ಇನ್ನೂ‌ ಡಿಸೈಡ್ ಆಗಿಲ್ಲ‌ ಬಿಗ್ ಬಾಸ್ ವಿನ್ನರ್…! ಹರಿದಾಡುತ್ತಿರೋದು ಸುಳ್ಳು ಸುದ್ದಿ…!

Date:

ಕನ್ನಡ ಬಿಗ್ ಬಾಸ್ ಸೀಸನ್‌ 5 ಕೊನೆಯ ಹಂತ ತಲುಪಿದೆ.‌ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಈ ನಡುವೆ‌ ಸೋಶಿಯಲ್ ಮೀಡಿಯಾಗಳಲ್ಲಿ‌ ಬಿಗ್ ಬಾಸ್‌ ವಿನ್ನರ್ ಅವರಂತೆ, ಇವರಂತೆ ಎಂಬ ಸುಳ್ಳು‌‌‌ ಸುದ್ದಿ ಹರಿದಾಡುತ್ತಿದೆ.


ವಿಕಿಪೀಡಿಯಾದ ಆಧಾರದಲ್ಲಿ‌ ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಮತ್ತು ಶ್ರುತಿ ಹೊರ ಇಂದು‌ ಹೊರಬಂದಿದ್ದಾರೆ ಎಂಬ ಮಾಹಿತಿ ಇತ್ತು.‌ ಸ್ವಲ್ಪ ಹೊತ್ತಿನ ನಂತರ ದಿವಾಕರ್ ಮತ್ತು ಶ್ರುತಿ ಹೊರಬಂದಿದ್ದು ಜಯರಾಂ ಕಾರ್ತಿಕ್ , ಚಂದನ್ ಶೆಟ್ಟಿ, ನಿವೇದಿತಾ ಮೂವರು ಕೊನೆಯ‌ ಹಂತ ತಲುಪಿದ್ದಾರೆ ಎಂದು ಹೇಳಲಾಗುತ್ತಿತ್ತು.


ಅಷ್ಟೇ ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸುವುದೇ ಕೆಲಸ ಎಂದು ನಂಬಿರೋ ಕೆಲವರು ಜಯರಾಂ ಕಾರ್ತಿಕ್ ವಿನ್ನರ್, ಚಂದನ್ ಶೆಟ್ಟಿ ರನ್ನರಪ್ ಎಂದು ಡಿಸೈಡ್ ಮಾಡಿ ಸುದ್ದಿ ಸೃಷ್ಟಿಸಿ ಹರಿ ಬಿಟ್ಟಿದ್ದೂ ಮುಗಿಯಿತು.‌

ಬಿಗ್ ಬಾಸ್ ಫಿನಾಲೆ ತಲುಪಿರೋ ಪ್ರತಿಯೊಬ್ಬರೂ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ತನಕ ವೋಟಿಂಗ್ ಲೈನ್ ಆ್ಯಕ್ಟಿವ್ ಆಗಿತ್ತು. ಮತ ಹಾಕುವ ಮುನ್ನವೇ ವಿನ್ನರ್ ಯಾರು ಎಂಬ ಮಾಹಿತಿ ಸಿಕ್ಕಿದ್ದು ಯಾರಿಗೋ?


ವಿಕಿಪೀಡಿಯದ ಮಾಹಿತಿ ಸಂಪೂರ್ಣ ನಂಬಲು ಅರ್ಹವಲ್ಲ.‌ಕಾರಣ ಅದನ್ನು ಬದಲಿಸೋ ಅವಕಾಶವಿದೆ.ಮಾಡಕ್ಕೆ ಕೆಲಸ ಇಲ್ಲದವರು ತಮಗೆ ಬೇಕಾದಂತೆ ತಿರುಚಿ ಸುದ್ದಿ ಹಬ್ಬಿಸುತ್ತಿದ್ದಾರಷ್ಟೇ. ಫಿನಾಲೆ ನಡೆಯುವವರೆಗೂ ಮಾಹಿತಿ ಬಹಿರಂಗವಾಗಲು‌ ಸಾಧ್ಯವೇ ಇಲ್ಲ. ಅದನ್ನು ಗೌಪ್ಯವಾಗಿಯೇ ಇಟ್ಕೊಂಡಿರುತ್ತಾರೆ.


ಸಾಮಾನ್ಯವಾಗಿ ‌ಹೇಳುವುದಾದರೆ ಐವರಿಗೂ ಫ್ಯಾನ್ ಫಾಲೋವರ್ಸ್ ಇದ್ದಾರೆ. ಜನರು ಅವರನ್ನು ಇಷ್ಟಪಟ್ಟಿದ್ದಾರೆ. ಆದರೆ , ಐವರಲ್ಲಿ ಹೆಚ್ಚು ಜನಪ್ರಿಯತೆ ಇರೋದು ಚಂದನ್ ಶೆಟ್ಟಿ ಅವರಿಗೇ ಎಂದರೆ ತಪ್ಪಾಗಲಾರದು. ರ್ಯಾಪ್ ಸಾಂಗ್ ಮೂಲಕ‌ ಚಂದನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನವೂ ತಾವು ತಾವಾಗಿಯೇ ಇದ್ದು ವೀಕ್ಷಕರ ಮನಗೆದ್ದಿದ್ದಾರೆ.
ಹಾಗಂತ ಚಂದನ್ನೇ ವಿನ್ನರ್ ಎಂದು ಹೇಳಲಾಗದು. ಕನ್ನಡಿಗರು ಯಾರನ್ನು ಗೆಲ್ಲಿಸಿದ್ದಾರೆ ಎಂಬುದನ್ನು ಕಾದು ನೋಡೋಣ. ಸುಳ್ ಸುಳ್ ಸುದ್ದಿಯನ್ನು ನಂಬಿ ಅದನ್ನೇ ವೈರಲ್‌ ಮಾಡದಿರಿ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...