ಗುಡ್ ನ್ಯೂಸ್.. ಎಚ್‍ಐವಿಯಿಂದ ವ್ಯಕ್ತಿ ಗುಣಮುಖ..!

Date:

ವೈಜ್ಞಾನಿಕ ಲೋಕಕ್ಕೆ ಒಂದು ಸವಾಲಾಗಿದ್ದ ಮಾರಣಾಂತಿಕ ಕಾಯಿಲೆಯಾದ ಎಚ್‍ಐವಿಗೆ ಅಂತೂ ಚಿಕಿತ್ಸೆ ಕಂಡು ಹಿಡಿಯುವಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ. 44 ವರ್ಷದ ಬ್ರಿಟೀಷ್ ಪ್ರಜೆಯೊಬ್ಬ ಎಚ್‍ಐವಿ ರೋಗದಿಂದ ಗಣಮುಖನಾದ ವಿಶ್ವದ ಪ್ರಪ್ರಥಮ ವ್ಯಕ್ತಿ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಹಲವಾರು ವರ್ಷಗಳಿಂದ ಇಡೀ ಜೀವನವನ್ನೇ ಮದ್ದು ತಯಾರಿಕೆಗಾಗಿ ವ್ಯಯಿಸಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಈಗಾಗಲೇ ಎಚ್‍ಐವಿ ವೈರಸ್ ಆ ವ್ಯಕ್ತಿಯ ರಕ್ತದಿಂದ ಸಂಪೂರ್ಣವಾಗಿ ನಾಶ ಹೊಂದುತ್ತಿದ್ದು, ಇದು ಹೀಗೆ ಮುಂದುವರೆದರೆ ಎಚ್‍ಐವಿ ಸೊಂಕಿನಿಂದ ಗುಣಮುಖನಾದ ವಿಶ್ವದ ಮೊಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಲಿದ್ದಾನೆ. ಪ್ರಸ್ತುತದಲ್ಲಿ ಇಂಗ್ಲೆಂಡ್‍ನ ಐದು ವಿಶ್ವ ವಿದ್ಯಾನಿಲಯಗಳು 50 ಜನ ಎಚ್‍ಐವಿ ಸೊಂಕಿತರ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದು, ಎಚ್‍ಐವಿ ಸೊಂಕು ಸಂಪೂರ್ಣವಾಗಿ ಗಣಪಡಿಸುವ ನಿಟ್ಟಿನಲ್ಲಿ ಅವಿರತ ಪರಿಶ್ರಮ ಪಡುತ್ತಿದ್ದಾರೆ. ಇದಿನ್ನು ಆರಂಭಿಕ ಹಂತದಲ್ಲಿದೆ ಎಂದು ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಹೆಲ್ತ್ ರೀಸರ್ಚ್ ಆಫೀಸ್ ಫಾರ್ ಕ್ಲೀನಿಕಲ್ ರೀಸರ್ಚ್ ಇನ್ಟ್ರಾಸ್ಟ್ರಕ್ಚರ್‍ನ ಆಡಳಿತ ನಿರ್ದೆಶಕ ಮಾರ್ಕ್ ಸ್ಯಾಮುವೆಲ್ಸ್ ಹೇಳಿದ್ದಾರೆ.
ಪ್ರಸಕ್ತದಲ್ಲಿ ಲಭ್ಯವಿರುವ ಆಂಟಿ ರಿಟ್ರೋ ವೈರಲ್ ಥೆರಪಿಯನ್ವಯ ಎಚ್‍ಐವಿ ವೈರಾಣುಗಳು ಸಕ್ರೀಯ ಟಿ ಕಣಗಳನ್ನು ಗುರಿಯಾಗಿಸಬಹುದೇ ವಿನಹಃ ಟಿ ಸೆಲ್‍ಗಳನ್ನಲ್ಲ. ಅಂದರೆ ಚಿಕಿತ್ಸೆಯ ಹೊರತಾಗಿಯೂ ರೋಗಿಯ ದೇಹದಲ್ಲಿ ಈ ಮಾರಕ ವೈರಾಣು ಬೆಳೆಯುತ್ತಲೇ ಇರುತ್ತದೆ. ಇನ್ನು ವಿಜ್ಞಾನಿಗಳು ಕಂಡುಹಿಡಿಯಲು ಹೊರಟಿರುವ ಅಂಶಗಳಲ್ಲಿ ಮೊದಲನೆಯದಾಗಿ ಎಚ್‍ಐವಿ ವೈರಾಣುಗಳನ್ನು ಗುರುತಿಸಲು ಸಹಕಾರಿಯಾಗುವಂತಹ ಲಸಿಕೆಯೊಂದನ್ನು ನೀಡಲಾಗಿ ಆ ವೈರಾಣುಗಳನ್ನು ಹೊಡದೋಡಿಸಲು. ಎರಡನೆಯದಾಗಿ ವೋರಿನೋಸ್ಟೇಟ್ ಎಂಬ ಹೊಸ ಔಷಧ ಸಕ್ರೀಯವಾಗಿಲ್ಲದ ಟಿ-ಸೆಲ್‍ಗಳನ್ನು ಸಕ್ರೀಯಗೊಳಿಸಿ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಗುರುತಿಸುವಂತೆ ಮಾಡುವುದು. ಈ ಔಷಧಿಗಳ ಬಗ್ಗೆ ವಿಜ್ಞಾನಿಗಳು ಮುಂದಿನ ಐದು ವರ್ಷಗಳ ವರೆಗೆ ತಮ್ಮ ಪ್ರಯೋಗ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.

Like us on Facebook  The New India Times

POPULAR  STORIES :

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...