ಅಬ್ಬಾ…ಎಂಥೆಂಥಾ ಜನ ಇರ್ತಾರೆ..!? ಏನೆಲ್ಲಾ ದಾಖಲೆಗಳು ಆಗ್ತಾವೆ…? ಇಲ್ಲೊಬ್ಬ ಬರ್ಗರ್ ತಿಂದು ದಾಖಲೆ ನಿರ್ಮಿಸಿದ್ದಾನೆ…!
ಈತ ವಿಸ್ ಕಾನ್ ಸಿನ್ ನ ರಿಟೈರ್ ಪ್ರಿನ್ಸ್ ಗಾರ್ಡ್. ಹೆಸರು ಡಾನ್ ಗೊರ್ಸ್ಕೆ. ವಯಸ್ಸು 64…! ಈತ ಬರ್ಗರ್ ಪ್ರಿಯ. ದಿನಕ್ಕೆ ಒಂದಾದರೂ ಬರ್ಗರ್ ಬೇಕೇ ಬೇಕು. ಇದುವರೆಗೆ ಸುಮಾರು 30 ಸಾವಿರ ಬರ್ಗರ್ ಗಳನ್ನು ತಿಂದು ಗಿನ್ನಿಸ್ ಪುಸ್ತಕದಲ್ಲಿ ಹೆಸರು ಬರೆಸಿಕೊಂಡಿದ್ದಾನೆ.
1972ರ ಮೇ 17ರಿಂದ ಬರ್ಗರ್ ತಿನ್ನೋದನ್ನು ತನ್ನ ಹವ್ಯಾಸವಾಗಿ ಬೆಳೆಸಿಕೊಂಡಿದ್ದ. ತಾನು ತಿಂದ ಬರ್ಗರ್ ಬಾಕ್ಸ್ ಗಳನ್ನು ಮತ್ತು ರಿಸಿಪ್ಟ್ ಗಳನ್ನು ಹಾಗೇ ಜೋಪಾನವಾಗಿಟ್ಟುಕೊಂಡಿದ್ದಾನೆ…! ಜೊತೆಗೆ ಕ್ಯಾಲೆಂಡರ್ ನಲ್ಲೂ ದಾಖಲು ಮಾಡಿಟ್ಟುಕೊಂಡಿದ್ದಾನೆ...! ಈತನನ್ನು ಗಿನ್ನಿಸ್ ರೆಕಾರ್ಡ್ ನವರು 2016ರಲ್ಲಿಗುರುತಿಸಿದ್ರು. ಆಗ ಈತ 28, 788 ಬರ್ಗರ್ ತಿಂದಿದ್ನಂತೆ..!
ಹೀಗೆ ಬರ್ಗರ್ ಪ್ರಿಯತೆ ಗಿನ್ನಿಸ್ ಪುಸ್ತಕದಲ್ಲಿ ಹೆಸರು ದಾಖಲಾಗುವಂತೆ ಮಾಡಿದೆ. ಹೀಗೆ ನೀವು ಏನಾದ್ರು ತಿಂದು ರೆಕಾರ್ಡ್ ಮಾಡ್ತೀರ ನೋಡಿ…!?