ಮೈಸೂರು ನಗರದಲ್ಲಿ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಲಿದೆ. KRS ರಸ್ತೆಯಲ್ಲಿರುವ PKTB ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಲಿದೆ. 350 ಹಾಸಿಗೆಯ ಫೆರಿಫೆರಲ್ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ಸರ್ಕಾರ ಅಸ್ತು ಎಂದಿದ್ದು, ಆಸ್ಪತ್ರೆ ನಿರ್ಮಾಣಕ್ಕೆ PKTB ಆವರಣದಲ್ಲಿ 7 ಎಕರೆ ಜಾಗ, 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕ L.ನಾಗೇಂದ್ರ ಪ್ರಯತ್ನ ಫಲವಾಗಿ ಕ್ಯಾನ್ಸರ್ ಆಸ್ಪತ್ರೆಗೆ ಅನುಮೋದನೆ ಸಿಕ್ಕಿದೆ. ಅಕ್ಟೋಬರ್ 27ರಂದು ಸಂಸದ ಪ್ರತಾಪ್ ಸಿಂಹ ಪತ್ರದ ಮೂಲಕ ಆರೋಗ್ಯ ಸಚಿವರಿಗೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಸಂಬಂಧ ಮನವಿ ಮಾಡಿದ್ರು. ಇನ್ನ ಸಂಸದ ಪ್ರತಾಪ್ ಸಿಂಹ ಮನವಿಗೆ ಆರೋಗ್ಯ ಸಚಿವರು ಮತ್ತು ರಾಜ್ಯ ಸರ್ಕಾರ ಸ್ಪಂದಿಸಿದೆ.