ಸೇಲ್ಸ್ ಮ್ಯಾನ್ ಆಗಿದ್ದವರ ಆಸ್ತಿ ರೂ.121819104000.!

0
156
ಅವರು ಮೂಲತಃ ಉಡುಪಿಯ ಕಾಪು ಊರಿನವರು.  ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದವರು. ಇಲ್ಲಿ ಅವರೊಬ್ಬ ಸಾಮಾನ್ಯ ಮೆಡಿಕಲ್ ರೆಪ್. ಜೊತೆಗಿದ್ದಿದ್ದು ಫಾರ್ಮಸಿಟಿಕಲ್ ಡಿಗ್ರಿ ಅಷ್ಟೆ. ತಂಗಿಯ ಮದುವೆಯ ಸಾಲ ತೀರಿಸೋಕೆ ಕಷ್ಟವಿದ್ದ ದಿನಗಳವು. ಆಗ ಯಾವ ದೇವರು ಬುದ್ಧಿ ಕೊಟ್ಟರೋ ಗೊತ್ತಿಲ್ಲ, ಆಗಿದ್ದಾಗಲಿ ಅಂತ ದೂರದ ದುಬೈಗೆ ಹೊರಟೇ ಬಿಟ್ರು. ಅದು 1973. ಉರಿಉರಿ ಬಿಸಿಲಿನಲ್ಲಿ ಮರುಳುಗಾಡಿನ ಆ ಪ್ರಪಂಚದಲ್ಲಿ ಹೇಗೆ ಬದುಕಲಿ ಅಂತ ಯೋಚನೆ ಸಹ ಮಾಡದೇ ದುಡಿಮೆಗೆ ಬಿದ್ದವರ ಇವತ್ತಿನ ಆಸ್ತಿ ಹನ್ನರೆಡು ಸಾವಿರದ ನೂರ ಎಂಭತ್ತೊಂದು ಕೋಟಿ ತೊಂಭತ್ತೊಂದು ಲಕ್ಷದ ನಾಲ್ಕು ಸಾವಿರ ರೂಪಾಯಿ…!
ಪರಿಶ್ರಮದ ಜೊತೆ ಹಣೆಬರಹ ನೆಟ್ಟಗಿದ್ರೆ ಏನು ಬೇಕಾದ್ರೂ ಆಗಬಹುದು ಅನ್ನೋಕೆ ಸಾಕ್ಷಿ ಡಾ. ಬಿ.ಆರ್ ಶೆಟ್ಟಿ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಈ ಹೆಸರು ಇವತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ವೈದ್ಯಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಎನ್.ಎಂ.ಸಿ ಹೆಲ್ತ್ ಹಾಗೂ ನಿಯೋ ಫಾರ್ಮ. ಅದರ ಮಾಲೀಕರು ಇದೇ ಬಿ.ಆರ್.ಶೆಟ್ಟಿ. ಮನಿ ಎಕ್ಸ್ ಚೇಂಜ್ ನಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರೋ ಯುಎಇ ಎಕ್ಸ್ ಚೇಂಜ್ ಸಹ ಇವರದ್ದೇ..! ಅಬುಧಾಬಿಯಲ್ಲಿ ಪ್ರತಿಷ್ಟಿತ ಹೊಟೇಲ್ ಮಾಲೀಕರಿವರು. ಅಷ್ಟೆಲ್ಲಾ ಯಾಕೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಎರಡು ಫ್ಲೋರ್ ಇವರದ್ದೇ ಸ್ವಂತ..! ಇದೆಲ್ಲಾ ಸುಮ್ಮನೇ ಬಂದು ಇವರ ಕಾಲು ಬುಡಕ್ಕೆ ಬೀಳಲಿಲ್ಲ. ಇದರ ಹಿಂದೆ ಉರಿಉರಿ ಬಿಸಿಲಿನ ಝಳವಿತ್ತು, ಏನಾದ್ರೂ ಸಾಧಿಸಲೇಬೇಕೆಂಬ ಛಲವಿತ್ತು, ಗೆದ್ದೇ ಗೆಲ್ಲುವ ನಂಬಿಕೆ ಇತ್ತು. ಅದಕ್ಕೇ ಇವತ್ತು ಫೋರ್ಬ್ಸ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಬಿ.ಆರ್.ಶೆಟ್ಟಿ ಸಹ ಒಬ್ಬರು..!
