No menu items!
5.1 C
Munich
Friday, April 24, 2026

ಬಾಲಿವುಡ್‍ನ ಖ್ಯಾತ ನಟ ಓಂಪುರಿ ವಿಧಿವಶ..!

Must read

ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟ ಸ್ಯಾಂಡಲ್‍ವುಡ್‍ನ ಧೀಮಂತ ಪ್ರತಿಭೆ ನಟ ಓಂಪುರಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕನ್ನಡ, ಹಿಂದಿ ತಮಿಳು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನ ಅಭಿನಯದ ಛಾಪು ಮೂಡಿಸಿದ್ದ ಓಂಪುರಿ ಇಂದು ಬೆಳಿಗ್ಗೆ ಚಿರ ನಿದ್ರೆಗೆ ಜಾರಿದ್ದಾರೆ..! ಇಂದು ಬೆಳಿಗ್ಗೆ ಮುಂಬೈನ ಅಂಧೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. 1976ರಲ್ಲಿ ಮರಾಠಿ ಚಿತ್ರ ಘಾಷಿರಾಂ ಕೊತ್ವಾಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು ಅನಂತರ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ತೆಲುಗು ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಮೆಘಾ ಹಿಟ್ ಚಿತ್ರ ಎಕೆ-47 ಮೂಲಕ ಎಲ್ಲೆಡೆ ಗುರುತಿಸಿಕೊಂಡ ಓಂಪುರಿ, ಅನಂತರ ಧೃವ, ಸಂತೆಯಲ್ಲಿ ನಿಂತ ಕಬೀರ, ಟೈಗರ್ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈವರೆಗೂ ಸುಮಾರು 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ 5 ಅಂತರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಓಂಪುರಿ ನಿಧನಕ್ಕೆ ಬಾಲಿವುಡ್ ಸೇರಿದಂತೆ ದೇಶದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?

ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article