ತಡೆದಷ್ಟು ಪುಟಿಯುತ್ತಿದ್ದಾರೆ. ಕೊಂದಷ್ಟು ಹುಟ್ಟಿಕೊಳ್ಳುತ್ತಿದ್ದಾರೆ. ಉಗ್ರರ ಅಜೆಂಡಾ ತಡೆಯುವುದೇಕೋ ದುಸ್ಸಾಧ್ಯವಾಗಿದೆ. ಇದೀಗ ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಸರಣಿ ಬ್ಲಾಸ್ಟ್ ಆಗಿದೆ. ಮೂವತ್ತೈದಕ್ಕೂ ಹೆಚ್ಚು ಅಮಾಯಕರು ಸಾವಿಗೀಡಾಗಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಕೆಲತಿಂಗಳ ಹಿಂದೆಯಷ್ಟೇ ಯೆಮೆನ್ ಮೂಲದ ಅಲ್ ಕೈದಾ ಉಗ್ರರು ಪ್ಯಾರಿಸ್ ನಲ್ಲಿ ನೂರೈವತ್ತು ಜನರನ್ನು ಬಲಿ ತೆಗೆದುಕೊಂಡಿದ್ದರು. ಅದಾದ ನಂತರ ಉಗ್ರರ ದಮನಕ್ಕೆ ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಟೊಂಕಕಟ್ಟಿ ನಿಂತಿದ್ದವು. ಫ್ರಾನ್ಸ್ ಯುದ್ಧವನ್ನು ಆರಂಭಿಸಿಯೂ ಆಗಿದೆ. ಈ ನಡುವೆಯೂ ಉಗ್ರರು ಫ್ರೆಂಚರ ಒಂದುಕಾಲದ ವಸಾಹತಾದ ಪಶ್ಚಿಮ ಆಫ್ರಿಕಾದ ಮಾಲಿ ದೇಶದ ರಾಜಧಾನಿ ಬಮಾಕೊದ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದ್ದರು.
ಸುಮಾರು 10 ಬಂದೂಕುಧಾರಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಗ್ರೆನೇಡ್ ಗಳನ್ನು ಎಸೆದು ಹೋಟೆಲ್ಗೆ ನುಗ್ಗಿದ್ದರು. ಬಂದೂಕುಧಾರಿಗಳು ಹೋಟೆಲ್ಗೆ ನುಗ್ಗುವ ಸಂದರ್ಭದಲ್ಲೇ ಕೆಲವರು ತಪ್ಪಿಸಿಕೊಂಡು ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದರು. ಒಳಕ್ಕೆ ನುಗ್ಗಿದ ಉಗ್ರರು ಅಲ್ಲಿದ್ದವರಿಗೆ ಕುರಾನ್ ಸಾಲುಗಳನ್ನು ಪಠಿಸುವಂತೆ ಕೆಲವರನ್ನು ಬೆದರಿಸಿದ್ದರು. ಕುರಾನ್ ಪಠಿಸಿದವರನ್ನು ಹೊರಗಡೆ ಕಳುಹಿಸಿದ್ದರು. ಎಲ್ಲಾ ಮುಗಿಯುವಷ್ಟರಲ್ಲಿ ರ್ಯಾಡಿಸನ್ ಬ್ಲೂ ಹೋಟೆಲ್ನ ನೆಲಮಹಡಿಯಲ್ಲಿ 12 ಮತ್ತು ಎರಡನೇ ಮಹಡಿಯಲ್ಲಿ 15 ಮೃತದೇಹಗಳು ಬಿದ್ದಿದ್ದವು. ಸಹರಾ ಮರುಭೂಮಿಯಲ್ಲಿ ನೆಲಯನ್ನು ಹೊಂದಿರುವ ಅಲ್ ಖೈದಾ ಬೆಂಬಲಿತ ಅಲ್ ಮೊರಾಬಿತೂನ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಇವೆಲ್ಲವನ್ನು ನೋಡಿದಾಗ ಉಗ್ರರನ್ನು ನಾಶಪಡಿಸಿದಷ್ಟು ಅವರು ಚಿಗಿತುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಪ್ಯಾರಿಸ್ ನಲ್ಲಿ ಅಂದಾಜು ನೂರೈವತ್ತು ಜನರ ಮಾರಣಹೋಮಕ್ಕೆ ಕಾರಣವಾದ ಇಸಿಸ್ ಉಗ್ರರು, ಅನಂತರ ಟಕರ್ಿಯಲ್ಲೂ ಸ್ಫೋಟ ನಡೆಸಿ ಅಲ್ಲಿ ನಡೆಯಬೇಕಿದ್ದ ಜಿ 20 ಶೃಂಗಸಭೆಗೆ ಬೆದರಿಕೆಯನ್ನೊಡ್ಡಿದ್ದರು. ಇದರ ಪರಿಣಾಮವಾಗಿ ವಿವಿಧ ಉದ್ದೇಶಗಳಿಗೆ ನಡೆಯಬೇಕಿದ್ದ ಶೃಂಗಸಭೆ ಭಯೋತ್ಪಾಧನೆಯ ವಿರುದ್ಧದ ಸಮರಕ್ಕೆ ಮುಂದಾಗಿತ್ತು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಕಾರಣಕ್ಕೆ ಫ್ರಾನ್ಸ್ ಬ್ಲಾಸ್ಟ್ ಗೆ ಇಡೀ ಜಗತ್ತು ಮೈ ಕೊಡವಿ ಎದ್ದು ನಿಂತಿತ್ತು. ಮೈ ಕೊಡವಿದ್ದಷ್ಟೆ ಬಂತು. ಆದರೆ ಯುರೋಪ್ ಮೇಲೆ ಉಗ್ರರ ಅಟ್ಟಹಾಸ ನಿಂತಿಲ್ಲ.
ಇಲ್ಲಿಯವರೆಗೆ ವಿಶ್ವದ ದೊಡ್ಡಣ್ಣ, ಚಿಕ್ಕಣ್ಣ, ದೊಡ್ಡಪ್ಪಂದಿರು ಭಯೋತ್ಪಾದಕರ ಮೇಲೆ ಯುದ್ಧ ಮಾಡಿಲ್ಲ ಎಂದೇನಿಲ್ಲ. ಅಫ್ಘಾನಿಸ್ತಾನದ ಮೇಲೆ ಯುದ್ಧ ಮಾಡಿದರು, ಸಿರಿಯಾದ ಮೇಲೆ ಮುಗಿಬಿದ್ದರು, ಲಿಬಿಯಾದ ಮೇಲೆ ಬಾಂಬ್ ಹಾಕಿದರು, ಇರಾಕ್ ಅನ್ನು ನಿನರ್ಾಮ ಮಾಡಿದರು..! ಅಮೆರಿಕಾ ಅಂದ್ರೆ ತಮಾಷೇನಾ..? ಭಯೋತ್ಪಾದಕರನ್ನು ಸುಮ್ಮನೇ ಬಿಟ್ಟುಬಿಡುತ್ತಾ..?. ನಾವು ಈ ಎಲ್ಲಾ ಯುದ್ಧಗಳನ್ನು ಪ್ರಶಂಸಿಸಿದ್ದೇವೆ. ಆದರೆ ಈ ಯುದ್ಧಗಳಿಂದ ಭಯೋತ್ಪಾದನೆ ನಿಗ್ರಹವಾಗಿದ್ಯಾ..?. ಇವರು ಮುಟ್ಟಿದಷ್ಟು ಅವರು ಚಿಗಿತುಕೊಳ್ಳುತ್ತಿದ್ದಾರೆ. ಒಬ್ಬರನ್ನು ಕೊಂದರೇ ಆ ಜಾಗದಲ್ಲಿ ಹತ್ತು ಜನರು ಹುಟ್ಟಿಕೊಳ್ಳುತ್ತಾರೆ. ಅಸಲಿಗೆ ಅಫ್ಘಾನಿಸ್ತಾನಕ್ಕೆ ಮಾತ್ರ ಸೀಮಿತವಾಗಿದ್ದ ತಾಲಿಬಾನ್ ಅಥರ್ಾತ್ ಅಲ್ಕೈದಾ ಉಗ್ರರ ಮೇಲೆ ಸಮರ ಸಾರಿದ್ದಕ್ಕೆ ಅವರು ದೂರದ ಯೆಮೆನ್ವರೆಗೂ ತಮ್ಮ ಕಬಂಧ ಬಾಹುವನ್ನು ವಿಸ್ತರಿಸಲು ಕಾರಣವಾಗಿತ್ತು.