ಶಾಲೆಗೆ ಹೋಗುವ ದಿನಗಿಳಿಂದಲೇ ಸಹಪಾಠಿಯಂತೆ ಕಷ್ಟವೂ ಜೊತೆಗಿತ್ತು. ಆದ್ರೆ ನಾನು ಮುಂದೆ ಏನಾದ್ರೂ ಸಾಧಿಸಿಯೇ ತೀರುತ್ತೇನೆ ಅನ್ನೋದು ಅವರಿಗಷ್ಟೇ ಗೊತ್ತಿತ್ತು. 1973ರಲ್ಲಿ  ಅರಬ್ ನಾಡಿನಲ್ಲಿ ಕಾಲಿಟ್ಟಾಗ ಅವರು ಅಲ್ಲಿನ ಬಿಸಿಲಿಗೆ ಕಂಗಾಲಾಗಿ ಹೋಗಿದ್ರು. ಏನಾದ್ರೂ ಕೆಲಸ ಮಾಡೋಣ ಅಂದ್ರೆ ಅವರಿಗೆ ಅರೆಬಿಯನ್ ಭಾಷೆಯೂ ಬರುತ್ತಿರಲಿಲ್ಲ. ಆದ್ರೆ ಹಠ ಬಿಡಲಿಲ್ಲ. ತನಗೆ ಗೊತ್ತಿರೋ ಕೆಲಸವನ್ನೇ ಮಾಡುತ್ತೇನೆ ಅಂತ ಹಠಕ್ಕೆ ಬಿದ್ದು ಉರಿಬಿಸಿಲಿನಲ್ಲಿ ಅರಬ್ ನಾಡಿನಲ್ಲಿ ಸೈಕಲ್ ತುಳಿದ್ರು. ದೊಡ್ಡದೊಡ್ಡ ಮೆಡಿಸನ್ ಬಾಕ್ಸ್ ಹೊತ್ತು ಡಾಕ್ಟರ್ ಗಳಿಗೆ, ಕ್ಲಿನಿಕ್ ಗೆ ಡೆಲಿವರಿ ಮಾಡ್ತಿದ್ರು. ಸುಡುಬಿಸಿಲು ನೆತ್ತಿ ಸುಟ್ಟರೂ ಇವರ ಆತ್ಮವಿಶ್ವಾಸವನ್ನು ಅಲ್ಲಾಡಿಸೋಕೂ ಸಾಧ್ಯವಾಗಲಿಲ್ಲ. ಎಷ್ಟು ದಿನ ಹೀಗೇ ಮಾಡೋದು ಅಂತ ಯೋಚನೆ ಮಾಡಿದವರೇ ನಾನೇ ಏನಾದ್ರೂ ಮಾಡ್ತೀನಿ ಅಂತ ಡಿಸೈಡ್ ಮಾಡಿದ್ರು. 1976ರಲ್ಲಿ ವೈದ್ಯೆಯಾಗಿದ್ದ ಚಂದ್ರಕುಮಾರಿ ಶೆಟ್ಟಿಯವರನ್ನು ತನ್ನೂರಿನಲ್ಲಿ ಮದುವೆಯಾಗಿ ಅರಬ್ ರಾಷ್ಟ್ರಕ್ಕೆ ಕರೆದುಕೊಂಡು ಹೊರಟೇಬಿಟ್ರು. ಹೆಂಡತಿಯ ಜೊತೆ ಪುಟ್ಟದೊಂದು ಕ್ಲಿನಿಕ್ ಶುರುಮಾಡಿಯೇ ಬಿಟ್ರು. ಅವರಿಬ್ಬರೇ ಕಾಂಪಿಟೇಶನ್ ಗೆ ಬಿದ್ದ ಹಾಗೆ ಕಷ್ಟಪಟ್ಟು ದುಡಿದ್ರು.  1976ರಲ್ಲಿ  ಶುರುವಾದ ಈ ಒಂದು ಸಣ್ಣ ಕ್ಲಿನಿಕ್ ಇವತ್ತು ಅಬುಧಾಬಿಯಲ್ಲಿ 6 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕರನ್ನಾಗಿಸಿದೆ. ಇನ್ನೂ 4 ಆಸ್ಪತ್ರೆಗಳನ್ನು ಆರಂಭಿಸೋ ದಿನಗಳು ಹತ್ತಿರವಿದೆ. 