ಕಾಲಿಲ್ಲದೇ ಈಜುವ ಎಂಟರ ಪೋರ..! ಇವನಿಗೆ ಎರಡೂ ಕಾಲಿಲ್ಲ, ಆದರೆ ಈಜುವುದರಲ್ಲಿ ನಿಸ್ಸೀಮ..!

Date:

ನಿಮಗೆ ಸೆರಿಯನ್ ಕಿಲ್ಸೋ ಗೊತ್ತಾ..?! ಗೊತ್ತಿಲ್ಲದೇ ಇದ್ದರೆ ಗೊತ್ತು ಮಾಡಿಕೊಳ್ಳಿ..! ಇವನು ಇಂಗ್ಲೆಂಡಿನ ಬಾಲಕ. ಹುಟ್ಟುವಾಗಲೇ ಅನಾರೋಗ್ಯದಿಂದ ಬಳಲ್ತಾ ಇದ್ದ ಈತ, 8 ವರ್ಷದವನಿರುವಾಗ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಎರಡೂ ಕಾಲುಗಳನ್ನು ಕಳೆದುಕೊಂಡ..! ಇತರ ಮಕ್ಕಳು ಆಡುವುದನ್ನು ಕಂಡು ನಾನೂ ಅವರಂತೆ ಆಡಬೇಕೆಂದು ಈ ಪುಟ್ಟ ಹುಡುಗನಿಗೆ ಅನಿಸಿತಾದರೂ ಆಡಲಿಕ್ಕೆ ಆ ದೇವರು ಕಾಲುಗಳನ್ನೇ ಕಿತ್ತುಕೊಂಡು ಬಿಟ್ಟಿದ್ದ..! ಆದರೂ ಹುಡುಗ ಎದೆಗುಂದಲಿಲ್ಲ..! ಸ್ನೇಹಿತರೆಲ್ಲಾ ಈಜುವುದನ್ನು ನೋಡಿ, ನಾನೂ ಈಜುತ್ತೇನೆಂದು ಹಠ ಹಿಡಿದ..! ಈಜಲು ಎಂಟರ ಪೋರನಿಗೆ ಕಾಲುಗಳೇ ಇರಲಿಲ್ಲ..! ಅವನ ಆಸೆಗೆ ನೀರೆರೆಯಲು ಅಪ್ಪ ಅಮ್ಮ ಕೂಡ ತುಂಬಾನೇ ಪ್ರಯತ್ನ ಪಟ್ಟರು..! ತಮ್ಮ ಮಗ ಈಜಿಯೇ ಈಜುತ್ತಾನಂತ ದೊಡ್ಡ ಕನಸನ್ನು ಕಂಡು, ಮಗ ಗುರಿ ಮುಟ್ಟಲು ಪ್ರೋತ್ಸಾಹ ಕೊಡ್ತಾರೆ..! ಕೃತಕ ಕಾಲನ್ನು ಜೋಡಿಸ್ತಾರೆ..! ಸಾಮಾನ್ಯ ಕೃತಕ ಕಾಲಿನಲ್ಲಿ ಈಜಲಾಗಲಿಲ್ಲ..! ಅದಕ್ಕಾಗಿ ಈಜುಕಾಲು (ಫ್ಲಿಪ್ಪರ್ಸ್)ಗಳನ್ನು ಅಳವಡಿಸಿದರು..! ಒಂದೇ ಒಂದು ವರ್ಷದಲ್ಲಿ ಸಾಮನ್ಯರಿಗಿಂತಲೂ ಸೊಗಸಾಗಿ ಈಜ ಬಲ್ಲವನಾದ..! ಶಾಲಾ ಮತ್ತಿತರ ಈಜು ಸ್ಪರ್ಧೆಯಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ..! ಕೃತಕಕಾಲುಗಳ ಸಹಾಯದಿಂದಲೇ ಆಡುತ್ತಾನೆ.. ಕುಣಿಯುತ್ತಾನೆ.. ಈಜುತ್ತಾನೆ..!
ಈಗ ಹೇಳಿ ಸೆರಿಯನ್ ಕಿಲ್ಸೋ ಅಸಾಮನ್ಯ ಪ್ರತಿಭೆ ಅಲ್ವಾ..?! ಈತ ತುಂಬಾನೇ ಗ್ರೇಟ್ ಅಲ್ವಾ..?! ಮನಸ್ಸಿದ್ದರೆ ಅಸಾಧ್ಯವಾದುದು ಏನೂ ಇಲ್ಲ..! ಸಮಸ್ಯೆಗಳಿರೋದೇ ಪರಿಹಾರ ಕಂಡುಕೊಳ್ಳಲಿಕ್ಕೆ..! ನಮ್ಮಲ್ಲಿನ ಋಣಾತ್ಮಕ ಅಂಶಗಳನ್ನು ಲೆಕ್ಕಿಸದೇ ಗೆಲ್ಲೋದು ಹೇಗೆಂದು ತೋರಿಸಿಕೊಟ್ಟ ಎಂಟರ ಪೋರನಿಗೆ ಒಳ್ಳೇದಾಗಲಿ ಅಂತ ಹರಸಿ.

 

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...