ಶಾಸಕ ಎನ್ ಎ ಹ್ಯಾರಸ್ ಅವರ ಪುತ್ರ ನಲಪಾಡ್ ನಿಂದ ಹಲ್ಲೆಗೊಳಗಾದ ಯುವಕ ವಿದ್ವತ್ ಈಗ ಬಿಜೆಪಿ ಕಾರ್ಯಕರ್ತ….!
ಹೀಗಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ…! ಈ ಮೂಲಕ ಈ ಪ್ರಕರಣಕ್ಕೂ ರಾಜಕೀಯವನ್ನು ತುರುಕಿಸಲಾಗಿದೆ.
ಹ್ಯಾರಿಸ್ ಅವರ ಮಗ ನಲಪಾಡ್ ಅವರಿಂದ ಹಲ್ಲೆಗೊಳಗಾದ ವಿದ್ವತ್ ತಮ್ಮ ಕಾರ್ಯಕರ್ತ ಎಂದು ತಿಳಿಯಲು ಅಮಿತ್ ಶಾ ಅವರಿಗೆ ಹಲ್ಲೆ ನಡೆದ ಮೂರು ದಿನಗಳ ಬಳಿಕ ಗೊತ್ತಾಗಿದೆ….!ನಲಪಾಡ್ ಅಲ್ಪಸಂಖ್ಯಾತ ಆದ್ದರಿಂದ ಆತನ ವಿರುದ್ಧ ಎಫ್ ಐ ಆರ್ ದಾಖಲಾಗಿಲ್ಲ. ನಮ್ಮ ಕಾರ್ಯಕರ್ತನಿಗೆ ಸಾಯುವ ಹಾಗೆ ಹೊಡೆದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ವಿಷಯದಲ್ಲೂ ಬೇಕಿತ್ತ ರಾಜಕೀಯ…?