ಇಂದಿನ ಟಾಪ್ 10 ಸುದ್ದಿಗಳು..! 30.01.2016

0
113

1. ಅನುಪಮಾ ಶಣೈ ವರ್ಗಾವಣೆ ವೀರೋಧಿಸಿ ಕೂಡ್ಲಗಿ ಬಂದ್
ಡಿವೈಎಸ್ಪಿ ಅನುಪಮಾ ಶಣೈರ ವರ್ಗಾವಣೆಯನ್ನು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಕೂಡ್ಲಗಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ ರಾಜೀನಾಮೆಗೆ ಒತ್ತಡ ಹೆಚ್ಚಿದೆ.
ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜುಗಳು ತೆರೆದಿಲ್ಲ. ಅಂತೆಯೇ ಖಾಸಗಿ ವಾಹನಗಳ ಸಂಚಾರವೂ ಕೂಡ ಇಲ್ಲಿತನಕ ವಿರಳವಾಗಿದೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

2. ಬಲವಂತವಾಗಿ ಗೋಮಾಂಸ ತಿನ್ನಿಸಲು ಯತ್ನಿಸಿದವನ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ..!

ಮೂವರು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಪಟ್ಟಿದ್ದಲ್ಲದೇ ಬಲವಂತವಾಗಿ ಗೋಮಾಂಸ ತಿನ್ನಿಸಲು ಯತ್ನಿಸಿದ ಓರ್ವನ ತಲೆ ಬೋಳಿಸಿ, ಕೊರಳಿಗೆ ಶೂವಿನ ಹಾರ ಹಾಕಿ ಕತ್ತೆ ಮೇಲೆ ಮೆರವಣಿಗೆ ಮಾಡಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

3. ಉಪವಾಸ ಸತ್ಯಾಗ್ರಹಕ್ಕೆ ಸಾಥ್ ನೀಡಿದ ರಾಹುಲ್ ಗಾಂಧಿ
ಹೈದರಾಬಾದ್ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ಮದ್ಯದಲ್ಲಿಯೇ ವಿವಿ ವಿದ್ಯಾಥರ್ಿಗಳ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಆಗಮನ ವಿರೋಧಿಸಿ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಕೊಳಕು ರಾಜಕೀಯ ಎಂದು ಟೀಕೆ ಮಾಡಿದೆ. ತೆಲಂಗಾಣದಲ್ಲಿ ಕಾಲೇಜು ಬಂದ್ಗೆ ಕರೆನೀಡಿದೆ.

4. ಪರಮೇಶ್ವರ್ ನಾಯ್ಕರನ್ನು ಸಂಪುಟದಿಂದ ಕಿತ್ತೆಸೆಯಿರಿ : ಜನಾರ್ದನ ಪೂಜಾರಿ ಆಗ್ರಹ
ಡಿವೈಎಸ್ಪಿ ಅನುಪಮಾ ಶಣೈ ಅವರ ವರ್ಗಾವಣೆ ವಿವಾಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯನಾಯಕ ಜನಾರ್ಧನ ಪೂಜಾರಿ ಕಿಡಿಕಾರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕರನ್ನು ಸಂಪುಟದಿಂದ ಕಿತ್ತೆಸೆಯಿಯುವಂತೆ ಅವರು ಆಗ್ರಹಿಸಿದ್ದಾರೆ. ಸಿಎಂ ಹಾಗೂ ಗೃಹಸಚಿವರು ಕೂಡಲೇ ಪರಮೇಶ್ವರ ನಾಯ್ಕರನ್ನು ವಜಾಗೊಳಿಸ ಬೇಕೆಂದು ತಿಳಿಸಿದರು.

5. ಪ. ಬಂಗಾಳ `ಅತ್ಯಾಚಾರ’ ಪ್ರಕರಣ ; ಮೂವರಿಗೆ ಗಲ್ಲು, ಮೂವರಿಗೆ ಜೀವಾವಧಿ ಶಿಕ್ಷೆ
ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಗಲ್ಲು, ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2013ರ ಜೂನ್ ತಿಂಗಳಲ್ಲಿ ಕಾಲೇಜಿನಿಂದ ಮನೆಗೆ ಹೋಗ್ತಾ ಇದ್ದ ವಿದ್ಯಾಥರ್ಿನಿ ಒಬ್ಬಳನ್ನು ಕಾಮುಕರ ಗುಂಪೊಂದು ಅಪಹರಿಸಿ, ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಹತ್ಯೆ ಮಾಡಿ ಕೋಲ್ಕತ್ತಾದಿಂದ 30 ಕಿ.ಮೀ ದೂರದಲ್ಲಿರುವ ಕಾಮದನಿ ಹಳ್ಳಿಯ ಕಾಲುವೆಯೊಂದರಲ್ಲಿ ಬಿಸಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಗುರುವಾರ 9 ಆರೋಪಿಗಳ ಪೈಕಿ 6 ಆರೋಪಿಗಳು ತಪ್ಪಿತಸ್ಥರೆಂದು ನಗರ ಸೆಷನ್ಸ್ ಕೋರ್ಟ್ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಕೋರ್ಟ್ ಅನ್ಸರ್ ಅಲಿ, ಸೈಫುಲ್ ಅಲಿ ಹಾಗೂ ಅಮಿನ್ ಅಲಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಉಳಿದ ಮೂವರು ಅಪರಾಧಿಗಳಾದ ಇಮಾನುಲ್ ಇಸ್ಲಾಂ, ಭೋಲ ನಸ್ಕರ್ ಮತ್ತು ಅಮಿನುರ್ ಇಸ್ಲಾಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

6. ರಷ್ಯಾದಲ್ಲಿ ಪ್ರಬಲ ಭೂಕಂಪ, 7ರಷ್ಟು ತೀವ್ರತೆ ದಾಖಲು

ಪೂರ್ವ ರಷ್ಯಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ಯಷ್ಚು ತೀವ್ರತೆ ದಾಖಲಾಗಿದೆ. ಪೂರ್ವ ರಷ್ಯಾದ ಯೆಲಿಜೋವೋದಿಂದ ಈಶಾನ್ಯ ಭಾಗಕ್ಕೆ 95 ಕಿ.ಮೀ ದೂರದಲ್ಲಿ 160 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಫೆಸಿಫಿಕ್ ಮಹಾಸಾಗರದ ಭೂಕಂಪ ವಲಯಕ್ಕೆ ಈ ಪ್ರದೇಶ ಹತ್ತಿರದಲ್ಲಿದ್ದು, ಈ ಅಗ್ನಿ ವಲಯ ವ್ಯಾಪ್ತಿ ಪ್ರದೇಶವು ಪದೇ ಪದೇ ಭೂಕಂಪಕ್ಕೆ ತುತ್ತಾಗುವ ಅಪಾಯವನ್ನು ಹೊಂದಿದೆ. ಇದೇ ವೇಳೆ ಭೂಕಂಪನದಿಂದಾಗಿ ಸುನಾಮಿ ಅಲೆಗಳೇಳುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7. ಕೂಡಂಕುಳಂ ಪರಮಾಣು ವಿದ್ಯುತ್ ಒಂದನೆ ಘಟಕ ಪುನರಾರಂಭ

ಕೂಡಂಕುಳಂ ಪರಮಾಣು ವಿದ್ಯುತ್ ಒಂದನೇ ಘಟಕ ಶನಿವಾರ ಪುನರಾರಂಭಗೊಂಡಿದೆ. ಇಂದು ಬೆಳಗ್ಗೆ 7 ಗಂಟೆ 12 ನಿಮಿಷಕ್ಕೆ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಆರಂಭದಲ್ಲಿ 80 ಮೆಗಾವ್ಯಾಟ್ ವಿದ್ಯುತ್ ನ್ನು ಉತ್ಪಾದಿಸಲಾಯಿತು. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿ ಸಾವಿರ ಮೆಗಾವ್ಯಾಟ್ ಸಾಮಥ್ರ್ಯಕ್ಕೆ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

8. ವಿಚ್ಚೇದನದತ್ತ ಮಲೈಕಾ, ಅರ್ಬಾಜ್ ಜೋಡಿ?

