ಸೆಲಬ್ರಿಟಿಗಳ ಜೊತೆ ಜನಸಾಮಾನ್ಯರು ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋದು ಕನ್ನಡ ಬಿಗ್‍ಬಾಸ್ ಸೀಸನ್5ರ ವಿಶೇಷ. ಮೊದಲವಾರ ಈ ರಿಯಾಲಿಟಿ ಶೂ ಸಪ್ಪೆ ಸಪ್ಪೆ ಅನಿಸಿತ್ತು. ಈಗ ಸ್ವಲ್ಪ ಉಪ್ಪು-ಹುಳಿ-ಖಾರ ಸೇರ್ತಿದೆ. ಆದ್ರೆ, ಇದು ಸೆಲಬ್ರಿಟಿಗಳು ಮತ್ತು ಜನಸಾಮಾನ್ಯರ ನಡುವಿನ ಫೈಟ್ ಆಗಿದೆ..!
ಸೆಲಬ್ರಿಟಿಗಳೆಂಬ ಪಟ್ಟ ಕಟ್ಕೊಂಡು ಬಂದಿರೋರು ಜನಸಾಮಾನ್ಯರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸ್ತಾ ಇದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಶರಣ್, ಚಿಕ್ಕಣ್ಣ ಅಭಿನಯದ ‘ಸತ್ಯ ಹರಿಶ್ಚಂದ್ರ’ ಸಿನಿಮಾದ ನಿರ್ದೇಶಕ ದಯಾಳ್ ಪದ್ಮನಾಭನ್ ಜನಸಮಾನ್ಯ ಸ್ಪರ್ಧಿ ದಿವಾಕರ್ ಹಾಗೂ ರಿಯಾಜ್ ಬಾಷಾ ಮೇಲೆ ಹರಿಹಾಯ್ತಾ ಇದ್ದಾರೆ. ತಾನು ಹೇಳಿದ್ದೇ ಆಗಬೇಕೆಂಬ ರೀತಿ ವರ್ತಿಸ್ತಾ ಇದ್ದಾರೆ. ರಿಯಾಜ್ ಮತ್ತು ದಿವಾಕರ್ ದಯಾಳ್‍ರ ವರ್ತನೆಯಿಂದ ಬೇಸತ್ತು ಮಾತಿಗೆ ತಿರುಗೇಟು ನೀಡ್ತಾ ಇದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ಹೀರೋಯಿಸಂ ತೋರಿಸ್ತಾ ದಯಾಳ್ ಅವರ ಸತ್ಯಹರಿಶ್ಚಂದ್ರ ಚಿತ್ರ ಶಿವನ ಪಾದ ಸೇರಿದೆ..! ಚಿತ್ರದ ಸೋಲಿಗೆ ನಿರ್ದೇಶಕ ದಯಾಳ್ ಅವರೇ ಕಾರಣ ಅಂತ ನಿರ್ಮಾಪಕ ಕೆ. ಮಂಜು ಹೇಳ್ತಿದ್ದಾರೆ. ದಯಾಳ್ ಬಗ್ಗೆ ಅವರಿಗೂ ಅಸಮಾಧಾನವಿದೆ. ಜನಸಾಮಾನ್ಯರನ್ನು ಕಡೆಗಾಣಿಸ್ತಾ ಇರೋದ್ರಿಂದಲೇ ಅವರ ಚಿತ್ರವನ್ನು ನಾವು ಸೋಲಿಸ್ತೀವಿ ಎಂದು ಜನಸಾಮಾನ್ಯರು ಸೋಶಿಯಲ್ ಮೀಡಿಯಾದಲ್ಲಿ ದಯಾಳ್ ವಿರುದ್ಧ ಮಾತಾಡ್ತಿದ್ದಾರೆ.
ಇನ್ನು ಸಿಹಿಕಹಿ ಚಂದ್ರು ಕೂಡ ಜನಸಾಮಾನ್ಯ ದಿವಾಕರ್ ಮೇಲೆ ಆಗಾಗ ರೇಗ್ತಾ ಇದ್ದಾರೆ. ಜಯರಾಂ ಕಾರ್ತಿಕ್, ಜಗನ್, ಅನುಪಮಾ, ತೇಜಸ್ವಿನಿ, ಆಶಿತಾ, ಕೃಷಿ ತಪ್ಪಂಡ ಕೂಡ ಇದರಿಂದ ಹೊರತಾಗಿಲ್ಲ. ಚಂದನ್ ಶೆಟ್ಟಿ ಪರವಾಗಿಲ್ಲ. ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ದಿವಾಕರ್ ಹಾಗೂ ರಿಯಾಜ್‍ಗೆ ಹಿಂದಿಂದ ಸಪೋರ್ಟ್ ಮಾಡ್ತಿದ್ದಾರೆ. ಮೇಘ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.
ಗೊಂಬೆ ಹುಡುಗಿ ನಿವೇದಿತಾ ಅವಳಾಯ್ತು ಅವಳ ಪಾಡಾಯ್ತು ಅಂತ ಇದ್ದಾರೆ. ಬಿಗ್‍ಬಾಸ್ ಮನೆಯ ಮುದ್ದಿನ ಮಗಳಾಗಿದ್ದಾಳೆ.