ಹ್ಞೂಂ.. ಕನ್ನಡ ಬಿಗ್‍ಬಾಸ್ ಸೀಸನ್ 5 ಶುರುವಾಗಿದೆ. ಒಂದಿಷ್ಟು ಜನ ಸೆಲಬ್ರಿಟಿಗಳ ಜೊತೆ ಜನಸಾಮಾನ್ಯರು ಈ ಬಾರಿ ಬಿಗ್‍ಬಾಸ್ ಮನೆ ಪ್ರವೇಶಿಸಿರೋದು ವಿಶೇಷ.
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ, ಜನಪ್ರಿಯ ನಟ ಸಿಹಿಕಹಿ ಚಂದ್ರು, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್, ನಟಿ ಅಶಿತಾ ಚಂದ್ರಪ್ಪ. ನಟಿ ತೇಜಸ್ವಿನಿ ಪ್ರಕಾಶ್, ನಟಿ ಶ್ರುತಿ ಪ್ರಕಾಶ್, ನಟ ಕಾರ್ತಿಕ್ ಜಯರಾಂ, ನಿರ್ದೇಶಕ ದಯಾಳ್ ಪದ್ಮಬಾಭನ್, ನಟ ಜಗನ್, ನಟಿ ಕೃಷಿ ತಪ್ಪಂಡ, ನಟಿ ಅನುಪಮಾ ಗೌಡ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋ ಸೆಲಬ್ರಿಟಿಗಳು.
ಈ 11 ಜನ ಸೆಲಬ್ರಿಟಿಗಳ ಜೊತೆ ಸೇಲ್ಸ್ ಪರ್ಸನ್ ದಿವಾಕರ್, ಅರ್ಚಕ ಸಮೀಪ್ ಆಚಾರ್ಯ, ಕೊಡುಗಿನ ಮೇಘನಾ ಡಬ್‍ಸ್ಮಾಶ್ ಕಲಾವಿದೆ ನಿವೇದಿತಾ ಗೌಡ, ರಿಯಾಜ್ ಬಾಷಾ, ಗೃಹಿಣಿ ಸುಮಾ ಆರ್ ಬಿಗ್‍ಬಾಸ್ ಮನೆ ಪ್ರವೇಶಿಸಿದ ಜನಸಾಮಾನ್ಯರು. ಇವರಲ್ಲಿ ಗೊಂಬೆಯಂತಿರೋ ನಿವೇದಿತಾ ಗೌಡ ತನ್ನ ಕನ್ನಡ ಮಾತಿನಿಂದಲೇ ಎಲ್ಲರ ಗಮನ ಸೆಳೀತಾರೆ..! ಜೊತೆಗೆ ಟ್ರೋಲ್ ಪೇಜ್‍ಗಳಿಗೆ ಒಳ್ಳೆಯ ಆಹಾರವೂ ಆಗ್ತಾರೆ..!
ಒಟ್ನಲ್ಲಿ ಬಿಗ್‍ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ..ಇನ್ನೇನೆ ಇದ್ರು ಗೆಲುವಿನ ಲೆಕ್ಕಾಚಾರ. ಮುಂದೆ ಏನ್ ಏನ್ ಆಗುತ್ತೆ ಅಂತ ಕಾದು ನೋಡುವ.