ಯಾಕೋ ಮತ್ತೆಮತ್ತೆ ನೆನಪಾಗ್ತಿದಿಯ ಕಣೇ..! ಕಾರಣ ಹೇಳದೇ ಬಿಟ್ಟು ಹೋದವಳಿಗೊಂದು ಪತ್ರ..!

Date:

ನಂಗಿನ್ನೂ ಗೊತ್ತಿಲ್ಲ, ನೀನು ನ್ನ ಅದ್ಯಾಕೆ ಅಷ್ಟು ಪ್ರೀತಿಸ್ದೆ..? ಅದ್ಯಾಕೆ ಹೇಳದೇ ಕೇಳದೇ ಕಾರಣ ನಡದೇ ಬಿಟ್ಟು ಹೋದೆ..? ಅವತ್ತು ಸಾಯಿಬಾಬಾ ದೇವಸ್ಥಾನದಲ್ಲಿ ನನ್ನ ಕೈಲಿದ್ದ ಬಾಬಾ ಪ್ರಸಾದ ತಗೊಂಡು ಮದುವೆ ಆದ್ಮೇಲೂ ಇದೇ ದೇವಸ್ಥಾನಕ್ಕೆ ಒಟ್ಟಿಗೇ ಬರೋಣ ಅಂದವಳು, ದೇವರೇ ಇಲ್ಲ ಅಂತ ಅನ್ನಸೋ ಹಾಗೆ ಮಾಡಿಬಿಟ್ಟಿದಿಯ..? ನಾನು ಅಂತಹ ತಪ್ಪೇನು ಮಾಡಿದೀನಿ ಅಂತಾದ್ರೂ ಹೇಳು ಮಾರಾಯ್ತಿ..! ನೆಮ್ಮದಿಯಾಗಿ ಉಳಿದ ಜೀವನನಾದ್ರೂ ಸವೆದುಬಿಡ್ತೀನಿ..! ಇಲ್ಲಾಂದ್ರೆ ಸಾಯೋ ತನಕ ನೀನು ಬಿಟ್ಟು ಹೋದ ಕಾರಣ ಹುಡುಕಿ ಹುಡುಕೀನೇ ಸತ್ತು ಹೋಗಿಬಿಡ್ತೀನಿ..! ಪ್ಲೀಸ್, ಹೇಳಿ ಹೋಗು ಕಾರಣ..!

 