ಜನಾಂಗೀಯ ದ್ವೇಷಗಳನ್ನು ಹೊರತುಪಡಿಸಿದರೇ ಇರಾಕ್ನಲ್ಲಿ ಸದ್ದಾಂ ಒಳ್ಳೇ ಆಡಳಿತವನ್ನೇ ನಡೆಸುತ್ತಿದ್ದ. ಅತ್ತ ಲಿಬಿಯಾದಲ್ಲೂ ಗಡಾಫಿ ತನ್ನ ರಾಷ್ಟ್ರವನ್ನು ಶ್ರೀಮಂತವಾಗಿರಿಸಿದ್ದ. ಇವರು ಮಾಡಿದ ತಪ್ಪೆಂದರೇ ಅಮೆರಿಕಾಕ್ಕೆ ಸಲಾಂ ಹೊಡೆಯಲಿಲ್ಲ. ಇಸ್ರೆಲ್ಗೆ ಸಡ್ಡು ಹೊಡೆಯುತ್ತಿದ್ದರು. ಆ ಕಾರಣಕ್ಕೆ ಜಗತ್ತಿಗೆ ಇವರಿಂದ ತೊಂದರೆ ಇದೆ ಎಂದು ಸದ್ದಾಂನನ್ನು ಜೀವಂತವಾಗಿ ಹಿಡಿದು ನೇಣಿಗೇರಿಸಿದರು. ಗಢಾಫಿಯನ್ನು ಜನರ ಕೈಲಿ ಕೊಲ್ಲಿಸಿದರು. ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೊಂದಿದೆ. ಸದ್ದಾಂ ಸತ್ತ ನಂತರವೇ ಇವತ್ತು ಇಡೀ ಜಗತ್ತಿಗೆ ಕಂಟಕವಾಗಿರುವ ಐಸಿಸ್ ಉಗ್ರರ ಜನನವಾಗಿತ್ತು. ಅಂದರೇ ಅಮೆರಿಕಾ ಇಸ್ರೇಲ್ ಒಟ್ಟಾಗಿ ಟೆರ್ರರಿಸಂ ಹುಟ್ಟಿಗೆ ಕಾರಣವಾಗಿದ್ದರು. ಒಸಾಮ ಬಿನ್ ಲ್ಯಾಡೆನ್ನಂತ ಉಗ್ರರನ್ನು ಪೋಷಿಸಿ ಬೆಳೆಸಿದ ಅಮೆರಿಕಾಕ್ಕೆ ಅವನು ಅಂತಿಮವಾಗಿ ಬಾಂಬಿಟ್ಟಿದ್ದ ಎಂಬ ಸತ್ಯವನ್ನು ಮರೆಯುವಂತಿಲ್ಲ.
ಅಮೆರಿಕಾ, ಇಸ್ರೇಲಿಗಳ ಹೆಜ್ಜೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಯಾವ ಅಫ್ಘಾನಿಸ್ತಾನವನ್ನು ಅಮೆರಿಕಾ ಸ್ಮಶಾನ ಮಾಡಿ ಹಾಕಿತ್ತೋ, ಅದೇ ಅಫ್ಘನ್ನರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ, ಅವರ ಗೆರಿಲ್ಲಾ ತಂತ್ರಗಳನ್ನು ಬಳಸಿಕೊಂಡು ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಮಾಡಿ ಗೆದ್ದಿದ್ದು ಅಮೆರಿಕಾ. ಅವತ್ತು ಸೋವಿಯತ್ ರಷ್ಯಾವನ್ನು ಸೋಲಿಸಲು ಉಗ್ರರನ್ನು ಹುಟ್ಟುಹಾಕಿದ ಇದೇ ಅಮೇರಿಕಾ ಅನಂತರದಲ್ಲಿ ಉಗ್ರರ ವಿರುದ್ದ ಯುದ್ದಕ್ಕೆ ರೆಡಿಯಾಗಿದ್ದು ಎಂಥಾ ತಮಾಷೆ ಅಲ್ವೇ..?
