ಬ್ರಹ್ಮಾನಂದಮ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಹಾಲಿವುಡ್‍ನಲ್ಲಿ ಇತಿಹಾಸ ಸೃಷ್ಟಿಸಿ, ತನ್ನ ಕಾಮಿಡಿಯ ಮೂಲಕವೇ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಚಾರ್ಲಿ ಚಾಪ್ಲಿನ್, ಮಿಸ್ಟರ್ ಬೀನ್ ತರ ಇಂಡಿಯಾದಲ್ಲಿ ಹಿಸ್ಟ್ರಿ ಸೃಷ್ಟಿಸಿದ ಕಾಮಿಡಿಯನ್ ಅಂದ್ರೆ ಅದು ತೆಲುಗು ನಟ ಬ್ರಹ್ಮಾನಂದಮ್.
ತನ್ನ ಪಾತ್ರಕ್ಕೆ ಸರಿಯಾಗಿ ಜೀವ ತುಂಬುವ ನಟ ಬ್ರಹ್ಮಾನಂದಮ್. ಹೆಚ್ಚಿನವರು ಮೂವಿ ನೋಡಲು ಥಿಯೇಟರ್ ಗೆ ಹೋಗ್ತಾರೆ ಅಂದ್ರೆ ಅದು ಬ್ರಹ್ಮಾನಂದಮ್ ನಂತಹ ಕಾಮಿಡಿಯ ನಟ ಇರ್ತಾನೆ ಎನ್ನುವ ಕಾರಣಕ್ಕೆ. ಒಬ್ಬ ವ್ಯಕ್ತಿಗೆ ಕಣ್ಣೀರ್ ಹಾಕುಸ್ಬಹುದು ಬಟ್ ನಗಿಸೊದು ಅಷ್ಟು ಸುಲಭದ ಕೆಲಸ ಅಲ್ವೇ ಅಲ್ಲ ಕಣ್ರಿ. ಚಿರಂಜೀವಿ, ಬಾಲಯ್ಯ, ಪವನ್ ಕಲ್ಯಾಣರಂತಹ ನಟರಿಂದ ಇಂದಿನ ಜಮಾನದ ಹೊಸ ನಟರವರೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಮಾಸ್ ಹಿರೋಗಳು, ಸೂಪರ್ ಸ್ಟಾರ್, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಹಿರೋಗಳು ತೆರೆಮೇಲೆ ಬಂದಾಗ ಹೇಗೆ ಸಿಳ್ಳೆ, ಕೇಕೆ, ಚಪ್ಪಾಳೆ ಬರುತಿತ್ತೋ.. ಬ್ರಹ್ಮಾನಂದಮ್ ಎಂಟ್ರಿಕೊಟ್ರು ಅಂದ್ರೆ ಅಷ್ಟೆ ಮಟ್ಟಿಗೆ ಇವ್ರಿಗೂ ಜನ್ರು ಪ್ರತ್ಸಾಹ ಕೊಡ್ತಿದ್ರು ಅದು ನಿಮ್ಗೂ ಗೊತ್ತಿರೊ ವಿಷ್ಯ.
ಇವ್ರಿಗೆ ಸ್ಕ್ರಿಪ್ಟ್ ಕಾಮಿಕ್ ಆಗಿದ್ರೆ ಮಾತ್ರ ಕಾಮಿಡಿ ಚನ್ನಾಗಿ ಬರೋದು, ಥಿಯೇಟರ್ ವರೆಗೂ ಬಂದು ಹಣಕೊಟ್ಟು ಮೂವಿ ನೋಡುವ ಜನ್ರಿಗೆ ಎಂಟರ್‍ಟೈನ್‍ಮೆಂಟ್ ಸಿಕ್ಕುವುದು ಅಂಥ ಅಂದುಕೊಂಡ್ರೆ ತಪ್ಪು ಕಣ್ರಿ. ಥಿಯೇಟರ್‍ವರೆಗೂ ಜನ ಹಣಕೊಟ್ಟು ಮಜಾ ತಕ್ಕೊಂಡು ಕೊಟ್ಟಕಾಸಿಗೆ ಲಾಸಿಲ್ಲ ಅಂದುಕೊಳ್ತಾರೆ ಅಂದ್ರೆ ಅವರ ನಟನೆಗೆ ಕಣ್ರಿ. ಅವ್ರು ಆ ಸ್ಕ್ರಿಪ್ಟ್ ಗೆ ಹೇಗೆ ಜೀವ ತುಂಬ್ತಾರೆ ಅನ್ನುವುದು ಮುಖ್ಯ ಆಗುತ್ತೆ. ಕಾಮಿಡಿಯನ್ ಬಂದ್ರೆ ಸಾಕು ಅವ್ನು ಮಾತ್ನಾಡ್ದಲೆ ಜನ ನಗ್ತಾರೆ ಅಂದ್ರೆ ಅದು ಅವ್ನ ನಟನಾ ಕೌಶಲ್ಯದಿಂದ.
