ನಂಬರ್ 1 ಶ್ರೀಮಂತ ಬಿಲ್ ಗೇಟ್ಸ್  ಆಸ್ತಿ ಎಷ್ಟಿದೆ ಅಂದ್ರೆ..!

Date:

ನೀವ್ ನಂಬ್ತೀರೋ ಬಿಡ್ತಿರೋ, ಕಳೆದ 15 ನಿಮಿಷದಿಂದ ಈ ಬಿಲ್ ಗೇಟ್ಸ್ ಆಸ್ತಿಯನ್ನು ರೂಪಾಯಿಗೆ ಕನ್ವರ್ಟ್ ಮಾಡಿ ಅಲ್ಲಿ ಬಂದ ನಂಬರ್ ಲೆಕ್ಕ ಹಾಕೋಕೆ ಸಾಧ್ಯ ಆಗದೇ ಒದ್ದಾಡ್ತಾ ಇದೀನಿ..! ಅವರ ಒಟ್ಟು ಆಸ್ತಿ 79.2 ಬಿಲಿಯನ್ ಡಾಲರ್, ರೂಪಾಯಿ ಲೆಕ್ಕಕ್ಕೆ 5027216040000 ರೂಪಾಯಿ. ಎಷ್ಟೇ ತಲೆ ಕೆರ್ಕೊಂಡ್ರು ಅದನ್ನು ಎಷ್ಟು ಅಂತ ಪತ್ತೆ ಹಚ್ಚೋಕೆ ಸಧ್ಯ ಆಗಿಲ್ಲ. ಗೂಗಲ್ ಸಹ ನಂಗೊತ್ತಿಲ್ಲ ಅನ್ನೋ ತರ ಬಿಹೇವ್ ಮಾಡ್ತು..! ಒಟ್ನಲ್ಲಿ ಅವರ ಆಸ್ತಿಯನ್ನು ಇಂಡಿಯಾದಲ್ಲಿರೋ 120  ಕೋಟಿ ಜನರಿಗೆ ಹಂಚಿದ್ರೆ, ಒಬ್ಬೊಬ್ಬರಿಗೆ 4189 ರೂಪಾಯಿ ಸಿಗುತ್ತೆ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ದುಡ್ಡು ಮಾಡುದ್ರೆ ಹಿಂಗ್ ಮಾಡಬೇಕಪ್ಪಾ.. ಮೈಕ್ರೋಸಾಫ್ಟ್ ಅನ್ನೋ ಕಂಪನಿ ಕಟ್ಟಿ ಈ ಮನುಷ್ಯ ಮಾಡಿರೋ ದುಡ್ಡಿ ಇದ್ಯಲ್ಲಾ…ಶಿವ ಶಿವ..! ಒಂದು ಸೆಕೆಂಡಿಗೆ ಬಿಲ್ ಗೇಟ್ಸ್ ಗಳಿಸೋದು ಹತ್ರತ್ರ 16000 ರೂಪಾಯಿ ಅಂತೆ..! ಅಂದ್ರೆ ನಿಮಿಷಕ್ಕೆ 9 ಲಕ್ಷದ ಅರವತ್ತು ಸಾವಿರ ರೂಪಾಯಿ. ಒಂದು ಗಂಟೆಗೆ 5 ಕೋಟಿ 76 ಲಕ್ಷ…! ಗಂಟೆಗೆ 5 ಕೋಟಿ ಖರ್ಚು ಮಾಡಿದ್ರೂ ಇನ್ನೂ 76 ಲಕ್ಷ ಉಳಿಯುತ್ತಲ್ಲಾ ಶಿವಾ..!
ಬಿಲ್ ಗೇಟ್ಸ್ ಅವರನ್ನೇ ಒಂದು ರಾಷ್ಟ್ರ ಅಂತ ಅನ್ಕೊಂಡ್ರೆ, ಅವರು ವಿಶ್ವದ 37ನೇ ಶ್ರೀಮಂತ ರಾಷ್ಟ್ರ ಆಗಿರ್ತಾ ಇದ್ರು..!
ಅವರ ಜೇಬಿಂದ 1000 ಡಾಲರ್ ಬಿತ್ತು ಅಂತ ಇಟ್ಕೊಳಿ, ಅದನ್ನ ಎತ್ತಿಕೊಳ್ಳೋಕೆ 4 ಸೆಕೆಂಡ್ ಬೇಕು. ಅಷ್ಟರೊಳಗೆ ಅವರು ಆ 1000 ಡಾಲರ್ ಗಳಿಸಿರ್ತಾರೆ..!
ಬಿಲ್ ಗೇಟ್ಸ್ ಹತ್ತಿರ ಇರೋ ಎಲ್ಲಾ ದುಡ್ಡನ್ನು 10 ರೂಪಾಯಿ ನೋಟು ಬಳಸಿ ರಸ್ತೆ ಮಾಡಿದ್ರೆ ಭೂಮಿಯಿಂದ ಚಂದ್ರನಿಗೆ 14 ಸುತ್ತು 60 ಅಡಿ ಅಗಲದ ರಸ್ತೆ ಮಾಡಬಹುದು..!
ಹಂಗೇನಾದ್ರೂ ಅಂತ ರೋಡ್ ಮಾಡೋದಾದ್ರೆ ನಾವೂ ಒಂದ್ 25 ಕಿಲೋಮೀಟರ್ ಕಾಂಟ್ರಾಕ್ಟ್ ತಗೊಳೋಣಂತೆ.. ಸದ್ಯಕ್ಕೆ ಈ ಲೆಕ್ಕಾಚಾರ ಕೇಳಿ ಸುಸ್ತಾಗಿದ್ರೆ. ತಣ್ಣಗೆ ಒಂದು ಲೋಟ ನೀರು ಕುಡೀರಿ…!
-ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...