ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

0
81

ಭಾರತದ ಒಟ್ಟು ಆಸ್ತಿ 148128820000000.00 ಇದರಲ್ಲಿ 78508274600000 ರೂಪಾಯಿಗಳಷ್ಟು ಆಸ್ತಿ 1% ಜನರಲ್ಲೇ ಇದೆ..!
ಭಾರತ ಬಡರಾಷ್ಟ್ರ ಅಲ್ಲವೇ ಅಲ್ಲ..! ಆದರೆ ಭಾರತದಲ್ಲಿ ಬಡತನ ತಾಂಡವಾಡುತ್ತಿದೆ..! ಒಟ್ಟಾರೆ ಭಾರತವನ್ನು ತೆಗೆದುಕೊಂಡು ಆದಾಯವನ್ನು ಲೆಕ್ಕಹಾಕಿದರೆ ಭಾರತ ಶ್ರೀಮಂತವಾಗಿದೆ..! ಆದರೆ ಇಂತಹ ಶ್ರೀಮಂತ ರಾಷ್ಟ್ರದಲ್ಲಿಯೂ ತುತ್ತೂಟಕ್ಕೆ ಗತಿ ಇಲ್ಲದೆ ಉಪವಾಸ ಇರುವ ಮಂದಿಯೂ ಬಹಳಷ್ಟು ಇದ್ದಾರೆ. ಇದಕ್ಕೆ ಕಾರಣವೇನೆಂದು ನಿಮಗೂ ಗೊತ್ತಿದೆ..! ನಮ್ಮ ದೇಶದಲ್ಲಿ ಆಸ್ತಿ ಕೆಲವರಲ್ಲಿ ಮಾತ್ರ ಕೇಂದ್ರೀಕೃತವಾಗಿದೆ..! ದೊಡ್ಡ ದೊಡ್ಡ ಶ್ರೀಮಂತರೂ ಇದ್ದಾರೆ..! ಕಸದ ತೊಟ್ಟಿಯಲ್ಲಿ ಬಿದ್ದ ಅನ್ನದ ಅಗಳನ್ನು ಆಯ್ದು ತಿನ್ನುವವರೂ ಇದ್ದಾರೆ..!
ಭಾರತದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿಗಳಲ್ಲಿ ಶೇಕಡ 1ರಷ್ಟು ಜನರ ಬಳಿಯಲ್ಲಿಯೇ ಒಟ್ಟಾರೆ ಭಾರತದ 53% ಆಸ್ತಿ ಇದೆ..! ಅಂದರೆ ದೇಶದ ಒಟ್ಟು ಆಸ್ತಿಯ 53% ಆಸ್ತಿ ದೇಶದಲ್ಲಿನ ಕೇವಲ 1% ಜನರಲ್ಲಿದೆ..! ಜಾಗತಿಕ ಸಂಸ್ಥೆಯೊಂದರ ವರದಿ ಪ್ರಕಾರ 2000ನೇ ಇಸವಿಯಲ್ಲಿ 36.8% ದೇಶದ ಆಸ್ತಿಯು 1% ಶ್ರೀಮಂತರ ಆಸ್ತಿಗೆ ಸಮವಾಗಿತ್ತು..! ಆದರೆ ಈಗ 36.8% ನಿಂದ 53% ಗೆ ಏರಿಕೆ ಯಾಗಿದೆ..! 15 ವರ್ಷದಲ್ಲಿ ಬಡವರು ಬಡವರಾಗಿಯೇ ಇದ್ದಾರೆ..! ಆ 1% ಶ್ರೀಮಂತರ ಶ್ರೀಮಂತಿಕೆ ಹೆಚ್ಚಿದೆ ಎಂಬುದು ಈ ಅಂಕಿ-ಅಂಶದಿಂದ ಸ್ಪಷ್ಟವಾಗುತ್ತಿದೆ..! ನೋಡಿದ್ರಲ್ಲಾ.. 2000ದಲ್ಲಿ ದೇಶದ 1% ಶ್ರೀಮಂತರ ಆಸ್ತಿ ದೇಶದ ಆಸ್ತಿ ಶೇ36.8ಕ್ಕೆ ಸಮವಾಗಿತ್ತು..! ಈಗ ಅದೇ ಒಂದು ಪರ್ಸೆಂಟ್ ಶ್ರೀಮಂತರ ಆಸ್ತಿ ರಾಷ್ಟ್ರದ ಆಸ್ತಿಯ 53% ಗೆ ಸಮ..! ಶ್ರೀಮಂತರು ಶ್ರೀಮಂತರಾಗಿಯೇ ಹೆಚ್ಚು ಹೆಚ್ಚು ಆಸ್ತಿಗಳಿಸುತ್ತಾರೆ..! ಬಡವರು ಬಡತನದಲ್ಲೇ ಹುಟ್ಟಿ ಬಡತನದಲ್ಲಿಯೇ ಸಾಯುತ್ತಾರೆ..!
ಜಾಗತಿಕ ಕಲ್ಯಾಣ ವರದಿ ಪ್ರಕಾರ ದೇಶದ 68.6% ಆಸ್ತಿ ಉನ್ನತ 5% ಶ್ರೀಮಂತರ ಬಳಿಯಲ್ಲೇ ಇದೆ..! ಉನ್ನತ 10% ಶ್ರೀಮಂತರು ದೇಶದ ಆಸ್ತಿಯಲ್ಲಿ 76.3% ಆಸ್ತಿಯ ಒಡೆಯರಾಗಿದ್ದಾರೆ.. ದೇಶದ ಒಟ್ಟು ಆಸ್ತಿಯಲ್ಲಿ ಬಡವರ ಪಾಲು ಶೇ4.1..ಮಾತ್ರ..! 2000.ದಲ್ಲಿ 5.3% ಆಸ್ತಿ ಬಡವರ ಬಳಿ ಇತ್ತು..! ಅದೇ ಆಸ್ತಿ ಪ್ರಮಾಣ 2015ಕ್ಕೆ ಕಡಿಮೆಯಾಗಿ 4.1%ಕ್ಕೆ ಬಂದು ತಲುಪಿರುವುದು ಬಡವರು ಇನ್ನೂ ಬಡವರಾಗುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತೆ..!

