ಬಿರಿಯಾನಿ ಕೆಡಸಿದ ಸಂಸಾರದ ಕಥೆಯಿದು. ಬಿರಿಯಾನಿ ವಿಚಾರಕ್ಕಾಗಿ ಗರ್ಭಿಣಿಯೊಬ್ಬರು ಮನೆ ಬಿಟ್ಟು ಹೋದ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ಅಪ್ಪ-ಮಗ ಬಿರಿಯಾನಿ ತಿಂದದ್ದಕ್ಕೆ ಗರ್ಭಿಣಿ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ…!
ರಾಜು ಸರ್ಕಾರ್ ಎಂಬುವವರು ಮನೆಗೆ ಬಿರಿಯಾನಿ ತಂದು ಮಗನ ಜೊತೆ ಕುಳಿತು ತಿಂದಿದ್ದರು.ಬಿರಿಯಾನಿ ವಾಸನೆ ಆಗಲ್ಲ ಎಂದು ಹಲವು ಬಾರಿ ಪತ್ನಿ ಜಗಳ ಆಡಿರ್ತಾರೆ. ಆದರೂ ಸಹ ಆಕೆ ಮುಂದೆಯೇ ಬಿರಿಯಾನಿ ತಿಂದದ್ದಕ್ಕೆ ಬೇಸರಗೊಂಡು ಜಗಳವಾಡಿ ಗರ್ಭಿಣಿ ಪತ್ನಿ ಮನೆಬಿಟ್ಟು ಹೋಗಿದ್ದಾರೆ. ಅನಿತಾ ಎಂಬಾಕೆ ಮನೆ ಬಿಟ್ಟು ಹೋದವರು.