ಬೃಹನ್ನಾಟಕದ ಬಳಿಕ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ.
ಮಾಜಿ ಅಟಾರ್ನಿ ಜನರಲ್ ರೋಹ್ಟಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ನಾಳೆ ಬೆಳಗ್ಗೆ 9 ಗಂಟೆಗೆ ಬಿ ಎಸ್ ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವರು.
ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಬಹುಮತ ಸಾಭೀತಿಗೆ 10 ದಿನಗಳ ಅವಕಾಶ ನೀಡಿದ್ದಾರೆ. ಬಹುಮತ ಸಾಭೀತು ಪಡಿಸಿದಲ್ಲಿ ಬಿಜೆಪಿ ಸರ್ಕಾರ ಮುಂದುವರೆಯಲಿದೆ. ಇಲ್ಲದಿದ್ದರೆ ಬಿ ಎಸ್ ವೈ ಮುಖ್ಯಮಂತ್ರಿ ಪಟ್ಟ 10 ದಿನಕ್ಕೆ ಮಾತ್ರ ಸೀಮಿತವಾಗಲಿದೆ.