಲ್ಲಿ ಮಹಿಳಾ ಕಂಟೆಸ್ಟೆಂಟ್ ಗಳು ಮಾತ್ರ ಸೇರಿದಾಗ ಏನೆಲ್ಲಾ ಮಾತಾಡ್ತಾರೋ? ಯಾವೆಲ್ಲ ಅಂತೆ-ಕಂತೆ ಕಥೆ ಹೊಡೀತಾರೋ ಕಾದು ನೋಡಬೇಕು.