ಅದಿರಲಿ, ಮೇಲಿನ 1% ಶ್ರೀಮಂತರು ಮತ್ತು ಮೇಲ್ದರ್ಜೆಯ 10ಶೇ ಶ್ರೀಮಂತರ ನಡುವಿನ ಅಂತರವನ್ನು ಗಮನಿಸಿದರೆ 2000ದಲ್ಲಿದ್ದ ಶೇ29.1ರಷ್ಟು ಅಂತರ, ಇವತ್ತು ಅಂದರೆ 2015ರಲ್ಲಿ 23.3% ಕ್ಕೆ ಇಳಿದಿದೆ…! ಅಂದರೆ 2000ದಲ್ಲಿ ಮೊದಲ 1% ಶ್ರೀಮಂತರ ಆಸ್ತಿ= ಮೊದಲ 10% ಶ್ರೀಮಂತರ ಬಳಿಯ 29.1% ಆಸ್ತಿಗೆ ಅಮವಾಗಿತ್ತು..! ಆ ಪ್ರಮಾಣ ಈಗ 23.1% ಆಸ್ತಿಗೆ ಸಮವಾಗಿದೆ..! ಈ ಅಂಕಿ ಅಂಶ ಶೇ.1 ಉನ್ನತ ಶ್ರೀಮಂತರು ಮಾತ್ರ ಬೆಳೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಜಾಗತಿಕ ಸಂಸ್ಥೆಯೊಂದರ ಮಾಹಿತಿ ಪ್ರಕಾರ ದೇಶದ ಒಟ್ಟು ಆಸ್ತಿ 148128820000000.00 ($2.284 ಟ್ರಿಲಿಯನ್) ರೂಪಾಯಿಗಳು..! ಇದರ 53% ಅಂದ್ರೆ ಸುಮಾರು 78508274600000 ರೂಪಾಯಿಗಳ ಆಸ್ತಿ ಕೇವಲ ಮೇಲ್ಮಟ್ಟದ 1% ಶ್ರೀಮಂತರ ಬಳಿಯಲ್ಲಿರುವ ಆಸ್ತಿಗೆ ಸಮ..!
ನೋಡಿದ್ರಲ್ಲಾ ಇನ್ನುಳಿದ 99% ಜನರಲ್ಲಿ ಶ್ರೀಮಂತರೂ ಇದ್ದಾರೆ..! ಹೀಗಿರುವಾಗ ದೇಶದ ಆಸ್ತಿಯಲ್ಲಿ ಬಡವರ ಪಾಲು.. ಎಷ್ಟಿದೆ..?!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

.ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!

ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

LEAVE A REPLY

Please enter your comment!
Please enter your name here