ಮದುವೆ ಅಂದ್ರೆ ಅದೊಂತರಾ ಪವಿತ್ರ ಕಾರ್ಯ..! ಅಲ್ಲಿಂದಲೆ ಬದುಕಿಗೆ ಹೊಸ ಅರ್ಥ ಸಿಗೋದು. ಆದ್ರೆ ಆ ಮದುವೆ ಅನ್ನೋದು ಯಡವಟ್ಟಾಗಿಬಿಟ್ರೆ ಕಥೆ ಗೋವಿಂದ..! ಇಲ್ಲಿ ಅಂತದ್ದೇ ಒಂದು ಕೇಸ್ ಇದೆ. ಹುಡುಗಿ ತಾನು ಕಟ್ಟಿಸಿಕೊಂಡ ತಾಳಿಯನ್ನು ಐದೇ ನಿಮಿಷದಲ್ಲಿ ಕಿತ್ತು ವರನಿಗೆ ಬಿಸಾಕಿದ್ದಾಳೆ..! ಕಾರಣ ಏನು ಗೊತ್ತಾ..? ಓದಿ ಈ ಸ್ಟೋರಿ..!
ಅವಳು ತಮಿಳುನಾಡಿನ ಪ್ರಿಯಾ. ವಯಸ್ಸು ಇಪ್ಪತ್ತು ವರ್ಷ. ಸುಂದರವಾಗಿರೋ ಆ ಹುಡುಗಿಗೆ ಮದುವೆಯಾಗಲು ಮನೆಯಲ್ಲಿ ಸಖತ್ ಒತ್ತಾಯ. ಅವಳು ಒಪ್ಪಿಕೊಂಡ್ಲು, ಆದ್ರೆ ಕಂಡೀಶನ್ ಒಂದೇ..! ಯಾವುದೇ ಕಾರಣಕ್ಕೂ ಮದುವೆಯಾಗೋ ಹುಡುಗ ಕುಡುಕನಾಗಿರಬಾರದು. ಅವಾಗವಾಗ ಕುಡೀತೀನಿ, ಸ್ವಲ್ಪವೇ ಸ್ವಲ್ಪ ಕುಡೀತೀನಿ, ಬಿಯರ್ ಮಾತ್ರ ಕುಡೀತೀನಿ ಅನ್ನೋ ಗಂಡು ಸಹ ನನಗೆ ಬೇಡ ಅಂತ ಅವಳು ಗೆರೆ ಹೊಡೆದುಬಿಟ್ಟಿದ್ಲು. ನೂರಾರು ಹುಡುಗರನ್ನು ನೋಡಿದ್ದೂ ಆಯ್ತು. ಯಾವ ಹುಡುಗನೂ ಸೆಟ್ ಆಗ್ಲಿಲ್ಲ..! ಫೈನಲಿ ಒಬ್ಬ ಹುಡುಗ ಓಕೆ ಅನ್ನಿಸ್ದ. ಅವನೇ ಚೆಲ್ಲಪಾಂಡಿ..! ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್. ಹುಡುಗನೂ ನೋಡೋಕೆ ಚೆನ್ನಾಗೇ ಇದ್ದ. ಸೋ, ಖುಷಿಯಾಗೇ ಒಪ್ಪಿಕೊಂಡ್ಲು ಪ್ರಿಯ. ಮದುವೆ ದಿನವೂ ಫಿಕ್ಸ್ ಆಯ್ತು. ಆದ್ರೆ ಮದುವೆ ಮುಹೂರ್ತಕ್ಕೆ ಇನ್ನೇನು ಹತ್ತು ನಿಮಿಷ ಬಾಕಿ ಇದೆ ಅಂತಿದ್ದಾಗ ಹುಡುಗ ಬಂದ. ಅದು ಬೆಳಗ್ಗೆ ಏಳು ಗಂಟೆಯ ಶುಭ ಮುಹೂರ್ತ. ಪ್ರಿಯಾಳಿಗೆ ಏನೋ ವಾಸನೆ ಬಂದ ಹಾಗಾಯ್ತು. ಆದ್ರೂ ಸುಮ್ಮನಾದ್ಲು..! ಅವನು ತಾಳಿ ಕಟ್ಟೇಬಿಟ್ಟ…! ಆಗ ಅವಳ ಮೂಗಿಗೆ ಚೆನ್ನಾಗಿ ವಾಸನೆ ಬಡಿದಿತ್ತು. ಅವನು ಚೆನ್ನಾಗಿ ಕುಡಿದು ಬಂದಿದ್ದ..! ಇವಳ ಪಿತ್ತ ನೆತ್ತೊಗೇರಿಬಿಡ್ತು. ಆದ್ರೂ ಮದುವೆ ಆಗಿಹೋಯ್ತು, ಮುಂದೆ ಸರಿಮಾಡೋಣ ಅನ್ಕೊಂಡು ಸುಮ್ಮನಾದ್ಲು.. ಆದ್ರೆ ವರನ ಆಟ ಶುರುವಾಯ್ತು. ಕುಡಿದ ಮತ್ತಲ್ಲಿ ಏನೇನೋ ಮಾತಾಡೋಕೆ ಶುರು ಮಾಡ್ದ. ವಧುವಿನ ಜೊತೆ ಎಲ್ಲರ ಎದುರು ಅಸಹ್ಯವಾಗಿ ವರ್ತಿಸಿದ. ವಧುವಿನ ಕಡೆಯವರನ್ನು ಬಾಯಿಗೆ ಬಂದ ಹಾಗೆ ಬಯ್ದ..! ಆಗ ಪ್ರಿಯಾಳ ಪಿತ್ತ ನೆತ್ತಿಗೇರಿಹೋಯ್ತು..! ಮುಖ ಮೂತಿ ನೋಡದೇ ಅವನು