ಲಕ್ಷಾಂತರ ಜನ್ರನ್ನು ನಗಿಸಿದ, ನಗಿಸುತ್ತಿರುವ ಬ್ರಹ್ಮಾನಂದಮ್ ಕಣ್ಣೀರಿಟ್ಟಿದ್ದಾದ್ರ ಯಾಕೆ ಎನ್ನುವ ಡೌಟ್ ಕಾಡುತ್ತಿವೆ ಅಲ್ವಾ. ಆದ್ರೆ ಅವ್ರು ಕಣ್ಣೀರಿಟ್ಟಿದ್ದು ಅವ್ರ ಸ್ವತಃ ಪ್ರಾಬ್ಲೆಮ್‍ಗೆ ಅಲ್ವಂತೆ ಕಣ್ರಿ. ತೆಲುಗಿನ ಬಾಸ್, ಮಾಸ್, ಸೂಪರ್‍ಸ್ಟಾರ್ ತೆಲುಗಿನ ಚಿರಂಜೀವಿ ಅವ್ರ 150 ನೇ ಸಿನಿಮಾ ಖೈದಿ ನಂ.150 ಚಿತ್ರದಿಂದ ಅಂತೆ. ಇದೇನಪ್ಪಾ ಚಿತ್ರ ಬಿಡುಗಡೆಗೊಂಡು ಒಳ್ಳೆ ಕಲೆಕ್ಷನ್ ಮಾಡ್ತಿದಿಯಲ್ಲಾ ಮತ್ಯಾಕ್ ಕಣ್ಣೀರ್ ಹಾಕ್ತಿದ್ದಾರೆ, ಚಿತ್ರಕ್ಕೂ ಇವ್ರು ಕಣ್ಣೀರ್ ಹಾಕೊಕು ಏನ್ ಸಂಬಂಧ ಅಂತ ಅನ್ನಿಸರ್ಬೇಕು ಅಲ್ವಾ. ಹೌದು ಇಲ್ಲೇ ಇರೋದು ನೋಡಿ ಅಸಲಿ ಸತ್ಯ.
10ವರ್ಷದ ಬಳಿಕ ಚಿರಂಜೀವಿ ಮಾಸ್ ಆಗಿ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಬ್ರಹ್ಮಾನಂದಮ್ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮತ್ಯಾಕೆ ಅಳ್ಬೇಕು ಅಲ್ವಾ, ಹೌದು ಅಳುತ್ತಿರೋದಕ್ಕೆ ಕಾರಣ ಇದಿಯಂತೆ ಈ ಚಿತ್ರದಲ್ಲಿ ಬ್ರಹ್ಮಾನಂದಮ್ ಅವ್ರಿಗೆ ಸರಿಯಾಗಿ ಬಿಂಬಿಸಿಲ್ಲ, ಅವ್ರ ಡೈಲಾಗ್ ಕೂಡ ಪಂಚಿಂಗ್ ಆಗಿ ಮೂಡಿ ಬಂದಿಲ್ಲ ಅವ್ರನ್ನು ಬೇಕಾಬಿಟ್ಟಿಯಾಗಿ ಒಬ್ಬ ಕಾಮಿಡಿಯನ್ ಚಿತ್ರಕ್ಕೆ ಬೇಕಲ್ವಾ ಎನ್ನುವಂತೆ ತೋರಿಸಿದ್ದಾರೆ. ಅವರ ನಟನೆಗೆ ಸರಿಯಾದ ಪಾತ್ರವನ್ನು ನೀಡದೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರಂತೆ ಈ ಕಾರಣದಿಂದ ಕಣ್ಣೀರಿಟ್ಟಿದ್ದಾರೆ ಎನ್ನಲಾಗುತ್ತಿದಿಯಂತೆ.
ಥಿಯೇಟರ್‍ಗೆ ಜನ ನೂಕುನುಗ್ಗಲಾಗಿ ಟಿಕೆಟ್ ಖರೀದಿಸಿ ಚಿತ್ರ ನೋಡುತ್ತಾರೆ ಅಂದ್ರೆ ಅದು ಕೇವಲ ಒಬ್ಬ ನಾಯಕನಿಂದ ಮಾತ್ರ ಸಾಧ್ಯವಿಲ್ಲ ಅದ್ರಲ್ಲಿ ಒಬ್ಬ ಸ್ಟಾರ್ ಕಾಮಿಡಿಯನ್ ಪಾತ್ರ ಕೂಡ ಇರುತ್ತದೆ ಎನ್ನುವುದು ಅಭಿಮನಿಗಳ ಕೊರಗು. ಏನೇ ಆಗ್ಲಿ ಗಿನ್ನಿಸ್ ಪುಸ್ತಕ್ದಲ್ಲಿ ತನ್ನ ಹೆಸ್ರನ್ನು ಅಚ್ಚಳಿಯದಾಗೆ ಮಾಡಿರುವ ಬ್ರಹ್ಮಾನಂದಮ್ ಅವ್ರಿಗೆ ಮುಂದಾದ್ರು ಒಳ್ಳೆ ಪಾತ್ರ ಕೊಟ್ಟು ಗೌರವಿಸಲಿ ಎನ್ನುವುದು ಅಭಿಮಾನಿಗಳ ಆಸೆಯಂತೆ.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್