ಈ ಸ್ಟಾರ್ ನಟಿ ಪತಿಗೆ ಸಿಕ್ಕಾಪಟ್ಟೆ ಬೈತಾರೆ. ಶಾಪನೂ ಹಾಕ್ತಾರೆ...!.ಯಾರಿವರು…?
ಬಾಲಿವುಡ್ ನಟಿ ರಾಣಿ ಮುಖರ್ಜಿ ತನ್ನ ಪತಿ ಆದಿತ್ಯಾ ಚೋಪ್ರಾ ಗೆ ಬೈತಾರಂತೆ, ಶಾಪನೂ ಹಾಕ್ತಾರಂತೆ…! ಈಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ತಾಯಿ ಆದ ಬಳಿಕ ರಾಣಿಮುಖರ್ಜಿ ‘ಹಿಚ್ಕಿ’ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.
ಸಿನಿಮಾದ ಪ್ರೊಮೋಶನ್ ವೇಳೆ ನೇಹಾ ಧುಪಿಯಾ ಚಾಟ್ ಶೋನಲ್ಲಿ ಈ ವಿಷ್ಯವನ್ನು ಹೇಳಿದ್ದಾರೆ. ನೀವು ಪತಿಗೆ ಬೈತೀರ ಎಂಬ ಪ್ರಶ್ನೆ ನಿರೂಪಕಿಯಿಂದ ಬಂದಾಗ , ಹೌದು,ನಾನು ಬೈತೀನಿ, ಶಾಪನೂ ಹಾಕ್ತೀನಿ ಎಂದು ಹೇಳಿದ್ದಾರೆ. ಆದರೆ,ಇದು ಕೋಪದಿಂದಲ್ಲ ಪ್ರೀತಿಯಿಂದ ಎಂದಿದ್ದಾರೆ. ಪ್ರೀತಿಸುವವರ ಜೊತೆ ಜಗಳ ಆಡ್ತಿರ್ತೀನಿ ಎಂದು ಹೇಳಿದ್ದಾರೆ.