ಇತ್ತೀಚೆಗಷ್ಟೆ ರಷ್ಯಾದ ವಿಮಾನ ಪತನವಾಗಿತ್ತು. ಅದನ್ನು ಹೊಡೆದುರುಳಿಸಿದ್ದು ನಾವೇ ಎಂದು ಐಸಿಸ್ ಉಗ್ರರು ಹೇಳಿಕೊಂಡರು. ಮೂವತ್ತು ಸಾವಿರ ಅಡಿ ಮೇಲಿದ್ದ ವಿಮಾನವನ್ನು ಹೊಡೆದುರುಳಿಸುವ ಸಾಮಥ್ರ್ಯವಿರುವ ಶಸ್ತ್ರಾಸ್ತ್ರ ಅವರ ಬಳಿಯಿದೆ ಎಂದರೇ, ಅದನ್ನು ಪೂರೈಸಿದವರು ಯಾರು..? ಉಗ್ರರು ವೆಪನ್ಗಳನ್ನು ತಯಾರಿಸುವಷ್ಟು ಪ್ರಾವಿಣ್ಯತೆ ಹೊಂದಿಲ್ಲ. ಅಂದಮೇಲೆ ಅದನ್ನು ಖರೀದಿ ಮಾಡಬೇಕು. ಅವರಿಗೆ ಶಸ್ತ್ರಾಸ್ತ್ರ ಖರೀದಿಸಲು ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತೆ..? ಇವರಿಗೆ ವೆಪನ್ಸ್ ಪೂರೈಸೋದು ಯಾರು..? ಇಂತಹ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ಅದಕ್ಕಿರುವ ಉತ್ತರವೂ ಜಟಿಲವಲ್ಲ. ಹಕೀಕತ್ತೇನೆಂದರೇ ಅಮೆರಿಕಾ, ಇಸ್ರೇಲ್ ಮುಂತಾದ ರಾಷ್ಟ್ರಗಳು ಆದಾಯದ ಮೂಲವೇ ವೆಪನ್ಸ್. ಅಸಲಿಗೆ ಉಗ್ರರಿಗೆ ವೆಪನ್ಸ್ ಪೂರೈಸುತ್ತಿರೋದು ಕೂಡ ಇವೇ ರಾಷ್ಟ್ರಗಳು..!? ಏಕೆಂದರೇ ಉಗ್ರರಿಗೆ ವೆಪನ್ಸ್ ಪೂರೈಸುವಷ್ಟರ ಮಟ್ಟಿಗೆ ಮುಸ್ಲಿಂ ರಾಷ್ಟ್ರಗಳು ಬಲಿಷ್ಠವಾಗಿಲ್ಲ.
