ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ್ ಮಾಡೋಕೆ ಸಾಧ್ಯ ಆಗಲ್ಲ: ಕೆಎಸ್ ಈಶ್ವರಪ್ಪ
ಬಾಗಲಕೋಟೆ: ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ. ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ್ ಮಾಡೋಕೆ ಸಾಧ್ಯ ಆಗಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ. ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ್ ಮಾಡೋಕೆ ಸಾಧ್ಯ ಆಗಲ್ಲ.
ದೇಶದ ಪ್ರಧಾನಿ, ಅನೇಕ ರಾಜ್ಯಗಳಲ್ಲಿ ಸಿಎಂಗಳು, ಶಾಸಕರು, ಅನೇಕ ಬಿಜೆಪಿ ಸಂಸದರು ಇರಲು ಕಾರಣ ಹಿಂದೂ ಸಂಸ್ಕೃತಿ. ಇವತ್ತು, ನಿನ್ನೆ ಯಾರೋ ಮಾಡುತ್ತಿರುವ ಪ್ರಯತ್ನದಿಂದ ಅಧಿಕಾರಕ್ಕೆ ಬಂದಿಲ್ಲ. ಅನೇಕ ವರ್ಷಗಳಿಂದ ರಕ್ತ ಬೆವರು ರೂಪದಲ್ಲಿ ಸುರಿಸಿದ ರಾಷ್ಟ್ರ ಭಕ್ತರು ಧರ್ಮ ನಿಷ್ಠರು ಈ ಪಕ್ಷವನ್ನ ಕಟ್ಟಿರೋದು. ಹಾಗಾಗಿ ಈ ಪಕ್ಷ ತಾತ್ಕಾಲಿಕವಾಗಿ ಕೆಲವರ ಕುಟುಂಬದ ಕೈಗೆ ಸಿಕ್ಕಿದೆ. ಇದನ್ನ ಸರಿ ಮಾಡೋದಕ್ಕೆ ಖಂಡಿತಾ ಆಗುತ್ತೆ, ಸರಿ ಆಗೇ ಆಗುತ್ತೆ ಅನುಮಾನವಿಲ್ಲ ಎಂದರು.