ಹೊಸ ವರ್ಷಾಚರಣೆಯ ವೇಳೆ ಬೆಂಗಳೂರು ನಗರದ ಕಮ್ಮನಹಳ್ಳಿಯಲ್ಲಿ ಯಾರೂ ಊಹಿಸಿಕೊಳ್ಳಲಾಗದ ದುರ್ಘಟನೆಯೊಂದು ನಡೀತು..! ನ್ಯೂ ಇಯರ್ ಪಾರ್ಟಿ ಮುಗುಸ್ಕೊಂಡು ತನ್ನ ಮನೆಗೆ ಹಿಂತಿರುಗುವಾಗ ಸ್ಕೂಟಿಯಲ್ಲಿ ಬಂದ ಇಬ್ಬರು ಕಾಮುಕರು ಯುವತಿಗೆ ಹೊಸ ವರ್ಷದ ವಿಶ್ ಮಾಡೋ ನೆಪದಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ರು..! ಅಚ್ಚರಿ ವಿಷ್ಯ ಅಂದ್ರೆ ಈ ರೀತಿಯ ನೀಚ ಕೃತ್ಯ ಎಸಗಿದವರಲ್ಲಿ ಇಬ್ಬರು ಆರೋಪಿಗಳು ಡೆಲಿವರಿ ಬಾಯ್ಸ್..! ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳಲ್ಲಿ ಒಬ್ಬನಾದ ಅಯ್ಯಪ್ಪ ಎಂಬಾತ ಸ್ವಿಗ್ಗಿ ಆನ್‍ಲೈನ್ ಹೋಮ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲ್ಸ ಮಾಡ್ತಾ ಇದ್ರೆ, ಇನ್ನೋರ್ವ ಆರೋಪಿ ಸುದೇಶ್ ಫ್ಲಿಪ್‍ಕಾರ್ಟ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲ್ಸ ಮಾಡ್ತಾ ಇದ್ದ..!
ಬಿರಿಯಾನಿ ಪಾರ್ಸೆಲ್ ಮಾಡ್ತಾ ಇದ್ರು..!
ಇನ್ನು ಪ್ರಮುಖ ಆರೋಪಿಯಲ್ಲೊಬ್ಬನಾದ ಅಯ್ಯಪ್ಪ ಸಂತ್ರಸ್ತ ಯುವತಿಗೆ ಆಗಾಗ ಬಿರಿಯಾನಿ ಪಾರ್ಸೆಲ್ ಕೊಡೋಕೆ ಆಕೆಯ ಕಟ್ಟಡಕ್ಕೆ ಹೋಗ್ತಾ ಇದ್ದ. ಆಗ ಆಕೆಯ ಮೇಲೆ ಒಂದು ಕಣ್ಣಿಟ್ಟಿದ್ದ ಅಯ್ಯಪ್ಪ ತನ್ನ ಗೆಳೆಯರಾದ ಲೆನೊ, ಸುದೇಶ್, ಸೋಮಶೇಖರ್ ಜೊತೆ ಸ್ಕೆಚ್ ಹಾಕಿ ಸಮಯಕ್ಕಾಗಿ ಕಾದು ಕುಳಿತ್ತಿದ್ರು. ಪ್ರತಿ ನಿತ್ಯ ಆರೋಪಿಗಳು ಲಾರೆನ್ಸ್ ರಸ್ತೆಯ ಬಕೆಟ್ ಬಿರಿಯಾನಿ ಹೋಟೆಲ್ ಹತ್ತಿರ ಸಿಗರೇಟ್ ಅಡ್ಡ ಮಾಡ್ಕೊಂಡು ಸಂತ್ರಸ್ತೆಯ ಹಿಂಬಾಲಿಸೋಕೆ ಶುರು ಮಾಡಿದ್ರು. ಡಿ.31ರ ರಾತ್ರಿ ಅಯ್ಯಪ್ಪ, ಲೇನೋ ಹಾಗೂ ಇತರೆ ಆರೋಪಿಗಳು ಬಕೆಟ್ ಬಿರಿಯಾನಿ ಹೋಟೆಲ್‍ಗೆ ಭೇಟಿ ನೀಡಿದ್ರು. ಇದೇ ವೇಳೆ ಅಲ್ಲೆ ಊಟ ಮುಗಿಸ್ಕೊಂಡು ಗೆಳತಿಯ ಜೊತೆ ಎಂ.ಜಿ ರೋಡ್ ಪಾರ್ಟಿಗೆ ಅಂತ ರೆಡಿಯಾಗಿದ್ದ ಆಕೆಯನ್ನು ಸ್ವಲ್ಪ ದೂರ ಹಿಂಬಾಲಿಸಲು ಶುರು ಮಾಡಿದ್ರು. ಆದ್ರೆ ಸ್ವಲ್ಪ ದೂರದಲ್ಲೆ ಯುವತಿ ಮರೆಯಾದಾಗ ಸಮೀಪದ ಬಾರ್ ಒಂದರಲ್ಲಿ ಕುಡಿದು ಕುಪ್ಪಳಿಸುತ್ತಾ ಹ್ಯಾಪಿ ನ್ಯೂ ಇಯರ್ ಅಂತ ಕಿರಚಾಡುತ್ತಾ ಬೈಕ್‍ನಲ್ಲಿ ರೌಂಡ್ ಹಾಕೋಕೆ ಶುರು ಮಾಡಿದ್ರು. ಇದೇ ವೇಳೆ ರಾತ್ರಿ 2.40ರ ಸುಮಾರಿಗೆ ಯುವತಿ ಆಟೋದಲ್ಲಿ ಇರೋದನ್ನ ನೋಡಿದ ಕಾಮುಕರು, ಆಟೋ ಹಿಂಬಾಲಿಸತೊಡಗಿದ್ರು. ಯುವತಿ ಆಟೋ ಇಳಿಯುತ್ತಿದ್ದಂತೆ ಹೊಸ ವರ್ಷದ ವಿಶ್ ಮಾಡೋ ನೆಪದಲ್ಲಿ ಅಯ್ಯಪ್ಪ ಅವಳಿಗೆ ಮುತ್ತುಕೊಟ್ಟು ದೌರ್ಜನ್ಯ ಎಸಗಿದ್ದ..! ಯುವತಿ ತನ್ನನ್ನು ರಕ್ಷಣೆ ಮಾಡೋಕೆ ಅಯ್ಯಪ್ಪ ಕೈಗೆ ಜೋರಾಗಿ ಕಚ್ಚಿದ್ದಾಳೆ. ಈ ವೇಳೆ ಆರೋಪಿ ಆಕೆಯ ಪರ್ಸ್ ಕಿತ್ಕೊಂಡು ರಸ್ತೆಯ ಮೇಲೆ ಜೋರಾಗಿ ತಳ್ಳಿ ಪರಾರಿಯಾಗಿದ್ದು, ಇಡೀ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗ್ತಾ ಇತ್ತು. ಇದೀಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ ಆರೋಪಿ ಪಪ್ಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?