ನಿಜ, ಭಯೋತ್ಪಾದಕರನ್ನು ಮಟ್ಟ ಹಾಕದಿದ್ದರೇ ಅವರು ಇನ್ನಷ್ಟು ಹಾವಳಿಯಿಡುತ್ತಾರೆ. ಆದರೆ ಅವರನ್ನು ಮುಟ್ಟಿದ ಮೇಲೆ ಸಂಪೂರ್ಣವಾಗಿ ನಿರ್ನಾಮ ಮಾಡಬೇಕಲ್ವೇ..? ಅಫ್ಘಾನಿಸ್ತಾನದ ಮೇಲೆ ಯುದ್ದ ಮಾಡಿದ ಅಮೆರಿಕಾ ವರ್ಷಗಳ ಕಾಲ ಅಲ್ಲಿ ತನ್ನ ಸೈನ್ಯವನ್ನು ಬಿಟ್ಟಿತ್ತು. ಆಮೇಲೆ ಸೈನ್ಯವನ್ನು ವಾಪಾಸು ಕರೆಸಿಕೊಂಡಿತ್ತು. ಇಷ್ಟೆಲ್ಲಾ ಮಾಡಿದ ನಂತರ ಅಫ್ಘಾನಿಸ್ತಾನದಲ್ಲಿ ಉಗ್ರರು ಬೇರುಸಮೇತ ನಾಶವಾಗಬೇಕಿತ್ತು ಅಲ್ವೇ..? ಬದಲಾಗಿ ಅಲ್ಲಿ ಟೆರ್ರರಿಸಂ ಆಕ್ಟಿವಿಟೀಸ್ ಇನ್ನಷ್ಟು ಹೆಚ್ಚಿದೆ. ಪಾಕ್ ಕೃಪಾಪೋಷಿತ ಉಗ್ರರು ಇನ್ನಿಲ್ಲದಂತೆ ಚಿಗಿತುಕೊಂಡಿದ್ದಾರೆ. ಇಲ್ಲಿಯವರೆಗೆ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಐಸಿಸ್ ಉಗ್ರರು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹರಿದುಹಂಚಿಹೋಗಿದ್ದಾರೆ. ನಮ್ಮ ನಿಮ್ಮ ನಡುವೆಯೇ ಐಸಿಸ್ ಉಗ್ರರು ಓಡಾಡಿಕೊಂಡಿರಬಹುದು. ಸದ್ದಾಂನನ್ನು ಕೊಂದ್ರಿ, ಗಢಾಫಿಯನ್ನು ಕೊಂದ್ರಿ, ಇರಾಕ್, ಸಿರಿಯಾ, ಲಿಬಿಯಾ, ಈಜಿಪ್ಟ್ ಎಲ್ಲಾ ರಾಷ್ಟ್ರಗಳನ್ನು ನಾಶಪಡಿಸಿದ್ರಿ- ಆದರೆ ಇದರಿಂದ ಭಯೋತ್ಪಾದನೆ ನಿಮರ್ೂಲನೆಯಾಗಿಲ್ಲ. ಬದಲಾಗಿ ಯುರೋಪ್ ರಾಷ್ಟ್ರಗಳಿಗೂ ಬಾಂಬಿಡುವಷ್ಟರ ಮಟ್ಟಿಗೆ ಭಯೋತ್ಪಾದಕರು ಅರ್ಥಾತ್ ಐಸಿಸ್ ಉಗ್ರರು ಬೆಳೆದುನಿಂತಿದ್ದಾರೆ. ಭಯೋತ್ಪಾದಕರನ್ನು ಬುಡಸಮೇತ ನಿರ್ನಾಮ ಮಾಡದೇ ಅರೆಬರೆ ಅಜೆಂಡಾ ಈಡೆರಿಸಿಕೊಂಡು ಎದ್ದುಬಂದಿದ್ದಕ್ಕೆ ಆಗುತ್ತಿರುವ ಅನಾಹುತಗಳಿವು.
ಅಷ್ಟಕ್ಕೂ ಶಸ್ತ್ರಾಸ್ತ್ರಗಳಿಲ್ಲದೆ ಉಗ್ರರು ಜಗತ್ತಿನ ನೆಮ್ಮದಿ ಕೆಡಿಸಲು ಸಾಧ್ಯವಿಲ್ಲ. ಹಾಗಾದ್ರೇ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರೋದು ಯಾರು..? ಮುಸ್ಲೀಂ ರಾಷ್ಟ್ರಗಳು ವೆಪನ್ಸ್ ತಯಾರಿಸೋದಿಲ್ಲ ಅಂದಮೇಲೆ, ವೆಪನ್ಸ್ ತಯಾರಿಸುವ ರಾಷ್ಟ್ರಗಳಾದ ಇಸ್ರೇಲ್, ಅಮೆರಿಕಾ, ಚೀನಾದ ಮೇಲೆ ಅನುಮಾನಪಡಲೇಬೇಕಲ್ವೇ..? ಖಾತ್ರಿಯಿಲ್ಲದಿದ್ದರೂ ತೊಟ್ಟಿಲು ತೂಗಿ ಮಗುವನ್ನು ಚಿವುಟುವ ಕೆಲಸವನ್ನು ಈ ರಾಷ್ಟ್ರಗಳು ಮಾಡುತ್ತಿವೆ. ಅದಕ್ಕೆ ಸೋವಿಯತ್ ಒಕ್ಕೂಟವನ್ನು ಮಣಿಸಲು ಅಫ್ಘನ್ನರನ್ನು ಬಳಸಿಕೊಂಡ ಅಮೆರಿಕಾದ ತಂತ್ರಗಾರಿಕೆಗಳೇ ತಾಜಾ ನಿದರ್ಶನ. ಇವೆಲ್ಲ ಅನುಮಾನಗಳಿಗೆ ಕಳಶವಿಟ್ಟಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಿ20 ರಾಷ್ಟ್ರಗಳು ಸೇರಿದಂತೆ ಒಟ್ಟು ನಲವತ್ತು ರಾಷ್ಟ್ರಗಳು ಉಗ್ರರಿಗೆ ಹಣಕಾಸು ಒದಗಿಸುತ್ತಿದೆ ಎಂದಿದ್ದರು.