ಐದು ನಿಮಿಷದ ಹಿಂದೆ ಕಟ್ಟಿದ್ದ ತಾಳಿಯನ್ನು ಕಿತ್ತು ಅವನ ಮುಖದ ಮೇಲೆ ಎಸೆದ್ಲು..! ಅವನು ಪ್ರಿಯ ಮೇಲೆ ಕೈಮಾಡೋಕೆ ಮುಂದಾದ. ತಕ್ಷಣ ಪ್ರಿಯ, ತನ್ನ ಫ್ರೆಂಡ್ಸ್ ಕರ್ಕೊಂಡು ಹತ್ತಿರ ಪೊಲೀಸ್ ಸ್ಟೇಶನ್ ಗೆ ಹೋಗಿ ಹಿಂಗಿಂಗೆ ಅಂತ ಕಂಪ್ಲೇಂಟ್ ಕೊಟ್ಲು.. ವಿಷಯ ಎಸ್ಪಿ ತನಕ ಹೋಯ್ತು. ಅವರು ಒಂದು ತಂಡವನ್ನು ಕಳಿಸೇಬಿಟ್ರು..! ಅಷ್ಟರಲ್ಲಿ ಪೊಲೀಸರನ್ನು ನೋಡಿ ವರನಿಗೆ ಕುಡಿದಿದ್ದು ಇಳಿದು ಹೋಗಿತ್ತು. ತಪ್ಪಾಯ್ತು ತಪ್ಪಾಯ್ತು ಅಂತ ಬೇಡಿಕೊಂಡ. ಕೊನೆಗೆ ಕಂಪ್ಲೇಂಟ್ ಏನೂ ಬೇಡ, ಮದುವೆಗೆ ಮಾಡಿರೋ ಖರ್ಚು ವಾಪಸ್ ಕೊಡಿ ಅಂತ ಪೊಲೀಸರೇ ಕೇಸ್ ಸೆಟ್ಲ್ ಮಾಡಿದ್ದಾರೆ..ಇಂತಹಾ ಕುಡುಕನ ಜೊತೆ ನನ್ನ ಮಗಳು ಸಂಸಾರ ಮಾಡೋದು ನಂಗು ಇಷ್ಟ ಇಲ್ಲ. ಯಾರಾದ್ರೂ ಒಳ್ಳೇ ಹುಡುಗ ನನ್ನ ಮಗಳಿಗೆ ಸಿಕ್ಕೇ ಸಿಗ್ತಾನೆ ಅಂತ ಪ್ರಿಯಾಳ ಅಮ್ಮನೂ ಹೇಳಿದ್ರು..! ಸದ್ಯಕ್ಕೆ ಐದೇ ನಿಮಿಷಕ್ಕೆ ಮದ್ವೆ ಮುರಿದುಬಿದ್ದಿದೆ.. ಹುಡುಗನ ಕುಡಿತದಾಟ ನೋಡಿ ಅವರಪ್ಪ ಅಮ್ಮ ಮುಖಕ್ಕೆ ಉಗಿದು ಕರ್ಕೊಂಡು ಹೋಗಿದ್ದಾರೆ.. ಪ್ರಿಯಾ ಯಾವುದಾದರೂ ಕುಡಿಯದ ಹುಡಗನ ನಿರೀಕ್ಷೆಯಲ್ಲಿದ್ದಾಳೆ..!
- POPULAR STORIES :
- .ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!
- ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!
- ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!
- ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!
- ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?
- ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
- ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
- ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
- ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
- ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!
- ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
