ಬಿಗ್‍ಬಾಸ್ ಸೀಸನ್-4ನಲ್ಲಿ ಫ್ರಥಮ್ ‘ಫ್ರಥಮ’..!

Date:

ಕೋಟ್ಯಾಂತರ ಜನರ ಕುತೂಹಲಕ್ಕೆ ಸಾಕ್ಷಿಯಾಗಿದ್ದ ಬಿಗ್‍ಬಾಸ್ ಸೀಸನ್-4 ಗ್ರ್ಯಾಂಡ್ ಫಿನಾಲೆ ತೆರೆ ಕಂಡಿದ್ದು, ಫಿನಾಲೆಯಲ್ಲಿ ಜಯಶಾಲಿಯಾಗುವರು ಯಾರು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾ ಇದ್ದ ಬಿಗ್‍ಬಾಸ್ ರಿಯಾಲಿಟಿ ಶೋನ ಫೈನಲ್ ಸಖತ್ ಕುತೂಹಲಕಾರಿಯ ಜೊತೆಗೆ ಐದು ಜನರಲ್ಲಿ ಪ್ರಶಸ್ತಿ ಯಾರ ಮುಡಿಗೆ ಎಂಬ ಗೊಂದಲವೂ ಎಲ್ಲರಲ್ಲಿತ್ತು. ಆದ್ರೆ ಈ ಎಲ್ಲಾ ಗೊಂದಲಗಳಿಗೂ ಈಗ ಉತ್ತರ ಸಿಕ್ಕಿದ್ದು ಈ ಬಾರಿಯ ಬಿಗ್‍ಬಾಸ್ ವಿನ್ನರ್ ಯಾರಾದ್ರು ಎಂಬುದು ಸ್ಪಷ್ಟವಾಗಿದೆ. ಅದು ಬೇರ್ಯಾರೂ ಅಲ್ಲ ಬಿಗ್‍ಬಾಸ್ ಮನೆಯ ದಿ ಮೋಸ್ಟ್ ಎಂಟರ್ ಟೈನರ್ ಒಳ್ಳೆ ಹುಡುಗ ಪ್ರಥಮ್..! ಹೌದು ಈ ಬಾರಿಯ ಬಿಗ್‍ಬಾಸ್ ರಿಯಾಲಿಟಿ ಶೋನ ಮೇನ್ ಐಕಾನ್ ಆಗಿದ್ದ ಪ್ರಥಮ್ ಬಿಗ್‍ಬಾಸ್‍ನ ವಿಜಯದ ಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕೋಟ್ಯಾಂತರ ಅಭಿಮಾನಿಗಳು ಕಟ್ಟಿಕೊಂಡಿದ್ದ ಕನಸು ಈಗ ನನಸಾಗಿದೆ. ತನ್ನ ನೇರ ಮಾತುಗಳಿಂದ ಕನ್ನಡಿಗರ ಮನಗೆದ್ದಿದ್ದ ಪ್ರಥಮ್ ಮನೆಯ ಇತರೆ ಸದಸ್ಯರ ಕಣ್ಣಿಗೆ ವಿಲ್ಲನ್ ಆಗಿ ಕಾಣಿಸಿಕೊಂಡಿದ್ದ. ಮನೆಯಲ್ಲಿನ ಯಾವೊಬ್ಬ ವ್ಯಕ್ತಿಗೂ ತನ್ನ ವಿರುದ್ದ ಬೆರಳು ತೋರಿಸಿ ಮಾತನಾಡದ ರೀತಿಯಲ್ಲಿ ಇಟ್ಟುಕೊಂಡಿದ್ದ ಪ್ರಥಮ್ ಟಾಸ್ಕ್ ಹಾಗೂ ಇತರೆ ವಿಚಾರದಲ್ಲು ಸೈ ಎನಿಸಿಕೊಂಡು ಬಂದಿದ್ರು. ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಮನೆಗೆ ಎಂಟ್ರಿ ಕೊಟ್ಟ ಪ್ರಥಮ್ ತನಗಿಂತ ಎತ್ತರಕ್ಕೆ ಬೆಳೆದಿದ್ದ ಸ್ಟಾರ್ ಸೆಲೆಬ್ರೆಟಿಗಳನ್ನೆ ಹಿಂದಕ್ಕೆ ತಳ್ಳಿ ಬಿಗ್‍ಬಾಸ್ ಪ್ರಶಸ್ತಿ ಎತ್ತಿ ಹಿಡಿದಿದ್ದಲ್ಲದೆ 50 ಲಕ್ಷ ರೂಪಾಯಿಗೆ ಒಡೆಯನಾಗಿದ್ದಾನೆ. ಗ್ರಾಂಡ್ ಫಿನಾಲೆಯ ಐದು ಜನ ಸ್ಪರ್ಧಾಳುಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದ ಪ್ರಥಮ್ ಈ ಬಾರಿಯ ಬಿಗ್‍ಬಾಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಕೊನೆಯ ಸುತ್ತಿನಲ್ಲಿ ಪ್ರಥಮ್ ಹಾಗೂ ಕೀರ್ತಿಕುಮಾರ್ ನಡುವೆ ಪೈಪೋಟಿ ಇತ್ತು ಇಬ್ಬರೂ ಕೂಡ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ರಿಂದ ಸಹಜವಾಗಿಯೆ ಎಲ್ಲರಲ್ಲೂ ಕುತೂಹಲ ಹೆಚ್ಚಿತ್ತು. ಫೈನಲ್ ವಿನ್ನರ್ ಯಾರಾಗ್ತಾರೆ ಎನ್ನುತ್ತಿದ್ದಂತೆ ಎಲ್ಲೆಡೆಯಿಂದ ಪ್ರಥಮ್ ಹಾಗೂ ಕೀರ್ತಿ ಅವರ ಹೆಸರು ಮೊಳಗ ತೊಡಗಿದ್ವು. ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸಿದ್ದ ಬಿಗ್‍ಬಾಸ್ ಫಿನಾಲೆ ಅಲ್ಲಿ ನರೆದಿದ್ದ ಜನರಿಗೆ ಇನ್ನಿಲ್ಲದ ಪುಳಕ ತಂದಿತ್ತು ಅಂದ್ರೆ ತಪ್ಪಾಗಲ್ಲ. ಕೊನೆಗೆ ಪ್ರಥಮ್ ಬಿಗ್‍ಬಾಸ್ ವಿನ್ನರ್ ಎಂದು ಘೋಷಣೆ ಮಾಡಿದಾಗ ಪ್ರಥಮ್ ಸೇರಿದಂತೆ ನೆರೆದಿದ್ದ ಎಲ್ಲರಿಗೂ ಇನ್ನಿಲ್ಲದ ಖುಷಿ ತಂದಿತ್ತು. ಇನ್ನು ಪ್ರಥಮ್ ಬಿಗ್‍ಬಾಸ್ ವಿನ್ನರ್ ಎಂದು ಸುದ್ದಿ ಬಂದ ಕೂಡಲೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರ್ತಾ ಇದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...