ಫರ್ಹಾನ್-ಅಧುನಾ ಜೋಡಿ ಬೇರೆಯಾದ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಜೋಡಿ ವಿಚ್ಚೇದನದತ್ತ ಮುಖಮಾಡಿದೆ. ಮೂಲಗಳ ಪ್ರಕಾರ ಬಾಲಿವುಡ್ ನ ಪ್ರಮುಖ ಕುಟುಂಬಗಳಲ್ಲಿ ಒಂದಾದ ಸಲ್ಮಾನ್ ಖಾನ್ ಕುಟುಂಬದಿಂದಲೇ ಈ ವಿಚ್ಛೇದನ ಸುದ್ದಿ ಹೊರಬಿದ್ದಿದೆ. ಬಾಲಿವುಡ್ ನ ಸ್ಟಾರ್ ಜೋಡಿ ಎಂದೇ ಖ್ಯಾತಿಗಳಿಸಿದ್ದ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಅರೋರಾರವರು ತಮ್ಮ 17 ವರ್ಷಗಳ ವೈವಾಹಿಕ ಜೀವನಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

9. ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಮಾರುಕಟ್ಟೆ: ಸುಷ್ಮಾ ಸ್ವರಾಜ್

ಆದಾಯ ಹೆಚ್ಚಿಸಿಕೊಳ್ಳಲು ಮತ್ತು ಉತ್ಪಾದನೆ ಹಾಗೂ ಮಾರುಕಟ್ಟೆ ಜಾಲವನ್ನು ವಿಸ್ತರಿಸಲು ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಯೋಜನೆಯನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹರಿಯ ಬಿಟ್ಟಿದ್ದಾರೆ. ಬೃಹತ್ ಮಟ್ಟದಲ್ಲಿ ನಡೆಸುವ ಉದ್ಯಮಗಳ ನೀಲನಕ್ಷೆ ಸರಿಯಾಗಿ ಸಿಕ್ಕಿದರೆ ಅಂತಹ ಮಾರುಕಟ್ಟೆಗಳನ್ನು ವಾಣಿಜ್ಯ ನಗರಿ ಮುಂಬೈಯಲ್ಲಿ ಮಹಿಳೆಯರಿಗೆ ಮೀಸಲಿಡುವ ಉದ್ದೇಶ ಕೇಂದ್ರ ಸರ್ಕಾರದ್ದು. ಮುಂಬೈಯ ಗಟ್ಕೋಪುರದಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಸಾವಿರಕ್ಕೂ ಅಧಿಕ ಮಹಿಳೆಯರನ್ನುದ್ದೇಶಿ ಸ್ವರಾಜ್ ಮಾತನಾಡಿದಾಗ ಈ ವಿಷಯ ಪ್ರಸ್ತಾಪಿಸಿದರು.

10. ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆ; ಓರ್ವ ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಿದ್ದು, ಭಾರತ ಗಡಿ ಪ್ರವೇಶಕ್ಕೆ ಯತ್ನಿಸಿದ ಓರ್ವ ಗೆರಿಲ್ಲಾ ಪಡೆಯ ಉಗ್ರನನ್ನು ಹೊಡೆದುರುಳಿಸಲಾಗಿದೆ. ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಭದ್ರತಾಪಡೆಗಳನ್ನು ಗುರಿಯಾಗಿಸಿಕೊಂಡ ಓರ್ವ ಗೆರಿಲ್ಲಾ ಪಡೆಯ ಉಗ್ರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಉಗ್ರನತ್ತ ಪ್ರತಿದಾಳಿ ನಡೆಸಿದ ಸೈನಿಕರು ಉಗ್ರನನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಡಿಯಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿಗಳು ಬಂದ ಹಿನ್ನಲೆಯಲ್ಲಿ ಶುಕ್ರವಾರದಿಂದಲೇ ಕಾಯರ್ಾಚರಣೆ ಆರಂಭಿಸಿರುವ ಭದ್ರತಾಪಡೆಗಳು ಇಂದು ಬೆಳಗ್ಗೆ ಓರ್ವ ಉಗ್ರಗಾಮಿಯನ್ನು ಹೊಡೆದುರುಳಿಸಿದೆ.

LEAVE A REPLY

Please enter your comment!
Please enter your name here