ಭಯೋತ್ಪಾದಕರನ್ನು ಮಣಿಸಲು ಯುದ್ಧ ಅನಿವಾರ್ಯ ನಿಜ, ಅವರ ಮೇಲೆ ದಾಳಿ ಮಾಡಲೇಬೇಕು. ಆದರೆ ಅದು ಸಂಪೂರ್ಣವಾಗಿರಬೇಕು. ಬುಡಸಮೇತ ಉಗ್ರರನ್ನು ಮಟ್ಟಹಾಕಿ ಅವರು ಕಬ್ಜಾ ಮಾಡಿಕೊಂಡ ರಾಷ್ಟ್ರಗಳನ್ನು ಪುನರುತ್ಥಾನ ಮಾಡಬೇಕು. ಆಗ ಮಾತ್ರ ಭಯೋತ್ಪಾಧನೆಯ ವಿರುದ್ಧದ ಹೋರಾಟಕ್ಕೆ ಅರ್ಥ ಬರುತ್ತದೆ. ಪರಿಪೂರ್ಣವೆನಿಸುತ್ತದೆ. ಇಲ್ಲವೆಂದರೇ ಜಗತ್ತಿನಾದ್ಯಂತ ಭಯೋತ್ಪಾದಕರ ಹಾವಳಿ ಹೆಚ್ಚುತ್ತದೆ. ಇವುಗಳ ಜೊತೆಗೆ ಭಯೋತ್ಪಾದಕ ಸಂಘಟನೆಗಳಿಗೆ ಹರಿದು ಬರುತ್ತಿರುವ ಹಣಕಾಸು ನೆರವು ಮತ್ತು ಸಂಪನ್ಮೂಲಗಳಿಗೆ ಕತ್ತರಿ ಹಾಕದ ಹೊರತು ಉಗ್ರರ ದಮನ ಸಾಧ್ಯವಿಲ್ಲ. ಜೊತೆಗೆ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣ, ಅಂತಜರ್ಾಲದಂಥ ಸಂವಹನ ಮಾಧ್ಯಮ ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಉಗ್ರರು ದುರ್ಬಳಕೆ ಮಾಡಿಕೊಳ್ಳದಂತೆ ಕಡಿವಾಣ ಹಾಕಬೇಕು. ತೊಟ್ಟಿಲು ತೂಗಿ ಮಗು ಚಿವುಟುವ ಕೆಲಸವಾದರೇ ಉಗ್ರರು ಮೆರೆಯುತ್ತಲೇ ಇರುತ್ತಾರೆ. ಅಮಾಯಕರು ಸಾವಿಗೀಡಾಗುತ್ತಲೇ ಇರುತ್ತಾರೆ.
- ರಾ ಚಿಂತನ್
POPULAR STORIES :
ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…
87+ರ ಯುವತಿ, ಇಳೀ ವಯಸ್ಸಲ್ಲೂ ಮಾಡ್ತಾರೆ ಮಾರ್ಷಲ್ ಆರ್ಟ್ಸ್..!
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!
ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!
ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?
ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?
ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!