BJPಯಲ್ಲಿ ಹೊಸ ಜವಾಬ್ದಾರಿ ಹೊತ್ತ ನಟ ವಿಕ್ರಂ ಸೂರಿ!
ನಟ, ನಿರ್ದೇಶಕ ವಿಕ್ರಮ್ ಸೂರಿ ಭಾರತೀಯ ಜನತಾ ಪಕ್ಷ ( ಬಿಜೆಪಿ) ದಲ್ಲಿ ನೂತನ ಜವಬ್ದಾರಿ ಹೊತ್ತಿದ್ದಾರೆ. ಕಲಾ ಸೇವೆಯಲ್ಲಿ ತೊಡಗಿರುವ ವಿಕ್ರಮ್ ಸೂರಿ ರಾಜಕೀಯ ರಂಗದಲ್ಲೂ ಸಾಂಸ್ಕೃತಿಕ ವಿಭಾಗದಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ನಟ, ನಿರ್ದೇಶಕ, ನೃತ್ಯಗಾರ, ನಿರೂಪಕ ಹೀಗೆ ಕಲಾ ಕೃಷಿಯಲ್ಲಿ ಬ್ಯುಸಿ ಇರುವ ವಿಕ್ರಮ್ ಅವರನ್ನು ಬಿಜೆಪಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಾಂಸ್ಕೃತಿಕ ಪ್ರಕೋಷ್ಠದ ಸಹ ಸಂಚಾಲಕರನ್ನಾಗಿ ನೇಮಿಸಿದೆ. ಈ ಮೂಲಕ ವಿಕ್ರಮ್ ಬಿಜೆಪಿಯಲ್ಲಿ ಹೊಸ ಜವಾಬ್ದಾರಿ ಹೊರುತ್ತಿದ್ದಾರೆ.






