ಹೆಸರಾಂತ ಮೈನಿಂಗ್ ಕಂಪನಿಯಾದ ಪ್ರೇರಣಾ ಟ್ರಸ್ಟ್ ಗೆ ಪರವಾನಗಿ ನೀಡುವ ಕುರಿತಾಗಿ ಕಿಕ್ ಬ್ಯಾಕ್ ಪಡೆದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಸಿಬಿಐ ವಿಷೇಶ ನ್ಯಾಯಾಲಯ ಬುಧವಾರ ಕ್ಲೀನ್ ಚಿಟ್ ನೀಡಿದೆ. ಇದರಿಂದಾಗಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಇತರೆ ಎಲ್ಲಾ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಸಿಬಿಐನ ವಿಷೇಶ ಕೋರ್ಟ್ ನ್ಯಾಯಾಧೀಶರಾದ ಆರ್.ಬಿ. ಧರ್ಮ ಗೌಡರ್ ತೀರ್ಪು ಪ್ರಕಟಿಸಿದ್ದು, ಬಿಎಸ್‍ವೈ ವಿರುದ್ದದ ಪ್ರೇರಣಾ ಟ್ರಸ್ಟ್ ಗೆ ಗಣಿಗಪ್ಪ ಪಡೆದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಸಿಬಿಐ ವಿಷೇಶ ಕೋರ್ಟ್ ಅಂತಿಮ ತೀರ್ಪು ಹೊರಡಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಂದಾಲ್ ಗ್ರೂಪ್‍ನ ಸೌತ್‍ವೆಸ್ಟ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ಮಂಜೂರು ಮಾಡಿದ್ದರು. ಈ ವೇಳೆ ಜಿಂದಾಲ್ ಕಂಪನಿಯು 2006ರ ಮಾರ್ಚ್‍ನಿಂದ 2011ರ ವರೆಗೂ ಯಡಿಯೂರಪ್ಪ ಪುತ್ರನ ಒಡೆತನದ ಕಂಪನಿಗೆ ಹಣ ಸಂದಾಯ ಮಾಡಲಾಗಿತ್ತು. ನಂತರ ಆ ಹಣವನ್ನು ಪ್ರೇರಣಾ ಟ್ರಸ್ಟ್‍ಗೆ ಸಂದಾಯ ಮಾಡಲಾಗಿದೆ. ಮುಖ್ಯ ಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪನವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡಲಾಗಿತ್ತು ಎಂಬ ಆರೋಪದಡಿ ಬಿಎಸ್‍ವೈ ವಿರುದ್ದ ದೂರು ದಾಖಲಾಗಿದ್ದು, ಈ ಕುರಿತಾಗಿ ಅಂದು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಇದೀಗ ಈ ಪ್ರಕರಣ ಕುರಿತಂತೆ ಯಡಿಯೂರಪ್ಪ ದೋಷಮುಕ್ತರಾಗಿದ್ದಾರೆ.
Like us on Facebook The New India Times
POPULAR STORIES :
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!