ಯುದ್ದಕ್ಕೆ ನಮ್ಮ ಸೇನೆ ರೆಡಿಯಾಗಿ ನಿಂತಿದೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೂ ಅಚ್ಚರಿ ಇಲ್ಲ: ಬಿಪಿನ್ ರಾವತ್..!

Date:

ಭಾರತ ಸೇನೆ ಈಗಲೂ ಶತ್ರುಗಳ ವಿರುದ್ದ ಸೆಣಸಾಡಲು ಸಿದ್ಧವಾಗಿ ನಿಂತಿದೆ. ಪದೆ ಪದೆ ಶತ್ರು ಪಾಳಯದ ಸೇನೆಗಳು ಕದನ ಉಲ್ಲಂಘನೆ ನಡೆಸುತ್ತಿದ್ದು, ಅದನ್ನು ಸಹಿಸಿಕೊಂಡು ಕೂರುವ ಜಾಯಮಾನ ನಮ್ಮದಲ್ಲ. ಶತ್ರುಗಳ ಪುಂಡಾಟಿಕೆ ಹೀಗೆ ಮುಂದುವರೆಯುತ್ತಾ ಹೋದ್ರೆ ಮತ್ತೊಂದು ಸರ್ಜಿಕಲ್ ದಾಳಿ ನಡಿಯೋದ್ರಲ್ಲಿ ಅನುಮಾನವೇ ಇಲ್ಲ ಎಂದು ನೂತನ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಭಾತರದ ನೂತನ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾದ ರಾವತ್ ಇಂತಹದೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ..! ನಮ್ಮ ಸೇನೆ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ ನಾವು ಇರೋದೆ ಶತ್ರುಗಳನ್ನು ಮಟ್ಟ ಹಾಕುವುದಕ್ಕಾಗಿ. ಗಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಎಷ್ಟೆ ಪ್ರಾಮಾಣಿಕ ಪ್ರಯತ್ನ ಪಟ್ಟರೂ ವಿರೋಧಿಗಳ ಅಟ್ಟಹಾಸ ಮುಂದುವರೆಯುತ್ತಲೆ ಇದೆ. ಇದು ಹೀಗೆ ಮುಂದುವರಿಯುತ್ತಾ ಹೋದ್ರೆ ನಮ್ಮ ಸೇನೆ ತೋಳ್ ಬಲ ಪ್ರದರ್ಶನಕ್ಕೂ ಸಿದ್ಧವಾಗಿದೆ ಎಂದು ರಾವತ್ ತಿಳಿಸಿದ್ದಾರೆ. ಆದರೆ ರಾವತ್ ಅವರ ಈ ಹೀಳಿಕೆ ಸದ್ಯಕ್ಕೆ ಚರ್ಚೆಗೆ ಗ್ರಾಸವಾಗಿದೆ. ಖಾಸಗೀ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಬಿಪಿನ್ ರಾವತ್ ಭಾರತ ಸೇನೆ ಯುದ್ದಕ್ಕೆ ಸದಾ ಸಿದ್ದ. ಪಾಕ್‍ನ ಪುಂಡಾಟಿಕೆ ಹೀಗೆ ಮುಂದುವರಿಯುತ್ತಾ ಹೋದ್ರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೂ ಅಚ್ಚರಿ ಇಲ್ಲ ಎಂದೇಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಭಾರತೀಯ ಸೇನೆಯ ಕಾರ್ಯಾಚರಣೆಯ ವಿಧಾನವನ್ನು ಆಧುನೀಕರಣಗೊಳಿಸುವ ಅಗತ್ಯ ಹೆಚ್ಚಿದ್ದು, ಅದಕ್ಕಾಗಿ ಶಸ್ತ್ರಾಸ್ತ್ರ ಗೋದಾಮು, ಫಿರಂಗಿಗಳನ್ನು ಆಧುನೀಕರಣಗೊಳಿಸಬೇಕಿದೆ. ಅಷ್ಟೆ ಅಲ್ಲ ನಮ್ಮ ವಾಯು ಸೇನೆಯನ್ನು ಮತ್ತಷ್ಟು ಪಲ ಪಡಿಸಬೇಕಿದ್ದು, ಅತ್ಯಾಧುನಿಕ ಹೆಲಿಕ್ಯಾಪ್ಟರ್‍ಗಳ ಅಗತ್ಯ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...