ಬ್ರಹ್ಮಚಾರಿಣಿ ದೇವಿಯೆಂದರೆ ಜ್ಞಾನವನ್ನು ಹೊಂದಿರುವಾಕೆ. ಒಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಕಮಂಡಲವಿದೆ. ಬ್ರಹ್ಮಚಾರಿಣಿ ದೇವಿಯು ಭಕ್ತರಿಗೆ ಜ್ಞಾನವನ್ನು ನೀಡುವಳು. ಬ್ರಹ್ಮಚಾರಿಣಿ ಎಂದರೆ ಮದುವೆಯಾಗದೆ ಇರುವ ಮತ್ತು ಯುವ ಎಂದರ್ಥ. ಬ್ರಹ್ಮಚಾರಣಿ ದೇವಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸವು ಸಿಗುವುದು.
ಬ್ರಹ್ಮಚಾರಣಿ ದೇವಿಯು ಮಂಗಳ ಗ್ರಹದ ಅಧಿಪತಿ ಎಂದು ಹೇಳಲಾಗುತ್ತದೆ. ಆಕೆಯು ಎಲ್ಲಾ ಅದೃಷ್ಟವನ್ನು ನೀಡುವಳು ಮತ್ತು ಭಕ್ತರ ಮಾನಸಿಕ ಕ್ಷೋಭೆ ನಿವಾರಣೆ ಮಾಡಿ ಅವರ ದುಃಖ ನಿವಾರಿಸುವಳು. ಮಂಗಳ ದೋಷ ಮತ್ತು ಜಾತಕದಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು.
ಬ್ರಹ್ಮಚಾರಿಣಿ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ, ಇವುಗಳ ವೃದ್ಧಿ ಆಗುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆ ಇದ್ದರೆ ಆತನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆಯಿದೆ. ಈಕೆಯ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.
ಪೂಜಾಕ್ರಮ
ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ . ದೇವಿಗೆ ವಿಶೇಷ ಪೂಜೆ ಸಲ್ಲಿಸಿ . ದುರ್ಗಾ ಸಪ್ತಶತಿ ಪಾರಾಯಣ ಮಾಡಿದರೆ ಒಳಿತು
ಬ್ರಹ್ಮಚಾರಿಣಿ ದೇವಿಗೆ ತುಂಬಾ ಇಷ್ಟವಾಗಿರುವಂತಹ ಹೂವೆಂದರೆ ಅದು ಮಲ್ಲಿಗೆ. ಇದರಿಂದ ನವರಾತ್ರಿಯ ಎರಡನೇ ದಿನವು ನೀವು ಮಲ್ಲಿಗೆ ಹೂವಿನೊಂದಿಗೆ ಪೂಜೆ ಮಾಡಿ, ಬ್ರಹ್ಮಚಾರಿಣಿ ತಾಯಿಯ ಆಶೀರ್ವಾದ ಪಡೆಯಿರಿ.
ಬ್ರಹ್ಮಚಾರಿಣಿಗೆ ಬೆಲ್ಲದಿಂದ ಮಾಡಿದ ಖಾದ್ಯ ಸಮರ್ಪಿಸಬೇಕು .
ಬ್ರಹ್ಮಚಾರಿಣಿಯ ಮಂತ್ರ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ದಾಧನಾ ಕರ್
ಪದ್ಮಭಯಮಕ್ಷ್ಮಾಳ ಕಮಂಡಲೂ
ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ತಾಯಿಯ ಪ್ರಾರ್ಥನೆ
ದಧಾನಾ ಕರ್ ಪದ್ಮಭಯಮಕ್ಷ್ಮಾಳ ಕಮಂಡಲೂ
ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