40 ವರ್ಷಗಳಿಂದ ಅಬುಧಾಬಿ, ಯೆಮನ್, ದುಬೈ, ಕತಾರ್ ಸೇರಿದಂತೆ ಪ್ರಮುಖ ಅರಬ್ ರಾಷ್ಟ್ರಗಳ ಜನರನ್ನು ಇವರ ವೈದ್ಯಕೀಯ ಸಂಸ್ಥೆಗಳು ಆರೋಗ್ಯವಾಗಿಟ್ಟಿವೆ. ಸ್ಟಾರ್ ಹೋಟೆಲ್ ಗಳು ಅರಬ್ಬಿಯನ್ನರ ಹಸಿವು ನೀಗಿಸುತ್ತಿದೆ. ಭಾರತೀಯರ ಪಾಲಿಗೆ ಯುಎಇ ಎಕ್ಸ್ ಚೇಂಜ್ ವರವಾಗಿ ಪರಿಣಮಿಸಿದೆ ಐಟಿ ಕ್ಷೇತ್ರದಲ್ಲೂ ಶೆಟ್ಟಿ ಗ್ರೂಪ್ಸ್ ದಾಪುಗಾಲಿಡುತ್ತಿದೆ. ಹೀಗೆ ಶೆಟ್ಟರಿಗೆ ಸೆಟ್ಟರೇ ಸಾಟಿ ಎಂಬಂತೆ ಬೆಳೆಯುತ್ತಿದ್ದಾರೆ ಪದ್ಮಶ್ರೀ ಬವಗುತು ರಘುರಾಂ ಶೆಟ್ಟಿ..!
ಅವತ್ತು ಅವರೇನಾದ್ರೂ ಬಿಸಿಲಿನ ಹೊಡೆತಕ್ಕೆ ಸಾಕಪ್ಪಾ ಸಾಕು ಅಂತ ಭಾರತಕ್ಕೆ ವಾಪಸ್ ಬಂದಿದ್ರೆ ಇವತ್ತು ನಾವು ಈ ಲೇಖನ ಬರೆಯಲು ಸಾಧ್ಯವಿತ್ತೆ..? ಎಷ್ಟೋ ಭಾರತೀಯರ ಪಾಲಿಗೆ ಅನ್ನದಾತ ಎನಿಸಿಕೊಂಡಿರುವ ಬಿ.ಆರ್.ಶೆಟ್ಟಿಯವರು 36,000ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಭಾರತೀಯರು ದುಬೈಗೆ ಕೆಲಸಕ್ಕೆ ಹೋದ್ರೆ, ಶೆಟ್ರು ಅಲ್ಲಿನವರಿಗೇ ಅವರ ಸಂಸ್ಥೆಯಲ್ಲಿ ಕೆಲಸ ಕೊಟ್ಟಿದ್ದಾರೆ..!
ನೀಮಾ ಶೆಟ್ಟಿ, ಸೀಮಾ ಶೆಟ್ಟಿ, ರೀಮಾ ಶೆಟ್ಟಿ, ಬಿನೋಯ್ ಶೆಟ್ಟಿ ಹೆಸರಿನ ನಾಲ್ಕು ಜನ ಮಕ್ಕಳನ್ನು ಹೊಂದಿರೋ ಬಿ.ಆರ್.ಶೆಟ್ಟಿ ದಂಪತಿಗಳು ಅವರ ಮಕ್ಕಳಿಗೆ ಪ್ರೀತಿಯ ಅಪ್ಪ ಅಮ್ಮ. ಆದ್ರೆ ಸಾವಿರಾರು ಕುಟುಂಬಗಳ ಪಾಲಿಗೆ ಬದುಕು ಕಟ್ಟಿಕೊಟ್ಟ ಧಣಿ. ಆಳಾಗಿ ದುಡಿ, ಅರಸನಂತೆ ಉಣ್ಣು ಎಂಬ ಮಾತಿನಂತೆ ಅವತ್ತು ಪಟ್ಟ ಕಷ್ಟಕ್ಕೆ ಇವತ್ತು ಸುಖೀ ಜೀವನ ಸಾಗಿಸಿ ಎಷ್ಟೋ ಯುವಕ ಯುವತಿಯರಿಗೆ ಆದರ್ಶವಾಗಿರೋ ಶೆಟ್ಟರಿಗೊಂದು ಸಲಾಂ…
  •  ಕೀರ್ತಿ ಶಂಕರಘಟ್ಟ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

LEAVE A REPLY

Please enter your comment!
Please enter your name here