ಕ್ಷಣಾರ್ಧದಲ್ಲಿ ಬೈಕ್ ಎಗರಿಸುತ್ತಿದ್ದ ಕಳ್ಳನ ಬಂಧನ

Date:

ಕ್ಷಣಾರ್ಧದಲ್ಲಿ ಬೈಕ್ಗಳ ಎಗರಿಸ್ತಿದ್ದ ಚಾಲಾಕಿ ಕಳ್ಳನನ್ನ ಬಂಧಿಸಲಾಗಿದೆ . ಅಭಿಷೇಕ್ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ . ಶೋಕಿಗಾಗಿ ಅಡ್ಡದಾರಿ ಹಿಡಿದಿದ್ದ ಈ ಮಹಾನ್ ಖತರ್ನಾಕ್ ಕಳ್ಳನನ್ನ , ಮದ್ದೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ .

ಇನ್ನೂ ಈತನಿಂದ 30 ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ. ಎತ್ತಿನಗಾಡಿ ರೇಸ್ ಶೋಕಿ ಮಾಡಲು 30 ಬೈಕ್ಗಳನ್ನ ಕಳ್ಳತನ ಮಾಡಿದ್ದ  . ವೀಕೆಂಡ್ನಲ್ಲಿ ಎಂಟ್ರಿ ಕೊಡುತ್ತಿದ್ದ ಈ ಕಳ್ಳ , ಬೀದಿ ಬದಿಗಳಲ್ಲಿ ನಿಲ್ಲಿಸ್ತಿದ್ದ ಹೀರೋ-ಹೋಂಡಾ ಬೈಕ್ಗಳ ಕಳುವು ಮಾಡುತ್ತಿದ್ದ . ಮಂಡ್ಯದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿತ್ತು . ಬೈಕ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು .ಮದ್ದೂರಿನ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು . ಪೊಲೀಸರ ಕಾರ್ಯಾಚರಣೆ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ . ಸುಮಾರು 11 ಲಕ್ಷದ 10 ಸಾವಿರ ರೂ. ಮೌಲ್ಯದ 30 ಬೈಕ್ಗಳು ವಶಕ್ಕೆ ಪಡೆಯಲಾಗಿದೆ .

ಆರೋಪಿಗಳನ್ನ ಬಂಧಿಸಿ ಪೋಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ . ಹಾಗೂ ಮದ್ದೂರು ಪೊಲೀಸರ ಕಾರ್ಯಾಚರಣೆಗೆ SP ಎನ್.ಯತೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...