ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ಬಿಗ್‍ಬಾಸ್ ಸೀಸನ್-4 ರಿಯಾಲಿಟಿ ಶೋ ಮುಗಿಯೋಕೆ ಇನ್ನೇನು ಒಂದು ವಾರ ಮಾತ್ರ ಬಾಕಿ ಉಳಿದಿವೆ. ಈ ಬಾರಿಯ ಪ್ರಶಸ್ತಿ ಪಟ್ಟ ಯಾರ ಮುಡಿಗೇರುತ್ತೋ..? ಅನ್ನೋ ಕುತೂಹಲ ಮನೆಯ ಸದಸ್ಯರ ಜೊತೆಗೆ ಬಿಗ್‍ಬಾಸ್ ವೀಕ್ಷಕರಲ್ಲೂ ಕಾಡ್ತಾ ಇರೋದು ಸಾಮಾನ್ಯ ಸಂಗತಿ. ಇದರ ನಡುವೆ ಈ ಬಾರಿಯ ಬಿಗ್‍ಬಾಸ್ ಗ್ರಾಂಡ್ ಫಿನಾಲೆಗೆ ಗೆಸ್ಟ್ ಯಾರಿರ್ಬೋದು ಅನ್ನೋ ಕುತೂಹಲನೂ ಕೂಡ ಇದೆ. ಕಳೆದ ಮೂರು ಸೀಸನ್‍ನಲ್ಲೂ ಹೆಸರಾಂತ ಗೆಸ್ಟ್ ಬಂದಿರೋದು ನೀವೆಲ್ಲಾ ನೋಡೆ ಇರ್ತೀರ. ಅಷ್ಟೆ ಯಾಕೆ ಕಳೆದ ಬಾರಿಯ ಬಿಗ್‍ಬಾಸ್ ವಿನ್ನರ್ ಅನೌನ್ಸ್ ಮಾಡಿದ್ದೂ ಕೂಡ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಅವ್ರು. ಅದೇ ರೀತಿ ಈಗ ಬಿಗ್‍ಬಾಸ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಏಕೈಕ ಪ್ರಶ್ನೆ ಏನಂದ್ರೆ ಈ ಬಾರಿಯ ಬಿಗ್‍ಬಾಸ್ ಗ್ರಾಂಡ್ ಫಿನಾಲೆಯ ಚೀಫ್ ಗೆಸ್ಟ್ ಯಾರು ಅನ್ನೋ ಕುತೂಹಲ ಎಲ್ಲರ ಮನಸ್ಸಿನಲ್ಲೂ ಕಾಡ್ತಾ ಇದೆ..?
ಇನ್ನೇನು ಬಿಗ್‍ಬಾಸ್ ಫಿನಾಲೆಗೆ ಒಂದೇ ವಾರ ಬಾಕಿ ಉಳಿದಿರೊದ್ರಿಂದ ಪ್ರಥಮ್, ಮಾಳವಿಕ, ಮೋಹನ್, ಕೀರ್ತಿ, ರೇಖಾ ಹಾಗೂ ಶಾಲಿನಿ ಮನೆಯ ಸ್ಪರ್ಧಾಳುಗಳಾಗಿ ಉಳಿದಿದ್ದಾರೆ. ಇದೇ ವಾರದ ಮಧ್ಯದಲ್ಲಿ ಒಬ್ರು ಎಲಿಮಿನೇಟ್ ಆಗುವ ಚಾನ್ಸ್ ಕೂಡ ಇದೆ. ಹಾಗಾಗಿ ಈ ವರ್ಷದ ಬಿಗ್‍ಬಾಸ್ ಬಾರಿ ಕುತೂಹಲ ಭರಿತವಾಗಿ ಸಾಗ್ತಾ ಇದೆ. ಇವೆಲ್ಲದರ ನಡುವೆ ಕೊನೆಯ ಐದು ಸ್ಪರ್ಧಾಳುಗಳಲ್ಲಿ ವಿನ್ನರ್ ಯಾರು..? ಯಾರಾಗ್ತಾರೆ 50 ಲಕ್ಷಕ್ಕೆ ಒಡೆಯರು..? ಅನ್ನೊ ಕುತೂಹಲಕ್ಕೂ ಈ ವಾರ ಸಾಕ್ಷಿಯಾಗಲಿದೆ. ಅದೇ ರೀತಿ ಈ ಬಾರಿ ಫೈನಲ್ ಅವಾರ್ಡ್ ನೀಡೋಕೆ ಕನ್ನಡದ ಯಾವ ಸೆಲೆಬ್ರೆಟಿ ಸುದೀಪ್ ಜೊತೆ ವೇದಿಕೆ ಹಂಚ್ಕೊಳ್ತಾರೆ ಅನ್ನೊ ಪ್ರಶ್ನೆಯೂ ಕೂಡ ಕಾಡ್ತಾ ಬರ್ತಿದೆ. ಮೂಲಗಳ ಪ್ರಕಾರ ಈ ಬಾರಿಯ ಬಿಗ್‍ಬಾಸ್ ಸೀಸನ್-4ನ ಗ್ರ್ಯಾಂಡ್ ಫಿನಾಲೆಯಲ್ಲಿ ಸುದೀಪ್ ಜೊತೆ ವೇದಿಕೆ ಮೇಲೆ ಕನ್ನಡದ ಓರ್ವ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರಂತೆ..! ಈ ನಟ ಸ್ಮಾಲ್‍ಸ್ಕ್ರೀನ್‍ಗಳಲ್ಲಿ ಕಾಣಿಸಿಕೊಂಡಿರುವುದು ತುಂಬಾ ಕಡಿಮೆ. ಅಷ್ಟೆ ಅಲ್ಲ ಸ್ಯಾಂಡಲ್‍ವುಡ್‍ನ ಬಹು ಬೇಡಿಕೆಯ ನಟನೂ ಕೂಡ ಹೌದು..
