ಹಾಲಿ ಗೃಹಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿನಿಧಿಸೋ ಕ್ಷೇತ್ರ ಬಿಟಿಎಂ ಲೇಔಟ್ ( ಕ್ಷೇತ್ರದ ಸಂಖ್ಯೆ 172) ಇದು ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ. ಕಲ್ಲಸಂದ್ರ, ಅಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, , ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ ಈ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳು.

ಬಿಜೆಪಿಯ ಎನ್ ಸುಧಾಕರ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದ ರೆಡ್ಡಿಯವರು ಎಲ್ಲರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ನಾಲ್ಕು ಬಾರಿ ಜಯನಗರ ಕ್ಷೇತ್ರದಿಂದ ಜಯಶಾಲಿಯಾಗಿದ್ದ ಇವರು ಕ್ಷೇತ್ರ ಪುನರ್ವಿಂಗಡಣೆ ತರುವಾಯ ಬಿಟಿಎಂ ಲೇಔಟ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು 69712ಮತಗಳನ್ನು ಪಡೆದಿದ್ದರು. ಬಿಜೆಪಿಯ ಸುಧಾಕರ್ 20664ಮತಗಳನ್ನು ಪಡೆದಿದ್ರು.

ಇವರು ತಮ್ಮ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿಸಿದ್ದಾರೆ ಎನ್ನೋದು ಕ್ಷೇತ್ರವನ್ನೊಮ್ಮೆ ಸುತ್ತಾಡಿದರೆ ಸಾಕಾಗುತ್ತದೆ. ಕೋರಮಂಗಲದ ಸ್ಯಾನಟರಿ ಸರಿ ಪಡಿಸಲಾಗಿದೆ. ಬೋವಿ ಕಾಲೋನಿಯಲ್ಲಿ ಮನೆಕಟ್ಟಿಸಿ ಕೊಡಲಾಗಿಸೆ. ರಸ್ತೆ, ಫುಟ್ ಪಾತ್, ಪಾರ್ಕ್, ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯಾಗಿದೆ.
ಹೇಳಿಕೊಳ್ಳುವಂತಹ ಸಮಸ್ಯೆಗಳೇನು ಕಂಡುಬರುವುದಿಲ್ಲ.







