ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್ ಗೆ ಹಾಹಾಕಾರ

0
29

ಬೆಂಗಳೂರು : ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್ ಗೆ ಹಾಹಾಕಾರ ಎದುರಾಗಿದ್ದು, ಖಾಸಗಿ ಬಂಕ್ ಗಳತ್ತ ಮೊರೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಸಗಟು ಖರೀದಿ ದರ ಹೆಚ್ಚಳ ಕಾರಣದಿಂದ ಚಿಲ್ಲರೆ ವ್ಯಾಪಾರ ದಲ್ಲಿ ಬಿಎಂಟಿಸಿ ನಿಗಮವು ತೈಲ ಖರೀದಿ ಮಾಡುತ್ತಿತ್ತು.

 

 

 

ನಿತ್ಯ ಚಿಲ್ಲರೆ ವ್ಯಾಪಾರಿಗಳು ಟ್ಯಾಂಕರ್ ಗಳ ಮೂಲಕ ಬಿಎಂಟಿಸಿ ಡಿಪೋಗಳಿಗೆ ಇಂಧನ ಪೂರೈಕೆ ಮಾಡುತ್ತಿದ್ದರು. ಆದರೆ ಇಂದು ಬಂಕ್ ಗಳಿಗೆ ಇಂಧನ ಪೂರೈಕೆ ಮಾಡದ ಕಾರಣ ಡಿಪೋ ಗಳಲ್ಲಿ ಡೀಸೆಲ್ ಖಾಲಿ – ಖಾಲಿ ಆಗಿವೆ. ಡಿಪೋಗಳಲ್ಲಿ ಡಿಸೇಲ್ ಖಾಲಿಯಾಗಿರುವ ಹಿನ್ನೆಲೆ, ಬಿಎಂಟಿಸಿ ಬಸ್ ಗಳು ಖಾಸಗಿ ಬಂಕ್ ಗಳ ಮುಂದೆ ನಿಂತಿರುವ ದೃಶ್ಯ ಕಂಡು ಬಂದಿದೆ. ಬಹುತೇಕ ಡಿಪೋಗಳಲ್ಲಿ ಸ್ಟಾಕ್ ಇರುವ ಡಿಸೇಲ್ ಇಂದು ಖಾಲಿಯಾಗುವ ಸಾಧ್ಯತೆ ಇದ್ದು, ಸಮಸ್ಯೆ ಬಗೆಹರಿಯದಿದ್ದರೆ ನಾಳೆ ಬಹುತೇಕ ಬಸ್ ಗಳು ರೋಡಿಗೆ ಇಳಿಯೋದು ಅನುಮಾನ ಎಂದು ಹೇಳಲಾಗಿದೆ. ಈ ಮೂಲಕ ಎಲ್ಲಾ ಡಿಪೋಗಳಲ್ಲಿ ಸ್ಟಾಕ್ ಖಾಲಿಯಾದ್ರೆ ನಾಳೆ ಬಸ್ ಸಂಚಾರ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here