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ನಂಗೆ ಅವತ್ತು ನೀನು ಮಂತ್ರಿ ಮಾಲ್ ನ ಮಾಮ್ ಅಂಡ್ ಮಿ ಅಂಗಡಿ ಎದುರು ನಿಂತು, ನಂಗೆ ಹುಟ್ಟೋ ಮಗುವಿಗೆ ಇದೇ ಅಂಗಡೀಲಿ ಹೊಸ ಬಟ್ಟೆ ತಗೊಳೋಣ ಅಂತ ಹೇಳಿದಾಗ ನಿನ್ನನ್ನು ಎತ್ತಿ ಮುದ್ದಾಡಬೇಕು ಅನ್ಸಿತ್ತು. ನಾನಿನ್ನೂ ಪ್ರೀತಿ ಮಾಡೋ ಗುಂಗಲ್ಲಿದ್ದೆ.. ಆದ್ರೆ ನೀನು ಅದಾಗಲೇ ಸಂಸಾರ ಮಾಡೋದರ ಬಗ್ಗೆ ಯೋಚನೆ ಮಾಡ್ತಿದ್ದೆ..! ಅದಕ್ಕೇ ನೀನು ನಂಗೆ ಜಾಸ್ತಿ ಇಷ್ಟವಾಗ್ತಿದ್ದೆ. ಇವತ್ತು ಮಂತ್ರಿ ಮಾಲ್ ಕಡೆ ತಲೆ ಹಾಕಿ ಮಲಗೋದು ಕಷ್ಟವಾಗಿದೆ..! ಅಪ್ಪಿತಪ್ಪಿ ಮಂತ್ರಿಮಾಲ್ ಗೆ ಕಾಲಿಟ್ಟರೆ ಎದೆಎದೆ ಹೊಡ್ಕೊಂಡು ಬೊಬ್ಬೆ ಹೊಡೆದುಬಿಡ್ತೀನೇನೋ ಅನ್ನೋ ಆತಂಕ ನಂಗೆ..! ಪ್ಲೀಸ್ ಕಣೇ, ನಾನೇನೇ ತಪ್ಪು ಮಾಡಿದ್ರೂ ವಾಪಸ್ ಬಂದು ಕೆನ್ನೆ ಸಾವಿರ ಸಲ ಮನಸೋ ಇಚ್ಛೆ ಬಾರಿಸಿ ` ಐ ಲವ್ ಯೂ ಕಣೋ ಕತ್ತೆ’ ಅಂತ ಅಪ್ಪಿಬಿಡು… ಸಾಯೋ ತನಕ ನಿನ್ನನ್ನ ಬಿಟ್ಟು ಆ ಕಡೆ ಈ ಕಡೆ ಹೋಗದೇ ನೋಡ್ಕೋತೀನಿ..ಪ್ಲೀಸ್..!
ನಂಗೆ ಇವತ್ತಿಗೂ ಅರ್ಥ ಆಗದೇ ಇರೋದು ಏನು ಗೊತ್ತಾ..? ನೀನು ನನ್ನನ್ನ ಅದ್ಹೇಗೆ ಒಪ್ಪಿಕೊಂಡೆ ಅಂತ..!? ಯಾವ ಆ್ಯಂಗಲ್ ನಲ್ಲೂ ನೀಮಗೆ ನಾನು ಸೆಟ್ ಆಗಲ್ಲ.. ನಾನು ಕರಿಸುಬ್ಬ, ನೀನು ಬಿಳಿ ಪಾರಿವಾಳ..! ನಾನು ನೋಡೋದು ಬರೀ ದರ್ಶನ್, ದುನಿಯಾ ವಿಜಿ ಸಿನಿಮಾ, ನೀನು ಮಾತೆತ್ತಿದ್ರೆ ಶಾರುಖ್ ಖಾನ್, ಸಲ್ಮಾನ್ ಖಾನ್ ಅಂತಿದ್ದೆ..! ನಾನು ನೀನು ಜೊತೆಯಾಗಿ ಹೋಗ್ತಿದ್ರೆ, ಹೋಗೋರ್ ಬರೋರೆಲ್ಲಾ ನನ್ನನ್ನೇ ನೋಡೋರು.` ನನ್ ಮಗಾ, ಎಂಥಾ ಫಿಗರ್ ಪಟಾಯ್ಸಿದ್ದಾನೆ ನೋಡು’ ಅನ್ನೋ ಹಾಗೆ. ಆದ್ರೆ ನೀನು ಮಾತ್ರ, ನನ್ನ ಕೈಕೈ ಹಿಡ್ಕೊಂಡು, ನನ್ನ ಬಿಟ್ರೆ ಪ್ರಪಂಚಾನೇ ಇಲ್ಲ ಅನ್ನೋ ತರ ಓಡಾಡ್ತಿದ್ದೆ. ಆದ್ರೆ ಇವತ್ತು…? ನೀನು ಹಿಡಿದು ಓಡಾಡಿದ ಕೈಗೆ ಕಾದ ಕಬ್ಬಿಣದಲ್ಲಿ ಬರೆ ಇಟ್ಕೊಂಡು ಗಾಯ ವಾಸಿ ಮಾಡಿಕೊಳ್ತಿದೀನಿ..! ಆ ಗಾಯ ವಾಸಿ ಆಗುತ್ತೆ, ಆದ್ರೆ ನೀನು ಬಿಟ್ಟು ಹೋದ ಗಾಯ ಇದಿಯಲ್ಲ, ಅದು ಸಾಯೋ ತನಕ ವಾಸಿ ಆಗಲ್ಲ ಕಣೇ ನನ್ನ ಬಂಗಾರ..! ಪ್ಲೀಸ್ ಕಣೇ, ವಾಪಸ್ ಬಂದು, ನನ್ನ ಗಾಯಕ್ಕೆ ಕ್ರೀಂ ಹಚ್ಚಿ ವಾಸಿ ಮಾಡಿ, ಮತ್ತೆ ಕೈಕೈ ಹಿಡ್ಕೊಂಡು ಊರೂರು ಸುತ್ತಿಸೇ..! ಪ್ಲೀಸ್,…..
ನಿನ್ನ ಫೋನ್ ಅಂತೂ ಒಂದು ವಾರದಿಂದ ಸ್ವಿಚ್ ಆಫ್..! ನಿಮ್ಮಮ್ಮನಿಗೂ ಫೋನ್ ಮಾಡಿದ್ದೆ, ಅವರೂ ರಿಸೀವ್ ಮಾಡ್ತಿಲ್ಲ. ನೀನು ಕಳಿಸಿದ ಲಾಸ್ಟ್ ಮೆಸೇಜ್ ಸಾವಿರ ಸಲ ಓದಿದೀನಿ.. ಅದ್ಹೇಗೆ ಆ ತರ ಕಳಿಸಿಬಿಟ್ಟೆ ನೀನು..? ` ನೋಡು, ಇನ್ಮುಂದೆ ನಂಗೆ ನಿಂಗೆ ಯಾವ ಸಂಬಂಧಾನೂ ಇಲ್ಲ. ಎಲ್ಲಾ ಮರೆತುಬಿಡು..! ನಂಗೆ ಡಿಸ್ಟರ್ಬ್ ಮಾಡಿದ್ರೆ ನಾನು ಸತ್ತೇ ಹೋಗ್ತೀನಿ..!’ ಅಂತ. ಬಿಟ್ಟು ಬಿಡೋಕೆ ನಾವೇನು ಸಣ್ಣ ಮಕ್ಕಳ ಅಪ್ಪ ಅಮ್ಮ ಆಟ ಆಡ್ತಾ ಇದ್ವಾ..? ಅಥವಾ ಮೊನ್ನೆಮೊನ್ನೆ ಕಾಲೇಜಲ್ಲಿ ಲವ್ ಮಾಡಿದ್ವಾ..? ನನ್ನ ಲೈಫಲ್ಲಿ ಮನೇಲಿ ಯಾರು ಸತ್ತುಹೋದ್ರೂ ಕಣ್ಣೀರು ಹಾಕದೇ ಗಟ್ಟಿ ಮನಸ್ಸು ಮಾಡ್ಕೊಂಡು ಇರೋನು ನಾನು, ಇವತ್ತು ಆ ಮೆಸೇಜ್ ನೋಡಿ,ನೋಡಿ ಅತ್ತುಅತ್ತು ಸುಸ್ತಾಗಿ ಹೋಗಿದ್ದೇನೆ..! ಯಾಕೋ ಪುಟ್ಟ ಹಿಂಗ್ ಮಾಡ್ತಿದಿಯ..? ಅಂತಾ ತಪ್ಪು ನಾನೇನ್ ಮಾಡಿದೀನಿ..? ಅದುನ್ನಾದ್ರೂ ಹೇಳು.. ಕೈ ಮುಗೀತೀನಿ ಕಣೇ, ನಿನ್ ಬಿಟ್ಟು ನಾನು ಬದ್ಕಲ್ಲ ಕಣೇ..! ಅದು ನಿಂಗೂ ಗೊತ್ತಲ್ವಾ..?
3 ವರ್ಷ ಆಗಿತ್ತು ನಾನು ಉದ್ದ ಕೂದಲು ಬಿಟ್ಟು. ಅಮ್ಮ ಹೇಳಿದ್ರೂ ಕಟ್ ಮಾಡ್ಸಿರಲಿಲ್ಲ..! ಆದ್ರೆ ನೀನು ಹೇಳಿದ್ದಕ್ಕೆ ಒಂದೇ ಗಂಟೇಲಿ ಕಟಿಂಗ್ ಮಾಡಿಸ್ಕೊಂಡು ನೀಟಾಗಿ ನಿನ್ನ ಎದುರು ನಿಂತಿರಲಿಲ್ವಾ..? ನೀನು ಹೇಳಿದೆ ಅಂತ, ನನ್ನ ಫೇವರೇಟ್ ಟೀ ಶರ್ಟ್ ಹಾಕೋದೇ ಬಿಡ್ಲಿಲ್ವಾ..? ನಿಂಗಿಷ್ಟ ಅಂತ 5 ವರ್ಷದಿಂದ ಚೇಂಜ್ ಮಾಡದ ಡಿಯೋಡ್ರೆಂಟ್ ಚೇಂಜ್ ಮಾಡ್ಲಿಲ್ವಾ..? ನಿನ್ನನ್ನ ಬಿಟ್ಟು ಬೇರೆ ಯಾರನ್ನೂ ಮದುವೆ ಆಗಲ್ಲ ಅಂತ ಬೆಳಗ್ಗೆ 7 ಗಂಟೆಗೆ ಬಾಬಾ ದೇವಸ್ಥಾನದ ಎದುರು ಕೈಯಲ್ಲಿ ಕಪರ್ೂರ ಹಚ್ಚಿಲ್ವಾ..? ನನ್ನ ಆರ್ ಎಕ್ಸ್ ಬೈಕ್ ಮಾರಿ, ನಿಂಗಿಷ್ಟ ಅಂತ ಡೀಸೆಂಟಾಗಿ ಹೋಂಡಾ ಯೂನಿಕಾರ್ನಾ ತಗೊಳ್ಳಿಲ್ವಾ..? ಏನು ಮಾಡಿಲ್ಲ ಹೇಳು…!? ಇನ್ನೂ ಏನು ಮಾಡ್ಬೇಕು ಹೇಳು..! ಆದ್ರೆ ಪ್ಲೀಸ್ ನನ್ನ ಹೀಗೆ ಬಿಟ್ಟು ಮಾತ್ರ ಹೋಗಬೇಡ.. ನನ್ನನ್ನ ನಿನ್ನಷ್ಟು ಪ್ರೀತಿಸೋರು ಮತ್ಯಾವತ್ತೂ ಸಿಗಲ್ಲ ಕಣೇ..! ನಂಗೊತ್ತು, ನೀನು ಕಾರಣ ಇಲ್ಲದೇ ಬಿಟ್ಟು ಹೋಗಿರೋಕೆ ಚಾನ್ಸ್ ಇಲ್ಲ ಅಂತ..! ಆದ್ರೆ ಅದೇನು ಅಂತ ನಂಗೆ ಹೆಂಗೆ ಗೊತ್ತಾಗೋದು..? ಅಪ್ಪಅಮ್ಮ ಬೇಡ ಅಂದಿದ್ರೆ ಹೇಳು, ಅವರ ಎದುರು ಕೂತು ನಾನು ಮಾತಾಡ್ತೀನಿ..! ನಿನ್ನನ್ನ ಪಡೀಬೇಕು ಅಂದ್ರೆ ಏನು ಮಾಡೋಕೆ ಬೇಕಾದ್ರೂ ರೆಡಿ ನಾನು. ನಂಗೆ ನೀನು ಬೇಕು..! ನಿನ್ನ ಪ್ರೀತಿ ಬೇಕು.. ನನ್ನ ಬೈಕಿನ ಹಿಂದೆ ಕೂರು ನೀನು ಕಿವಿಯಲ್ಲಿ ಹೇಳ್ತಿದ್ದ ಆ `ಐ ಲವ್ ಯೂ’ ಕೇಳಬೇಕು..! ನೀನು ಮತ್ತೆ ಮ್ಯಾಕ್ ಡೋನಾಲ್ಡ್ ರೆಸ್ಟೋರೆಂಟ್ ನಲ್ಲಿ ನನ್ನ ಕಿವಿ ಹಿಂಡಿ ಆರ್ಡರ್ ಮಾಡೋದು ಹೇಳಿಕೊಡಬೇಕು..! ನಂಗೆ ನೀನು ಬೇಕು..! ನೀನೇ ನನ್ನ ಪ್ರಪಂಚ..! ನಂಗೊತ್ತು ಇದನ್ನು ನೀನೇ ಓದೇ ಓದ್ತಿಯ..! ಓದಿದ ಮೇಲೆ ಮೆಸೇಜ್ ಮಾಡು, ಕಾಯ್ತಾ ಇರ್ತೀನಿ..! ಮಾಡಿಲ್ಲ ಅಂದ್ರೆ, ನಿಂಗೂ ಮೆಸೇಜ್ ಬರುತ್ತೆ..! ನನ್ನ ಕಡೆಯಿಂದ ಅಲ್ಲ, ನಮ್ಮ ಮನೆಯಿಂದ..! ಲವ್ ಯೂ ಎವರ್..
ನಿನ್ನ ಪ್ರೀತಿಯ ಕತ್ತೆ…

-ಕೀರ್ತಿ ಶಂಕರಘಟ್ಟ

Like us on Facebook  The New India Times

 

POPULAR  STORIES :

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

 

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...