ಅಯ್ಯೋ..!! ಯಾರಪ್ಪ ಅಂಥಾ ನಟ.. ಪುನಿತ್, ಸುದೀಪ್, ಯಶ್, ರಮೇಶ್, ಗಣೇಶ್, ಶಿವರಾಜ್‍ಕುಮಾರ್, ಉಪೇಂದ್ರ ರಂತಹ ಸ್ಟಾರ್ ನಟರ ದಂಡೆ ಸ್ಮಾಲ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಂಡು ಮಿಂಚಿದೆ ಇನ್ಯಾವ ನಟ ಗೆಸ್ಟ್ ಆಗಿ ಬರಲಿದ್ದಾರೆ ಎನ್ನುವ ಗೊಂದಲ ನಿಮ್ಮನ್ನು ಕಾಡ್ತಾ ಇದೆ ಅಲ್ವಾ..? ಸ್ಮಾಲ್ ಸ್ಕ್ರೀನ್‍ನಲ್ಲಿ ಅತಿ ಕಡಿಮೆ ಕಾಣಿಸಿಕೊಂಡಿರೊ ಈ ಸ್ಟಾರ್ ನಟನೆ ಬಿಗ್‍ಬಾಸ್ ಸೀಸನ್-4ನ ಫೈನಲ್ ಸಮಾರಂಭದಲ್ಲಿ ಭಾಗವಹಿಸಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಲಿದ್ದಾರಂತೆ..
ಮೆಜೆಸ್ಟಿಕ್ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಈ ಭೂಪತಿ, ಆನಂತರ ಕಲಾಸಿಪಾಳ್ಯದ ಕರಿಯನಾಗಿ, ಶಾಸ್ತ್ರಿ, ದತ್ತ ಮೂಲಕ ಸ್ಯಾಂಡಲ್‍ವುಡ್‍ಗೆ ಸಾರಥಿಯಾಗಿರುವ ಈ ನಟ ಈಗ ಚಕ್ರವರ್ತಿಯಾಗಿ ಜನರ ಮುಂದೆ ಬರಲಿದ್ದಾರೆ. ಇಷ್ಟ್ರಲ್ಲೇ ನಿಮ್ಗೆ ಗೊತ್ತಾಗಿರ್ಬೇಕಲ್ವಾ ಯಾರು ಈ ಸ್ಟಾರ್ ನಟ ಅಂತಾ….?
ಯೆಸ್ ನಿಮ್ಮ ಊಹೆ ಸರಿಯಾಗೆ ಇದೆ.. ಕಿಚ್ಚ ಸುದೀಪ್ ಪ್ರಾಣ ಸ್ನೇಹಿತ ಸ್ಯಾಂಡಲ್‍ವುಡ್‍ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿಯ ಸೀಸನ್-4 ಫಿನಾಲೆಗೆ ಬರಲಿದ್ದಾರಂತೆ. ಸಾಮಾನ್ಯವಾಗಿ ನಟ ದರ್ಶನ್ ಯಾವುದೇ ಸ್ಮಾಲ್‍ಸ್ಕ್ರೀನ್‍ನಲ್ಲಿ ಕಾಣಿಸಿಕೊಂಡೇ ಇಲ್ಲ. ಆದ್ರೆ ಈ ಬಾರಿಯ ಬಿಗ್‍ಬಾಸ್ ವೇದಿಕೆ ದರ್ಶನ್ ಗೆಸ್ಟ್ ಆಗಿ ಬರೋ ಮೂಲಕ ಮತ್ತೆ ಹಳೆಯ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಕರೆ ತರಲಿದ್ದಾರಂತೆ ಕಲರ್ಸ್ ಕನ್ನಡ ತಂಡ. ಈ ಮೂಲಕ ದರ್ಶನ್-ಸುದೀಪ್ ಅಭಿಮಾನಿಗಳಿಗೆ ಬಿಗ್‍ಬಾಸ್ ಈ ಬಾರಿ ಸಂತಸದ ಮಳೆಯನ್ನೆ ಸುರಿಸಲಿದೆ. ಈ ಸ್ಯಾಂಡಲ್‍ವುಡ್ ಸ್ಟಾರ್‍ಗಳ ಸಮಾಗಮಕ್ಕೆ ಈಗಾಗಲೆ ವೇದಿಕೆ ಸಜ್ಜುಗೊಳ್ಳುತ್ತಿದ್ದು ಪರಮಾಪ್ತರ ಸಮ್ಮಿಲನಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್‍ಬಾಸ್ ಫಿನಾಲೆ ಆದಷ್ಟು ಬೇಗ ಬರ್ಲಿ ಅಂತ ಹಾತೊರೆಯುತ್ತಿದ್ದಾರೆ ಅಭಿಮಾನಿ ಬಳಗ.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್
ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!
LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?
ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?