ಬೆಂಗಳೂರು ನಗರದ 179 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇಂದು ಮತ್ತು ನಾಳೆ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಮೂರನೇ ಘಟಕದಿಂದ ಸುಮಾರು 330 ಎಂಎಲ್‌ಡಿ ಹಾಗೂ ನಾಲ್ಕನೇ ಘಟಕ ಎರಡನೇ ಹಂತದಿಂದ ಸುಮಾರು 550 ಎಂಎಲ್‌ಡಿ ಯಷ್ಟು ನೀರು ಸರಬರಾಜು ಮಾಡುವ ಯಂತ್ರಗಾರಗಳು ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ನಗರದ ಕೆಲ ಪ್ರದೇಶದಲ್ಲಿ ಇಂದು & ನಾಳೆ ನೀರನ್ನು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ ಮತ್ತ ಸುತ್ತಮುತ್ತಲಿನ ಪ್ರದೇಶಗಳು, ಸದಾಶಿವನಗರ, ಪ್ಯಾಲೆಸ್ ಗುಟ್ಟಳ್ಳಿ, ಆರ್.ಎಂ.ವಿ. 2ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಆರ್.ಟಿ.ನಗರ, ಜಿ.ಕೆ.ವಿ.ಕೆ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಹೆಬ್ಬಾಳ, ದಿಣ್ಣೂರು, ಗಂಗಾನಗರ & ಸುತ್ತಮುತ್ತಲಿನ ಪ್ರದೇಶಗಳು, ಚಿಕ್ಕಪೇಟೆ, ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಧರ್ಮರಾಯ ಸ್ವಾಮಿ ದೇವಸ್ಥಾನ, ಆವಿನ್ಯೂ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಕಸ್ತೂರಬಾ ರಸ್ತೆ, ಶಿವಾಜಿ ನಗರ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BWSSB ಮಾಹಿತಿ ನೀಡಿದೆ.