ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರಾ ಸೆಕ್ಟರ್ ಬಳಿ ಪಾಕಿಸ್ತಾನ ಗಡಿ ನಿಯಮ ಉಲ್ಲಂಘನೆ ಮಾಡಿದ್ದು , ಪಾಕ್ ನಡೆಸಿದ ಗುಂಡಿನ ದಾಳಿಗೆ ಓರ್ವ ಗಡಿ ಭದ್ರತಾ ಪಡೆಯ (ಬಿಎಸ್ ಎಫ್ ನ) ಸೈನಿಕ ಹುತಾತ್ಮನಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಆರ್ ಎಸ್ ಪುರ ಬಳಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಫೈರಿಂಗ್ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಜಾರ್ಖಂಡ್ ನ ಬಿಎಸ್ ಎಫ್ ಯೋಧ ಸೀತಾರಾಮ್ ಉಪಾದ್ಯಾಯ ಸಾವನ್ನಪ್ಪಿದ್ದಾರೆ. ಕದನ ವಿರಾಮದ ಬಳಿಕ ಸುತ್ತಲಿನ 3 ಕಿ ಮೀ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.